Urfi Javed: ವಿಚಿತ್ರವಾಗಿ ತುಟಿ & ಮುಖ ಊದಿಸಿಕೊಂಡ ಉರ್ಫಿ ಜಾವೇದ್, ಇಲ್ಲಿದೆ ವೈರಲ್ ವಿಡಿಯೋ!

Urfi Javed: ಸೋಷಿಯಲ್ ಮೀಡಿಯಾದಲ್ಲಿ ಜನರನ್ನು ಆಕರ್ಷಿಸುವುದಕ್ಕೆ ಕೆಲವರು ಕೆಲವೊಂದು ಚಿತ್ರವಿಚಿತ್ರವಾದ ಸರ್ಕಸ್‌ಗಳನ್ನು ಮಾಡುತ್ತಾರೆ. ಈ ರೀತಿ ಚಿತ್ರ - ವಿಚಿತ್ರವಾಗಿ ಮಾಡುವವರಲ್ಲಿ ಉರ್ಫಿ ಜಾವೇದ್ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇದೀಗ ಉರ್ಫಿ ಜಾವೇದ್ ಅವರು ಅಂದ - ಚಂದವಾಗಿ ಕಾಣಿಸಿಕೊಳ್ಳಲು ಹೋಗಿ ತುಟಿಯನ್ನು ಊದಿಸಿಕೊಂಡಿದ್ದಾರೆ. ಇದೀಗ ಈ ವಿಚಿತ್ರ ವಿಡಿಯೋವನ್ನೂ ಸೋಷಿಯಲ್ ಮೀಡಿಯಾದಲ್ಲಿ ಉರ್ಫಿ ಅವರೇ ಹಂಚಿಕೊಂಡಿದ್ದು ತುಂಟಿ ಸುಂದರ ಮಾಡಿಕೊಳ್ಳಲು ಹೋದೆ ಫ್ರೆಂಡ್ಸ್‌ ಆದರೆ ಎಡವಟ್ಟು ಆಗೋಯ್ತು. ಎಲ್ಲಾ ಸರಿ ಹೋಗುತ್ತೆ ಅಂತ ಹೇಳಿದ್ದಾರೆ. ಈ ವಿಡಿಯೋ ನೋಡಿ ಜನ ನಗಬೇಕೋ ಅಥವಾ ಅಳಬೇಕೋ ಅಂತ ಕೇಳುತ್ತಿದ್ದಾರೆ.

ಉರ್ಫಿ ಅವರು ಮೊದಲಿನಿಂದಲೂ ಕೆಲವೊಂದು ಚಿತ್ರ ವಿಚಿತ್ರ ವೇಷಭೂಷಣಗಳಿಂದಲೇ ಫೇಮಸ್. ಅದೂ ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಜನರನ್ನು ಸೆಳೆಯುವುದಕ್ಕೆ ಹಾಗೂ ವೈರಲ್ ಆಗುವ ಆಸೆಯಿಂದ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲ್ಲೇ ಇರುತ್ತಾರೆ. ಇದೀಗ ತಮ್ಮ ತುಟಿಯ ಚಂದವನ್ನು ಹೆಚ್ಚಿಸಿಕೊಳ್ಳಬೇಕು ಅಂತಾ ಹೋಗಿ ಅದನ್ನು ವಿರೂಪ ಮಾಡಿಕೊಂಡಿದ್ದಾರೆ. ದೇವರು ಕೊಟ್ಟ ಒಳ್ಳೆಯ ಸೌಂದರ್ಯವನ್ನು ಈ ರೀತಿ ಎಲ್ಲಾ ಹಾಳು ಮಾಡಿಕೊಳ್ಳಬೇಕಿತ್ತೇ ಅಂತ ಜನ ಪ್ರಶ್ನೆ ಮಾಡುತ್ತಿದ್ದಾರೆ. ಇಷ್ಟಕ್ಕೂ ಉರ್ಫಿ ಮಾಡಿಕೊಂಡ ಎಡವಟ್ಟೇನು ಎನ್ನುವುದನ್ನ ಮುಂದೆ ನೋಡೋಣ.

