ಜೂ. 24: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್
ಬೆಂಗಳೂರು, ಜೂ.24: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
9.50: ಬಾಂಗ್ಲಾದೇಶದ ಪ್ರಜೆಗಳು 'ವೀಸಾ ಆನ್ ಅರೈವಲ್' ಪಡೆದುಕೊಳ್ಳಲು ಅವಕಾಶ ಒದಗಿಸುವಂತೆ ವಿದೇಶಾಂಗ ಖಾತೆ ನೀಡಿದ್ದ ಪ್ರಸ್ತಾಪವನ್ನು ಕೇಂದ್ರ ಗೃಹ ಸಚಿವಾಲಯ ತಿರಸ್ಕರಿದೆ.
9.40: ವೊಡಾಫೋನ್ ಸಂಸ್ಥೆ ತನ್ನ 2ಜಿ, 3ಜಿ, ಇಂಟರ್ನೆಟ್ ಸೇವೆಗಳ ದರಗಳನ್ನು ಎರಡು ಪಟ್ಟು ಏರಿಕೆ ಮಾಡಿದೆ. ಹಂತ ಹಂತವಾಗಿ ಏರಿಕೆ ಜಾರಿಯಾಗಲಿದೆ ಎಂದು ಸಂಸ್ಥೆ ಹೇಳಿದೆ.

9.30 : ಆಂಧ್ರಪ್ರದೇಶದ ತಿರುಪತಿ ತಿರುಮಲ ದೇಗುಲದಲ್ಲಿ ಕಳೆದ ಭಾನುವಾರ ಒಂದೇ ದಿನ 4.45 ಕೋಟಿ ರು ದಾಖಲೆ ಮೊತ್ತ ಸಂಗ್ರಹವಾಗಿದೆ. ಈ ಹಿಂದೆ ವೈಕುಂಠ ಏಕಾದಶಿಯಂದು ಭಕ್ತರು ನೀಡಿದ್ದ ಕಾಣಿಕೆ ಮೊತ್ತ 4.25 ಕೋಟಿ ರು ದಾಖಲಾಗಿದೆ.
9.15: ಮುಂಬೈನ ಕ್ಯಾಂಪಾಕೋಲಾ ನಿವಾಸಿಗಳಿಗೆ ನೀರು, ವಿದ್ಯುತ್ ಸಂಪರ್ಕ ಕಟ್ ಮಾಡಲಾಗಿದೆ.












Click it and Unblock the Notifications