ಯುಪಿಎಸ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟ, ತೆಲಂಗಾಣಕ್ಕೆ ಮೊದಲ Rank
ಕೇಂದ್ರ ಲೋಕಸೇವಾ ಆಯೋಗ 2017ರ ಸಾಲಿನ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಒಟ್ಟು 990 ವಿದ್ಯಾರ್ಥಿಗಳು ನಾಗರೀಕ ಸೇವೆಗೆ ಅರ್ಹತೆ ಗಿಟ್ಟಿಸಿದ್ದಾರೆ.
ಪರೀಕ್ಷೆಗಳು ಕಳೆದ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ನಡೆದಿತ್ತು. ಪರೀಕ್ಷೆಯಲ್ಲಿ ಅರ್ಹತೆ ಗಿಟ್ಟಿಸಿದವರನ್ನು ಐಎಎಸ್,
ಐಪಿಎಸ್ ಮತ್ತು ಐಎಫ್‌ಎಸ್ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ತೆಲಂಗಾಣದ ದುರಿಶೆಟ್ಟಿ ಅನುದೀಪ್ ಅವರು ಈ ಬಾರಿಯ ಯುಪಿಎಸ್‌ಸಿ ಟಾಪರ್ ಆಗಿದ್ದು, ಎರಡನೇ ಸ್ಥಾನವನ್ನು ಅನು ಕುಮಾರಿ ಹಾಗೂ ಮೂರನೇ ಸ್ಥಾನವನ್ನು ಸಚಿನ್ ಗುಪ್ತಾ ಪಡೆದಿದ್ದಾರೆ.
476 ಸಾಮಾನ್ಯ, ಹಿಂದುಳಿದ ವರ್ಗದ 275, ಪರಿಶಿಷ್ಟ ಜಾತಿಯ 75, ಪರಿಶಿಷ್ಟ ಪಂಗಡದ 74 ಅಭ್ಯರ್ಥಿಗಳು ಈ ಬಾರಿ ಪರೀಕ್ಷೆಯಲ್ಲಿ ಅರ್ಹತೆ ಗಿಟ್ಟಿಸಿದ್ದಾರೆ.












Click it and Unblock the Notifications