UPI Payment: ಕೈ ಕೊಟ್ಟ ಯುಪಿಐ ಪೇಮೆಂಟ್, ಪರದಾಡಿದ ಜನರು
ನವದೆಹಲಿ, ಮಾರ್ಚ್ 27: ದೇಶಾದ್ಯಂತ ಬುಧವಾ ರಾತ್ರಿ ಡಿಜಿಟಲ್ ವ್ಯವಹಾರಗಳಲ್ಲಿ ಭಾರೀ ಸಮಸ್ಯೆಗಳು ಕಂಡುಬಂದಿತು. ಯುಪಿಐ ಪಾವತಿ ವ್ಯವಸ್ಥೆಯಲ್ಲಿನ ವ್ಯತ್ಯಯದಿಂದ ಹಲವಾರು ಜನರು ಪರದಾಟ ನಡೆಸಿದರು. ಪೇಮೆಂಟ್ ಮಾಡಲು ಆಗದೇ, ಅದರ ಪ್ರಕ್ರಿಯೆ ಪೂರ್ಣಗೊಳ್ಳದೇ ಜೇಬಿನಲ್ಲಿರುವ ಹಣವನ್ನು ನೀಡಿ ಖರೀದಿ ಮಾಡಬೇಕಾದ ಪರಿಸ್ಥಿತಿ ಉಂಟಾಯಿತು. ಯುಪಿಐ ಬಳಕೆದಾರರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಪೋಸ್ಟ್‌ಗಳನ್ನು ಹಾಕಿಕದರು. ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಬುಧವಾರ ರಾತ್ರಿ 7.30ರ ಬಳಿಕ ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಸಮಸ್ಯೆಯನ್ನು ಜನರು ಅನುಭವಿಸಿದರು. ಸರ್ವರ್ ಡೌನ್ ಆದ ಕಾರಣ ಹಣ ಪಾವತಿ ಆಗುತ್ತಲೇ ಇರಲಿಲ್ಲ. ಇದು ವ್ಯಾಪಾರ, ವಹಿವಾಟುಗಳ ಮೇಲೆ ಪರಿಣಾಮ ಬೀರಿತು. ಜನರು ತಕ್ಷಣ ತಮ್ಮ ಬ್ಯಾಂಕುಗಳನ್ನು ದೂರಿದರು. ಆದರೆ ಬ್ಯಾಂಕುಗಳು ಸರ್ವರ್ ಸಮಸ್ಯೆ ಅಲ್ಲ ಎಂಬುದು 9.30ರ ಬಳಿಕ ತಿಳಿಯಿತು.

ಸಾಮಾಜಿಕ ಜಾಲತಾಣಗಳ ಮಾಹಿತಿ ಪ್ರಕಾರ ಸುಮಾರು ಯುಪಿಐ ಪಾವತಿ ವ್ಯವಸ್ಥೆ ಸುಮಾರು ಒಂದು ಅಥವ ಒಂದೂವರೆ ಗಂಟೆಗಳ ಕಾಲ ಸಮಸ್ಯೆಯಾಗಿತ್ತು. ಯುಪಿಐ ಪಾವತಿ ಮೂಲಕ ಹಣ ನೀಡಿದ್ದೇವೆ ಎಂದು ಜನರು, ಹಣ ಬಂದಿಲ್ಲ ಎಂದು ವ್ಯಾಪಾರಿಗಳ ನಡುವೆ ಮಾತುಕತೆ ನಡೆಯುತ್ತಲೇ ಇತ್ತು. ದೇಶಾದ್ಯಂತ ಸರ್ವರ್ ಡೌನ್ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳು ಬರಲು ಆರಂಭವಾಯಿತು.
ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಪಾವತಿ ವ್ಯವಸ್ಥೆಯ ಉಸ್ತುವಾರಿಯನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ನೋಡಿಕೊಳ್ಳುತ್ತದೆ. ಯುಪಿಐ ಪಾವತಿಯಲ್ಲಿ ಬುಧವಾರ ರಾತ್ರಿ ತಾತ್ಕಾಲಿಕ ಸಮಸ್ಯೆಗಳು ಎದುರಾಗಿತ್ತು, ಬಳಿಕ ಅದನ್ನು ಸ್ಥಿರಗೊಳಿಸಿ ಸಮಸ್ಯೆ ನಿವಾರಿಸಲಾಯಿತು. ರಾತ್ರಿ 9.30ರ ಬಳಿಕ ಯುಪಿಐ ಪಾವತಿ ವ್ಯವಸ್ಥೆ ಕಾರ್ಯಾರಂಭ ಮಾಡಿತು.
"ಎನ್‌ಪಿಸಿಐ ತಾತ್ಕಾಲಿಕ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿತ್ತು. ಇದರಿಂದಾಗಿ ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಅಡಚಣೆ ಉಂಟಾಯಿತು. ಈಗ ಅದನ್ನು ಪರಿಹರಿಸಲಾಗಿದೆ ಮತ್ತು ವ್ಯವಸ್ಥೆ ಎಂದಿನಂತೆ ಕಾರ್ಯ ನಿರ್ವಹಣೆ ಮಾಡುತ್ತಿದೆ. ಜನರಿಗೆ ಆದ ಸಮಸ್ಯೆಗೆ ವಿಷಾದಿಸುತ್ತೇವೆ" ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಲಾಯಿತು.
