ಜೂ. 26: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್
ಬೆಂಗಳೂರು, ಜೂ.26: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
6.15: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಬಾಂಗ್ಲಾದೇಶ ಪ್ರವಾಸದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಂಗ್ಲಾ ಪ್ರವಾಸಕ್ಕೆ ಅಹ್ವಾನ ಬಂದಿತ್ತು. ಶೇಖ್ ಹಸೀನಾ ಅವರ ಆಹ್ವಾನ ಮನ್ನಿಸಿದ ಮೋದಿ ಅವರು ಬಾಂಗ್ಲಾದೇಶಕ್ಕೆ ತೆರಳಲು ಸಿದ್ಧ ಎಂದಿದ್ದಾರೆ.
9.10: ಆರೆಸ್ಸೆಸ್ ಬೆಂಬಲ ಸಿಕ್ಕಿರುವ ಕಾರಣ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಅಮಿತ್ ಶಾ ಅವರ ನೇಮಕ ಖಚಿತವಾಗಿದೆ.ಜೂ.28ರಂದು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಗಳಿವೆ. ರಾಜನಾಥ್ ಸಿಂಗ್ ಅವರು ಮೋದಿ ಸಂಪುಟದಲ್ಲಿ ಗೃಹ ಸಚಿವರಾಗಿರುವ ಕಾರಣ ಪಕ್ಷದ ಅಧ್ಯಕ್ಷ ಸ್ಥಾನ ತೆರವಾಗಿದೆ.

9.00: ಬಿಜೆಪಿ ಅಧ್ಯಕ್ಷ ಸ್ಥಾನ ರೇಸಿನಲ್ಲಿ ಅಮಿತ್ ಶಾ ಮುಂದೆ, ಹಿಮಾಚಲ ಪ್ರದೇಶದ ಜೆ.ಪಿ ನಡ್ಡಾ, ರಾಜಸ್ಥಾನದ ಓಂ ಮಾಥೂರ್ ಹಿಂದೆ.
8.50: ನಾಗಾಲ್ಯಾಂಡ್ ರಾಜ್ಯಪಾಲ ಅಶ್ವಿನಿ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಯುಪಿಎನಿಂದ ನೇಮಕಗೊಂಡಿದ್ದ ಉತ್ತರಪ್ರದೇಶದ ಬಿ.ಎಲ್ ಜೋಶಿ, ಛತ್ತೀಸ್ ಗಢದ ಶೇಖರ್ ದತ್ತ ರಾಜೀನಾಮೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications