ಮದ್ಯಕ್ಕೆ ದಾಸನಾದ ಮಂಗ, ಅಂಗಡಿಯಲ್ಲಿದ್ದ ಬಾಟಲಿ 'ಮಂಗ'ಮಾಯ
ಉತ್ತರ ಪ್ರದೇಶ ನವೆಂಬರ್ 1: ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಮಂಗವೊಂದು ಮದ್ಯದಂಗಡಿಗಳಿಗೆ ನುಗ್ಗಿ ಮದ್ಯ ಕದಿಯುತ್ತಿರುವ ಕುತೂಹಲಕಾರಿ ಪ್ರಕರಣವೊಂದು ವರದಿಯಾಗಿದೆ. ಕೋತಿಯೊಂದು ಜನರ ಮದ್ಯದ ಬಾಟಲಿಗಳನ್ನು ಕದಿಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಮದ್ಯಕ್ಕೆ ದಾಸನಾದ ಮಂಗ ಅಂಗಡಿಯಲ್ಲಿರುವ ಮದ್ಯಗಳನ್ನು ಕದಿಯುತ್ತಿದೆ ಎಂದು ದೂರಲಾಗಿದೆ. ನಿತ್ಯ ಈ ಮಂಗಕ್ಕೆ ಒಂದು ಬಾಟಲಿ ಮದ್ಯ ಬೇಕು. ಮಾಲೀಕನ ಕಣ್ಣು ತಪ್ಪಿಸಿ ಚಾಣಾಕ್ಷತನದಿಂದ ಮದ್ಯ ಕದಿಯುವ ಕೋತಿ ಮರೆಯಾಗಿ ಅದನ್ನು ಕುಡಿಯುತ್ತದೆ. ಕೋತಿ ಈವರೆಗೆ ತಾನಾಗಿಯೇ ಯಾರಿಗೂ ತೊಂದರೆಯನ್ನು ನೀಡಿಲ್ಲ. ಆದರೆ ಯಾರಾದರು ಮದ್ಯ ಕದಿಯುವುದನ್ನು ತಪ್ಪಿಸಲು ಮುಂದಾದರೆ ದಾಳಿಗೆ ಮುಂದಾಗುತ್ತಿದೆ. ಇದರಿಂದ ಅಂಗಡಿ ಮಾಲೀಕ ಹೈರಾಣಾಗಿದ್ದಾರೆ.
ಮಾತ್ರವಲ್ಲದೆ ಕೋತಿ ಮದ್ಯ ಕುಡಿಯುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಕೋತಿ ಮದ್ಯವನ್ನು ಕುಡಿಯುತ್ತಿರುವ ರೀತಿ ನೋಡಿದರೆ ಅದು ಇದೇ ಮೊದಲ ಬಾರಿಗೆ ಇದನ್ನು ಕುಡಿಯುತ್ತಿದೆ ಎಂದು ತೋರುತ್ತಿಲ್ಲ. ನೋಡುಗರಿಗೆ ಈ ವಿಡಿಯೋ ಭಾರೀ ಕುತೂಹಲವನ್ನು ಮೂಡಿಸಿದೆ.

ರಾಯ್ ಬರೇಲಿ ಜಿಲ್ಲೆಯ ಅಚಲಗಂಜ್‌ನ ಮದ್ಯದ ಅಂಗಡಿ ಮಾಲೀಕರೊಬ್ಬರು ಮದ್ಯ ಕಳ್ಳನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋತಿಯನ್ನು ಅಟ್ಟಿಸಿಕೊಂಡು ಹೋದರೆ ಕಚ್ಚುತ್ತದೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಸುಮ್ಮನಿದ್ದಾರೆ ಎಂದು ಅಂಗಡಿ ಮಾಲೀಕ ಆರೋಪಿಸಿದ್ದಾರೆ. ಜಿಲ್ಲಾ ಅಬಕಾರಿ ಅಧಿಕಾರಿ ರಾಜೇಂದ್ರ ಪ್ರತಾಪ್ ಸಿಂಗ್ ಮಾತನಾಡಿ, ಅರಣ್ಯ ಇಲಾಖೆಯ ನೆರವಿನಿಂದ ಈ ಕೋತಿಯನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ, ಶೀಘ್ರದಲ್ಲೇ ಗ್ರಾಹಕರು ಈ ಸಮಸ್ಯೆಯಿಂದ ಮುಕ್ತರಾಗುತ್ತಾರೆ ಎಂದು ಭರವಸೆ ನೀಡಿದ್ದಾರೆ.
रायबरेली में बंदर का शराब पीने का वीडियो हुआ वायरल जो शराब की दुकान में आने वाले लोगो से शराब छीन लेता है और गटक जाता है। pic.twitter.com/We8qaAY4pi
— Anurag Mishra (@AnuragM27306258) October 30, 2022
ಹಿಂದೆ ಚಾಕು ಹಿಡಿದಿದ್ದ ಕೋತಿ
ಇತ್ತೀಚೆಗೆ ಬ್ರೆಜಿಲ್‌ನ ಪಿಯಾವಾಯ್ ನಗರದಲ್ಲಿ ಕೋತಿಯೊಂದು ಚಾಕು ಹಿಡಿದು ಓಡಾಡುತ್ತಿದ್ದ ಘಟನೆ ಬೆಳಕಿಗೆ ಬಂದಿತ್ತು. ಮಂಗನ ಕೈಯಲ್ಲಿ ಚಾಕು ಇರುವ ದೃಶ್ಯವೂ ವೈರಲ್ ಆಗಿತ್ತು. ಈ ದೃಶ್ಯಾವಳಿಯಲ್ಲಿ, ಕೋತಿಯು ಶಾಪಿಂಗ್ ಸೆಂಟರ್‌ನ ಬಾಲ್ಕನಿಯಲ್ಲಿ ತನ್ನ ಚಾಕುವನ್ನು ಶಾರ್ಪ್ ಮಾಡುವುದು ಕಂಡುಬರುತ್ತದೆ. ಕೋತಿ ಚಾಕು ಹಿಡಿದು ಬರುವವರನ್ನು ಹೆದರಿಸುತ್ತಿರುವುದು ಕೂಡ ಕಂಡು ಬಂದಿದೆ. ಇದರಿಂದ ಜನ ಮನೆ ಬಿಟ್ಟು ಹೊರಬಾರದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೂ ಕೋತಿಯನ್ನು ಸೆರೆ ಹಿಡಿಯಲಾಯಿತು.












Click it and Unblock the Notifications