UPI Charges Row: ಯುಪಿಐ ಶುಲ್ಕ ಹೇರಿಕೆಯಿಂದ ಗ್ರಾಹಕರಿಗೆ ಹೊರೆ ಎಂದ 'ರಾಗಾ'; ಅಮೆರಿಕಕ್ಕೆ ಲಾಭ ಹೇಗೆ?
ನವದೆಹಲಿ: ನಗದು, ಕಾರ್ಡ್ ರೂಪಗಳಲ್ಲಿ ನಡೆಯುತ್ತಿದ್ದ ವಹಿವಾಟು ನಂತರ ಯುಪಿಐ ರೂಪ ಪಡೆದುಕೊಂಡಿತು. ಭಾರತದ ಮಟ್ಟಿಗೆ ಯುಪಿಐ ಡಿಜಿಟಲ್ ಪಾವತಿ ವ್ಯವಸ್ಥೆ ಸಾಕಷ್ಟು ವೇಗ ಪಡೆಯಿತು. ಇದೀಗ ಈ ಯುಪಿಐ ಪಾವತಿ ಮೇಲೆ ಕೇಂದ್ರ ಸರ್ಕಾರ ಶುಲ್ಕ ನಿಗದಿ ಮಾಡಿದ್ದು, ಸಾಕಷ್ಟು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಿಂದ ನೇರ ಗ್ರಾಹಕರಿಗೆ ಆರ್ಥಿಕ ಹೊರೆ ಆಗಲಿದೆ. ಪ್ರಧಾನಿ ಮೋದಿ ಅಮೆರಿಕಾದೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಹಾಗಾದ್ರೆ ಅಮೆರಿಕಾಕ್ಕೆ ಹೇಗೆ ಲಾಭವಾಗುತ್ತೆ..?
ಸದ್ಯ ಯುಪಿಐ (ಯೂನಿಫೈಡ್ ಪೇಮೆಂಟ್ಸ್ ಇಂಟರ್‍ಫೆಸ್) ನಿರ್ಧಾರ ವಿರುದ್ಧ ಆರೋಪವೇನು? ಕಾರ್ಡ್‌ನಿಂದ ಯುಪಿಐ ಮತ್ತು ಶುಲ್ಕ ಹೇರಿಕೆವರೆಗೆ ಹೇಗೆಲ್ಲ ಬದಲಾವಣೆ ಆಯಿತು? ಎಂದು ನೋಡುವುದಾದರೆ, ಯುಪಿಐಗಿಂತ ಮೊದಲು, ಜನರು ನಗದು ಮತ್ತು ಕಾರ್ಡ್‌ಗಳನ್ನು ಬಳಸುತ್ತಿದ್ದರು. ಯುಪಿಐ ವ್ಯವಸ್ಥೆ ವೀಸಾ, ಮಾಸ್ಟರ್ ಕಾರ್ಡ್‌ಗಳಿಗೆ ಸೆಡ್ಡು ಹೊಡೆಯಿತು. ಅಮೆರಿಕಾ ಮೂಲದ ಕಂಪನಿಗಳ ವೀಸಾ, ಮಾಸ್ಟರ್ ಕಾರ್ಡ್‌ಗಳಿಗೆ ಹೊಡೆತ ಬಿತ್ತು. ನೋಡ ನೋಡುತ್ತಿದ್ದಂತೆ ಯುಪಿಐ ವ್ಯವಸ್ಥೆ ಭಾರತದಲ್ಲಿ ವಿಸ್ತರಣೆ ಆಯಿತು.

ಯುಪಿಐ ಪಾವತಿ ವ್ಯವಸ್ಥೆ ದುಬಾರಿ
ಯುಪಿಐ ಬಂದ ಮೇಲೆ ಭಾರತದಲ್ಲಿ ದೊಡ್ಡ ಮಾರುಕಟ್ಟೆ ಹೊಂದಿದ್ದ ವೀಸಾ, ಮಾಸ್ಟರ್ ಕಾರ್ಡ್‌ಗಳ ಕಂಪನಿಗಳು ನಷ್ಟವನ್ನು ಎದುರಿಸಿದಾಗ ಭಾರತೀಯ ಬ್ಯಾಂಕುಗಳು ಅದರಿಂದ ಲಾಭ ಪಡೆದವು. ಯೂನಿಫೈಡ್ ಪೇಮೆಂಟ್ಸ್ ಇಂಟರ್‍ಫೆಸ್ ಸ್ವದೇಶಿ ಬ್ಯಾಂಕ್‌ಗಳಡಿ ನಡೆಯುವಂತದ್ದು. ಚಿಲ್ಲರೆ ಸಮಸ್ಯೆ ನಿವಾರಿಸಿದ್ದ ವ್ಯವಸ್ಥೆ ಇದೀಗ ದುಬಾರಿ ಆಗಲಿದೆ.
