ನ.10: ದೇಶ, ವಿದೇಶ ಸುದ್ದಿಗಳ ಚುಟುಕು ಸುದ್ದಿ
ಬೆಂಗಳೂರು, ನ.10: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
16.15: 2ಜಿ ಸ್ಪೆಕ್ಟ್ರಂ ಬಹುಕೋಟಿ ಹಗರಣದ ಆರೋಪಿ ಡಿಎಂಕೆ ಸಂಸದೆ ಕನ್ನಿಮೋಳಿ ಅವರು ಬಂಧನ ಭೀತಿಯಿಂದ ಪಾರಾಗಿದ್ದಾರೆ. ಕನಿಮೋಳಿ ವಿರುದ್ಧ ವಿಶೇಷ ಕೋರ್ಟ್ ಜಾರಿ ಮಾಡಿದ್ದ ಜಾಮೀನು ರಹಿತ ಬಂಧನ ವಾರಂಟ್‌ನ್ನು ರದ್ದುಗೊಂಡಿದೆ. ಕನಿಮೋಳಿ ಅವರು ಕೋರ್ಟಿನ ಮುಂದೆ ಕ್ಷಮೆಯಾಚಿಸಿದ್ದಾರೆ.
15.20: ನ.12ರಂದು ಮಹಾರಾಷ್ಟ್ರದ ನೂತನ ಸಿಎಂ ದೇವೇಂದ್ರ ಫಡ್ನವೀಸ್ ಅವರು ವಿಶ್ವಾಸ ಮತಯಾಚನೆ ಮಾಡಲಿದ್ದಾರೆ.
15.00: ಮಹಾರಾಷ್ಟ್ರದಲ್ಲಿ ವಿಧಾನಸಭೆ ಅಧಿವೇಶನ ಆರಂಭಗೊಂಡಿದ್ದು ಶಿವಸೇನಾ ಶಾಸಕರು ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವ ಮೂಲಕ ಬಿಜೆಪಿಗೆ ಟಾಂಗ್ ನೀಡಿದ್ದಾರೆ.

14.30: ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಮುಂದಿನ ವಿಚಾರಣೆಯನ್ನು ನ.14ಕ್ಕೆ ಮುಂದೂಡಲಾಗಿದೆ. ವರದಿಯಲ್ಲಿರುವ ಹೆಸರುಗಳನ್ನು ಬಹಿರಂಗ ಪಡಿಸದಂತೆ ಬಿಸಿಸಿಐ ಕೋರಿದ್ದು, ಈ ಬಗ್ಗೆ ಕೋರ್ಟ್ ಮುಂದಿನ ವಿಚಾರಣೆ ಸಂದರ್ಭದಲ್ಲಿ ತನ್ನ ನಿರ್ಧಾರ ಪ್ರಕಟಿಸಲಿದೆ.
14.00: ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ಆರಂಭಗೊಂಡಿದೆ. ಯಾರ ಹೆಸರು ಬಹಿರಂಗಗೊಳ್ಳಲಿದೆ? ನ್ಯಾ. ಮುದ್ಗಲ್ ವರದಿಯಲ್ಲಿ ಯಾರ ಹೆಸರಿದೆ? ಎಂಬ ಕುತೂಹಲ ಮನೆ ಮಾಡಿದೆ.

13.30: ಮನೋಹರ್ ಪಾರಿಕ್ಕರ್ ಅವರು ರಾಜ್ಯಸಭೆ ಸದಸ್ಯತ್ವ ಬಯಸಿ ಉತ್ತರಪ್ರದೇಶದಿಂದ ನಾಮಪತ್ರ ಸಲ್ಲಿಸಿದ್ದಾರೆ. ಗೋವಾದ ಮಾಜಿ ಸಿಎಂ ಮನೋಹರ್ ಅವರು ರಕ್ಷಣಾ ಸಚಿವರಾಗಿ ಮೋದಿ ಕ್ಯಾಬಿನೆಟ್ ಸೇರಿದ್ದಾರೆ.
12.50: ಡಿಎಂಕೆ ಸಂಸದೆ ಕನಿಮೋಳಿ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಲಾಗಿದೆ. 2ಜಿ ತರಂಗ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ವಿಚಾರಣೆಗೆ ಹಾಜರಾಗದ ಕನಿಮೋಲಿ ಅವರಿಗೆ ವಿಶೇಷ ನ್ಯಾಯಾಲಯ ಈ ವಾರೆಂಟ್ ಕಳಿಸಿದೆ.
Patiala House Court issues non-bailable warrant against Kanimozhi for not appearing in court today for the 2G case hearing
— ANI (@ANI_news) November 10, 2014 11.25: ಶ್ರೀಲಂಕಾದಲ್ಲಿ ಮರಣದಂಡನೆ ಶಿಕ್ಷೆಗೊಳಗಾಗಿರುವ ತಮಿಳು ಮೂಲದ ಮೀನುಗಾರರನ್ನು ಭಾರತಕ್ಕೆ ಹಸ್ತಾಂತರಿಸುವುದಾಗಿ ಶ್ರೀಲಂಕಾ ಸರ್ಕಾರ ಪ್ರಧಾನಿ ಮೋದಿ ಅವರಿಗೆ ಭರವಸೆ ನೀಡಿದೆ ಎಂದು ಸುಬ್ರಮಣ್ಯ ಸ್ವಾಮಿ ಹೇಳಿದ್ದಾರೆ.

11.10: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಕೆಎಂ ಬಿರ್ಲಾ ಅವರ ಹೆಸರುಳ್ಳ ವರದಿಯನ್ನು ನ.25ಕ್ಕೆ ದೆಹಲಿ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ.
Also got to know that they (fishermen) will soon be released to the Indian authorities : Subramanian Swamy pic.twitter.com/9Pqos9zl0q
— ANI (@ANI_news) November 10, 2014 11.00: ಅಮೆರಿಕ ಅಧ್ಯಕ್ಷ ಒಬಾಮಾ ಅವರು ಬೀಜಿಂಗ್ ಪ್ರವಾಸ ಕೈಗೊಂಡಿದ್ದಾರೆ.












Click it and Unblock the Notifications