Urfi Javed s lips and face are strangely swollen video goes viral

ಬಾಲಿವುಡ್‌ ಹಾಗೂ ಕೆಲವು ಚಿತ್ರರಂಗದ ಕೆಲವು ನಟ - ನಟಿಯರು ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡಿದ್ದಾರೆ ಎನ್ನುವಂತಹ ಸುದ್ದಿಗಳು ಆಗಾಗ ವೈರಲ್ ಆಗುವುದು ಅಥವಾ ಚರ್ಚೆ ಆಗುವುದು ಇದೆ. ಆದರೆ ಬಹಳಷ್ಟು ಜನ ಸೆಲೆಬ್ರಿಟಿಗಳು ಹಂಚಿಕೊಳ್ಳುವುದಿಲ್ಲ. ಅದನ್ನು ಒಪ್ಪಿಕೊಂಡಿರುವುದು ತೀರ ಕಡಿಮೆ. ಆದರೆ ಉರ್ಫಿ ಅವರು ಲೈವ್ ವಿಡಿಯೋವನ್ನೇ ಹಂಚಿಕೊಂಡಿದ್ದು. ತುಂಟಿ ಸಣ್ಣ ಮಾಡಿಕೊಳ್ಳಲು ಹೋದೆ ಇನ್ನೇನೋ ಆಗೋಯ್ತು ಫ್ರೆಂಡ್ಸ್‌ ಎಂದಿದ್ದಾರೆ. ಇದಕ್ಕೆ ಜನ ಬೇಗ ಹುಷಾರಾಗಿ ಎನ್ನುವುದರೊಂದಿಗೆ ಇದೆಲ್ಲಾ ಬೇಕಿತ್ತಾ ಅಂತಲೂ ಪ್ರಶ್ನೆ ಮಾಡುತ್ತಿದ್ದಾರೆ.

ಉರ್ಫಿ ಜಾದವ್ ಮಾಡಿಕೊಂಡ ಎಡವಟ್ಟೇನು ?

ಉರ್ಫಿ ಅವರು ತಮ್ಮ ತುಟಿಗೆ ಸಣ್ಣ ಚಿಕಿತ್ಸೆ ಮಾಡಿಕೊಂಡಿದ್ದಾರೆ. ಅದು ಎಡವಟ್ಟಿನಲ್ಲಿ ಕೊನೆಯಾಗಿದೆ. ನನ್ನ ಫಿಲ್ಲರ್‌ಗಳು ಸರಿಯಾಗಿ ಇರಲಿಲ್ಲ. ಅಲ್ಲದೇ ಮಿಸ್‌ಪ್ಲೇಸ್ಡ್‌ ಆಗಿದ್ದವು. ಇದರಿಂದ ನನ್ನ ನಗುವಿನ ಗೆರೆಗಳು ಹಾಗೂ ತುಟಿ ಫಿಲ್ಲರ್‌ಗಳನ್ನು ಕರಗಿಸಲು ಮುಂದಾದೆ. ಇದು ತುಂಬಾ ಕಷ್ಟದ ಕೆಲಸವಾಗಿತ್ತು. ಕೆಲವೇ ಕ್ಷಣಗಳಲ್ಲಿ ನನ್ನ ತುಟಿ ಹಾಗೂ ಮುಖವೆಲ್ಲವೂ ಊದಿಕೊಂಡಿದೆ. ಫ್ಯಾನ್ಸಿ ವೈದ್ಯರ ಬಳಿ ಹೋಗಿ ಈ ರೀತಿ ಆಗಿದೆ. ಮುಂದಿನ ಬಾರಿ ಒಳ್ಳೆಯ ವೈದ್ಯರ ಬಳಿ ಹೋಗಲಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಬೇಗ ಚೇತರಿಸಿಕೊಳ್ಳಿ ಎಂದು ಅವರು ಹಲವು ಸಲಹೆ ನೀಡಿದ್ದಾರೆ. ಬೇಗ ಗುಣಮುಖರಾಗಿ ಬನ್ನಿ ದೇವರು ನಿಮ್ಮನ್ನು ಆಶೀರ್ವದಿಸಲಿ ❤️🙏 ಮೊದಲಿಗೆ ನಾನು ಅದನ್ನು ಫಿಲ್ಟರ್ ಎಂದು ಭಾವಿಸಿದೆ. ಆದರೆ, ಇದು ನಿಜವಾಗಿಯೂ ಆಗಿದೆ. ಇದು ನಿಜಕ್ಕೂ ಆಘಾತಕಾರಿಯಾಗಿದೆ ಎಂದೇ ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+