ಭಾರತದ ದೇಶದ ಅತ್ಯಂತ ವೇಗದ ಮತ್ತು ಅಗ್ಗದ UPI ಪಾವತಿ ವಿಧಾನವನ್ನು ವಿದೇಶಗಳಲ್ಲು ಜಾರಿಗೆ ತರಲಾಗಿದೆ. ಅಂತಹ ಪರಿಣಾಮಕಾರಿ, ಹೆಚ್ಚು ಬಳಕೆ ಆಗುವ ಯುಪಿಐ ಪಾವತಿ ಮೇಲೆ ಶುಲ್ಕ ವಿಧಿಸುವುದು ಸರಿಯಲ್ಲ. ಗ್ರಾಹಕರು ರೂ. 2000 ಕ್ಕಿಂತ ಹೆಚ್ಚಿನ ಖರೀದಿಗಳಿಗೆ ಕಾರ್ಡ್‌ಗಳನ್ನು ಬಳಸಬೇಕಾಗುತ್ತದೆ. ಯುಪಿಐ ಪಾವತಿಸಿದರೆ ಶುಲ್ಕ ಬೀಳಲಿದೆ ಎಂದು ಕೇಂದ್ರ ಹೇಳಿದೆ. ಅಲ್ಲದೇ ವ್ಯಾಪಾರಿಗಳಿಗೆ ಶುಲ್ಕ ಭರಿಸಬೇಕು ಎಂದಿದೆ. ಈ ಶುಲ್ಕವನ್ನು ವ್ಯಾಪಾರಿಗಳು ಗ್ರಾಹಕರಿಂದ ಬೇರೆ ಬೇರೆ ರೂಪದಲ್ಲಿ ವಸೂಲಿ ಮಾಡುತ್ತಾರೆ. ನಷ್ಟ ತಪ್ಪಿಸಲು ಉತ್ಪನ್ನಗಳ ಬೆಲೆ ಏರಿಕೆ ಮಾಡಬಹುದು. ಕೇಂದ್ರ ಸರ್ಕಾರದ ನಿರ್ಧಾರದಿಂದ ನೇರ ಜನರಿಗೆ ಹೊರೆ ಆಗಲಿದೆ ಎಂಬ ದೂರುಗಳು ಕೇಳಿ ಬಂದಿವೆ.
ಅಮೆರಿಕಕ್ಕೆ ಅನುಕೂಲ ಎಂದ ರಾಹುಲ್ ಗಾಂಧಿ
ಕೇಂದ್ರ ಸರ್ಕಾರ ಅಮೆರಿಕಾ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಈ ನಿರ್ಧಾರ ಕೈಗೊಂಡಿದೆ. ಯುಪಿಐ ಮೇಲೆ ಶುಲ್ಕ ವಿಧಿಸಲು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಿಂದ ಈ ಜಾಣ ನಡೆ ಕೈಗೊಳ್ಳಲಾಗಿದೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
2000 ರೂ.ಗೆ ಹೆಚ್ಚಿನ ಹಣ ಬಳಕೆ ಮಾಡಬೇಕಾದರೆ ಕಾರ್ಡ್ ಬಳಸಬೇಕು. ಅದಕ್ಕೆ ಹೆಚ್ಚುವರಿ ಶುಲ್ಕ ಇಲ್ಲ. ಹೀಗಾದಾಗ ಅಮೆರಿಕ ಮೂಲದ ಕಂಪನಿಗಳ ಕಾರ್ಡ್ ಮತ್ತೆ ಜಾರಿಗೆ ಬರುತ್ತವೆ. ಈ ಕಾರಣದಿಂದ ಅಮೆರಿಕಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಯುಪಿಐ ಮೇಲೆ ಶುಲ್ಕ ವಿಧಿಸಲು ಮುಂದಾಗಿದೆ.
ರೂ.2,000 ಕ್ಕೂ ಹೆಚ್ಚಿನ ಹಣದ ಯುಪಿಐ ವಹಿವಾಟುಗಳ ಮೇಲೆ ಎಂಡಿಆರ್ (ಮರ್ಚೆಂಟ್ ಡಿಸ್ಕೌಂಟ್ ರೇಟ್) ವಿಧಿಸಬಹುದು. ಇಂತಹ ವಹಿವಾಟುಗಳು ಕೇವಲ ಶೇ 5ರಷ್ಟಿದೆ. ಹೀಗಿದ್ದರೂ ಯುಪಿಐನ ಎಲ್ಲ ಆರ್ಥಿಕ ಮೌಲ್ಯದಲ್ಲಿ ಸುಮಾರು ಶೇ 65ರಷ್ಟು ಯುಪಿಐ ಪಾಲಿದೆ ಎಂದು ಎಕ್ಸ್‌ನಲ್ಲಿ ರಾಹುಲ್ ಗಾಂಧಿ ವಿವರಿಸಿದ್ದಾರೆ.
ಯುಪಿಐ ವ್ಯವಸ್ಥೆಯನ್ನು ಅಮೆರಿಕ ಕಾರ್ಡ್ ಕಂಪನಿಗಳು ವಿರೋಧಿಸುತ್ತಲೇ ಬಂದಿದ್ದವು. ಇದೀಗ ವಿದೇಶಿ ಕಂಪನಿಗಳ ಹಿತಾಸಕ್ತಿಗೆ ಒಳಗಾದ ಮೋದಿ ಸರ್ಕಾರ ದೇಶದ ಜನರಿಗೆ ಹಿತಾಸಕ್ತಿ ಬಲಿ ಕೊಟ್ಟಿದೆ ಎಂದು ರಾಗಾ ದೂರಿದ್ದಾರೆ. ಎಐಸಿಸಿ ಮಲ್ಲಿಕಾರ್ಜುನ್ ಖರ್ಗೆ ಅವರು ಯುಪಿಐ ಮೇಲಿನ ಶುಲ್ಕ ಹೇರಿಕೆ ಖಂಡಿಸಿದ್ದಾರೆ.


Click it and Unblock the Notifications
