ಜು.7 : ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್
ಬೆಂಗಳೂರು, ಜು.7: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
10.40: ಪ್ರಧಾನಿ ನರೇಂದ್ರ ಮೋದಿ ಅವರು ಬ್ರೆಜಿಲ್ಲಿಗೆ ತೆರಳಿದ್ದು, BRICS ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. [ಇದನ್ನೂ ಓದಿ : ವಿಶ್ವಕಪ್ ಗೆ ಮೋದಿಗೆ ಆಹ್ವಾನ]
10.30 : ಮುಂಬೈನ ಮುರುಡ್ ಬೀಚ್ ನಲ್ಲಿ ಆರು ಜನ ಗೆಳೆಯರು ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

9.45: ನೈಜೀರಿಯಾದ ಉಗ್ರರಿಂದ ಸುಮಾರು 60ಕ್ಕೂ ಅಧಿಕ ಮಹಿಳೆ, ಮಕ್ಕಳು ತಪ್ಪಿಸಿಕೊಂಡಿರುವ ಸುದ್ದಿ ಬಂದಿದೆ.
9.30: ಬಾಗ್ದಾದಿನಲ್ಲಿ ಬಾಂಬ್ ಸ್ಫೋಟಕ್ಕೆ ನಾಲ್ವರು ಬಲಿಯಾಗಿದ್ದಾರೆ.
9.15: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರ ತಂಗಿ ಲೇಡಿ ಡಾನ್ ಹಸೀನಾ ಅವರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.












Click it and Unblock the Notifications