ಯುಪಿಐ ವ್ಯವಸ್ಥೆಯನ್ನು ಆರ್‌ಬಿಐ ಅಡಿಯಲ್ಲಿ ಬರುವ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಉಸ್ತುವಾರಿ ಮಾಡುತ್ತದೆ ಮತ್ತು ಕಾಲ ಕಾಲಕ್ಕೆ ಅಭಿವೃದ್ಧಿಪಡಿಸುತ್ತದೆ. ಆದರೆ ಬುಧವಾರ ರಾತ್ರಿ ತಾಂತ್ರಿಕ ತೊಂದರೆ ಕಾರಣ ಯಾವುದೇ ಎರಡು ಬ್ಯಾಂಕ್ ಖಾತೆಗಳ ನಡುವೆ ಹಣ ವರ್ಗಾವಣೆ, ಡಿಜಿಟಲ್ ಪೇಮೆಂಟ್, ಬಿಲ್ ಪಾವತಿ ಸೇರಿದಂತೆ ವಿವಿಧ ವ್ಯವಸ್ಥೆಗಳು ಸರಿಯಾಗಿ ಕಾರ್ಯ ನಿರ್ವಹಣೆ ಮಾಡದೆ ಜನರು ಪರದಾಡಿದರು.
ಚಾಮರಾಜಪೇಟೆಯಿಂದ ಸೌತ್ ಎಂಡ್ ವೃತ್ತಕ್ಕೆ ಆಟೋದಲ್ಲಿ ಬಂದ ವಿದ್ಯಾರ್ಥಿನಿ ಮಾನಸ ಡಿಜಿಟಲ್ ಪೇಮೆಂಟ್ ಮಾಡಲು ಹಲವು ಬಾರಿ ಪ್ರಯತ್ನಿಸಿದರು. ಆದರೆ ಹಣ ಪಾವತಿ ಆಗಲಿಲ್ಲ. ಕೊನೆಗೆ ಪರ್ಸ್‌ನಿಂದ ಹಣವನ್ನು ನೀಡಿದರು. ಬಳಿಕ ಯುಪಿಐ ಪಾವತಿ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದರು. ರಾತ್ರಿ 8.15ರ ಸಮಯದಲ್ಲಿ ಆಕೆ ಪೋಸ್ಟ್ ಹಾಕುವಾಗ ದೇಶಾದ್ಯಂತ ಯುಪಿಐ ಪಾವತಿ ಸಮಸ್ಯೆ ಉಂಟಾಗಿದೆ ಎಂದು ಹಲವು ಪೋಸ್ಟ್‌ಗಳನ್ನು ಹಾಕಲಾಗಿತ್ತು.
ವರದಿಗಳ ಪ್ರಕಾರ ರಾತ್ರಿ 7.50ರ ಸುಮಾರಿಗೆ ಯುಪಿಐ ವ್ಯವಹಾರದ ಸಮಸ್ಯೆ ಕುರಿತು 2,500ಕ್ಕೂ ಅಧಿಕ ದೂರುಗಳು ದಾಖಲಾಗಿದ್ದವು. ಗೂಗಲ್‌ಪೇನ 500ಕ್ಕೂ ಅಧಿಕ ಗ್ರಾಹಕರು ಈ ಸಮಸ್ಯೆಯ ಕುರಿತು ಪೋಸ್ಟ್ ಹಾಕಿದರು. ಎಸ್‌ಬಿಐ ಗ್ರಾಹಕ ಸಹಾಯಕ ಕೇಂದ್ರಕ್ಕೆ ಇದೇ ವಿಷಯದಲ್ಲಿ 350ಕ್ಕೂ ಅಧಿಕ ದೂರುಗಳು ಬಂದಿವೆ.
ಬ್ಯಾಂಕ್‌ಗಳ ಸರ್ವರ್ ಸಮಸ್ಯೆಯಾಗಿಲ್ಲ. ಇದು ಯುಪಿಐ ಪಾವತಿಯ ಸಮಸ್ಯೆ ಎಂದು ಬ್ಯಾಂಕುಗಳು ಗ್ರಾಹಕರಿಗೆ ಮಾಹಿತಿ ನೀಡಿದವು. ಹೋಟೆಲ್, ಮಾರುಕಟ್ಟೆಗಳಲ್ಲಿ ಜನರು ಯುಪಿಐ ಮೂಲಕ ಹಣ ಪಾವತಿ ಆಗುತ್ತಿಲ್ಲ ಎಂದು ದೂರುಗಳನ್ನು ಹೇಳಿದರು. ಡಿಜಿಟಲ್ ವಹಿವಾಟನ್ನು ಅಪಾರವಾಗಿ ಅವಲಂಬಿತವಾಗಿರುವ ಕಾಲದಲ್ಲಿ ಈ ಸಮಸ್ಯೆ ಜನರಿಗೆ ಸಂಕಷ್ಟ ತಂದಿತು.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications