UPI Down: ಇಂದು ದಿಢೀರ್ ಕೈಕೊಟ್ಟ UPI ಪೇಮೆಂಟ್ ವ್ಯವಸ್ಥೆ: ಜನರಿಗೆ ಅಡಚಣೆ, ವಹೀವಾಟು ಕುಸಿತ..
ನವದೆಹಲಿ, ಏಪ್ರಿಲ್ 12: ಇಂದಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಒಂದಿದ್ದರೆ ಸಾಕು. ಕೂತಲ್ಲೇ ಎಲ್ಲವು ಬಂದು ಬಿಡುತ್ತೆ. ಅದಕ್ಕಾಗಿ ಏಕೀಕೃತ ಪಾವತಿ ಇಂಟರ್ಫೇಸ್ (UPI) ಆಧಾರಿತ ಡಿಜಿಟಲ್ ಪೇಮೆಂಟ್ ಮಾಡಬೇಕಾಗುತ್ತದೆ. ಈ ಯುಪಿಐ ಸೇವಾ ವ್ಯವಸ್ಥೆ ಕೈ ಕೊಟ್ಟರೆ ಅದೆಷ್ಟೋ ವಹೀವಾಟುಗಳಿಗೆ ಅಡಚಣೆ ಉಂಟಾಗುತ್ತಿವೆ. ಇಂತದ್ದೆ ಸಮಸ್ಯೆ ಶನಿವಾರ ಏಪ್ರಿಲ್ 12ರಂದು ಭಾರತೀಯ ಜನರು ಎದುರಿಸಿದ್ದಾರೆ ಎಂದು ವರದಿ ಆಗಿದೆ.
ಹೌದು UPI ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ವಿವಿಧ ಡಿಜಿಟಲ್ ಪೇಮೆಂಟ್ ಆಫ್ ಬಳಸುವವರು ಸಮಸ್ಯೆ ಎದುರಿಸಿದ್ದಾರೆ. ಅವರಿಗೆ ತಾತ್ಕಾಲಿಕ ಅಡಚರಣೆ ಎದುರಾಗಿದೆ. ಭಾನುವಾರ ಮಧ್ಯಾಹ್ನ 11 ಗಂಟೆ ಆಸುಪಾಸಿಗೆ ಯುಪಿಐ ಹಣ ಪಾವತಿ ವಿಧಾನದಲ್ಲಿ ಸಮಸ್ಯೆ ಉಂಟಾಯಿತು. ಇದೂ ಸೇರಿ ಒಂದೇ ತಿಂಗಳಲ್ಲಿ ನಾಲ್ಕು ಬಾರಿ ಜನರು UPI ಅಡಚಣೆ ಎದುರಿಸಿದಂತಾಗಿದೆ. ವಿದ್ಯುತ್ ಪಾವತಿ ಅಡಚಣೆ ಕುರಿತು ಸಾಮಾಜಿಕ ಜಾಲತಾಣದಲ್ಲಿ #UPIDown, #UPIOutage ಹ್ಯಾಷ್ ಟ್ಯಾಗ್ ಟ್ರೆಡಿಂಗ್ ಆಗಿವೆ.

ಮೂಲಗಳ ಪ್ರಕಾರ, ಬೆಳಗ್ಗೆ 11:26 ಸುಮಾರಿಗೆ UPI ವಹಿವಾಟುಗಳಲ್ಲಿನ ಸಮಸ್ಯೆ ಕಂಡು ಬಂತು. ಎಷ್ಟೇ ಭಾರಿ ಪ್ರಯತ್ನಿಸಿದರೂ ಹಣ ಪಾವತಿ ಆಗಿಲ್ಲ. ಇದರಿಂದ ಜನರು ಬೇಸತ್ತಿದ್ದಾರೆ. ಕಾರಣ ಡಿಜಿಟಲ್ ಪೇಮೆಂಟ್ ಆಪ್ ಬಳಕೆ ಮಾಡಲು ಶುರು ಮಾಡಿದಾಗಿನಿಂದ ನಗದು ಕ್ಯಾಶ್ ಜೇಬಿನಲ್ಲಿ ಇಟ್ಟುಕೊಳ್ಳುವ ಸಂಪ್ರದಾಯ ಕಡಿಮೆ ಆಗಿದೆ. ಹೀಗಾಗಿ ಸಮಸ್ಯೆ ಎದುರಿಸುವಂತಾಗಿದೆ.
ಬೆಳಗ್ಗೆ 11:40 ಗಂಟೆಗೆ ಈ ಸಮಸ್ಯೆ ದೇಶವ್ಯಾಪಿ ವಿಸ್ತರಿಸಿತು. ಮಹಾನಗರಗಳಲ್ಲಿ ಯುಪಿಐ ಸಮಸ್ಯೆ ತಲೆದೂರಿದರು. ಕೆಲವೇ ನಿಮಿಷಗಳಲ್ಲಿ ಡಿಜಿಟಲ್ ಪಾವತಿಗಳು ವಿಫಲವಾದ ಬಗ್ಗೆ 222 ಕ್ಕೂ ಹೆಚ್ಚು ವರದಿ ಆಗಿವೆ. ಇದೆಲ್ಲ ಗೊತ್ತಾಗುತ್ತಿದ್ದಂತೆ ಕೂಡಲೇ UPI ವ್ಯವಸ್ಥೆಯಲ್ಲಿ ಉಂಟಾದ ಸಮಸ್ಯೆ ಸರಿಪಡಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಮುಂದಾಯಿತು. ಮಧ್ಯಾಹ್ನ 3.20ರ ಹೊತ್ತಿಗೆ ಸಮಸ್ಯೆ ನಿವಾರಣೆ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ದಿಢೀರ್ ತಾಂತ್ರಿಕ ಸಮಸ್ಯೆ: NPCI ಹೇಳಿದ್ದೇನು?
ಎದುರಾದ ಮಧ್ಯಂತರ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿದ ಎನ್‌ಸಿಪಿಐ ಕೆಲವು ಬಾರಿ ಇಂತಹ ದಿಢೀರ್ ಸಮಸ್ಯೆ ಎದುರಿಸಿದೆ. ಇದೆಲ್ಲವು ಯುಪಿಐ ಆಧಾರಿತ ವಹಿವಾಟಿನ ಕುಡಿತಕ್ಕೆ ಕಾರಣವಾಗಿದೆ. ಈ ಸಂಬಂಧ NPCI ತನ್ನ ಸಾಮಾಜಿಕ ಜಾಲತಾಣ ಎಕ್ಸ್ ಹ್ಯಾಂಡಲ್‌ನಲ್ಲಿ ಪ್ರತಿಕ್ರಿಯಿಸಿದೆ. '' ಎದುರಾದ ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದೇವೆ. ಮಧ್ಯಂತರ ತಾಂತ್ರಿಕ ಸಮಸ್ಯೆ ಎದುರಾಗಿದೆ. ಸದ್ಯ ಅನಾನುಕೂಲತೆ ಉಂಟಾಗಿದೆ. ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಿ, ತತಕ್ಷಣಕ್ಕೆ ನಿಮಗೆ ಪರಿಹಾರ ಅಪ್ಡೇಟ್ ತಿಳಿಸುತ್ತೇವೆ'' ಎಂದು ಪೋಸ್ಟ್ ಮಾಡಿದೆ.

ಪೇಟಿಎಂ, ಗೂಗಲ್ ಪೇ ಮತ್ತು ಫೋನ್‌ಪೇ, ಭೀಮ್ ಆಫ್ ಸೇರಿದಂತೆ ಅನೇಕ ಪೇಮೆಂಟ್ ಆಫ್‌ಗಳಿಂದ ಹಣ ಪಾವತಿ ಆಗಿಲ್ಲ. ಹಣ ಪಾವತಿ ವಿಫಲ ಎಂಬ ಸಂದೇಶ, ಸ್ಕ್ರೀನ್ ಸಂದೇಶ ಕಾಣಿಸಿದೆ. ಈ ಪಾವತಿ ವಿಫಲತೆಯನ್ನು ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದೇ ರೀತಿ ಸಾಕಷ್ಟು ವರದಿಗಳು ಬಂದಿವೆ.












Click it and Unblock the Notifications