ಯುಪಿ: ಕಾಣೆಯಾದ ಎಸ್‌ಸಿ ಸಮುದಾಯದ ಬಾಲಕಿ ಅಸ್ಥಿಪಂಜರ ಪತ್ತೆ: ಅತ್ಯಾಚಾರದ ಶಂಕೆ!

ಉತ್ತರಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಕಳೆದ ದಿನ ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯದ ಆರು ವರ್ಷದ ಬಾಲಕಿಯ ಅಸ್ಥಿಪಂಜರ ಪತ್ತೆಯಾಗಿದ್ದು ಅತ್ಯಾಚಾರದ ಶಂಕೆ ವ್ಯಕ್ತವಾಗಿದೆ.

ಲಕ್ನೋ ಮಾರ್ಚ್ 1: ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯದ ಆರು ವರ್ಷದ ಬಾಲಕಿಯ ಅಸ್ಥಿಪಂಜರ ಉತ್ತರ ಪ್ರದೇಶದ ಕಾನ್ಪುರದ ಗ್ರಾಮದ ಏಕಾಂತ ಕ್ಷೇತ್ರದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕವಾಗಿ ಮೇಲ್ನೋಟಕ್ಕೆ ಬಾಲಕಿಯನ್ನು ಕೊಲೆ ಮಾಡುವ ಮೊದಲು ಲೈಂಗಿಕ ದೌರ್ಜನ್ಯ ನಡೆಸಿರಬಹುದು ಎಂದು ತೋರುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಂದ್ರಭಾನ್ ಎಂಬ ವ್ಯಕ್ತಿ, ಆತನ ಪತ್ನಿ ಸುಧಾ ಮತ್ತು ಸಹೋದರ ಸುಲ್ತಾನ್ ಸೇರಿದಂತೆ ಮೂವರು ಶಂಕಿತರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಶನಿವಾರ ಬಾಲಕಿ ಅದೇ ಗ್ರಾಮದಲ್ಲಿರುವ ಚಿಕ್ಕಪ್ಪನ ಮನೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ನಾಪತ್ತೆಯಾಗಿದ್ದಳು.

UP: Missing girls skeleton found: Rape suspected!

ಬಳಿಕ ಕುಟುಂಬಸ್ಥರು ಆಕೆಯನ್ನು ಹುಡುಕಿದ್ದಾರೆ. ಆಕೆ ಸಿಗದಿದ್ದಾಗ ಸಂತ್ರಸ್ತೆಯ ಕುಟುಂಬ ಅದೇ ರಾತ್ರಿ ಪೊಲೀಸರನ್ನು ಸಂಪರ್ಕಿಸಿದೆ. ನಿನ್ನೆ ಬಾಲಕಿ ಶವ ಪತ್ತೆಯಾಗಿದೆ. ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ್ದಕ್ಕಾಗಿ ಚಂದ್ರಭಾನ್, ಅವರ ಪತ್ನಿ ಸುಧಾ, ಸಹೋದರ ಸುಲ್ತಾನ್ ಮತ್ತು ತಂದೆ ರಾಮ್ ಪ್ರಕಾಶ್ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿರುವುದಾಗಿ ಹೆಚ್ಚುವರಿ ಡಿಸಿಪಿ (ದಕ್ಷಿಣ) ಅಂಕಿತಾ ಶರ್ಮಾ ತಿಳಿಸಿದ್ದಾರೆ.

ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಜ್ಞರನ್ನು ಸಹ ಕರೆಯಲಾಗಿದೆ. ಆಕೆಯ ಮನೆಯಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿ ಅಸ್ಥಿಪಂಜರ ಪತ್ತೆಯಾಗಿದೆ ಎಂದು ಹೆಚ್ಚುವರಿ ಡಿಸಿಪಿ (ದಕ್ಷಿಣ) ತಿಳಿಸಿದ್ದಾರೆ.

"ಸಾವಿಗೆ ನಿಖರವಾದ ಕಾರಣವನ್ನು ತಿಳಿದುಬಂದಿಲ್ಲ. ಅದರ ಹೊರತಾಗಿ ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಅತ್ಯಾಚಾರದ ಕೋನವನ್ನು ಅನ್ವೇಷಿಸಲು ನಾವು ನಿರ್ಧರಿಸಿದ್ದೇವೆ. ಕೊಲ್ಲುವ ಮೊದಲು ಮಗುವಿನ ಅತ್ಯಾಚಾರದ ಸಾಧ್ಯತೆಯನ್ನು ನಾವು ತಳ್ಳಿಹಾಕಲು ಸಾಧ್ಯವಿಲ್ಲ" ಎಂದು ಶ್ರೀಮತಿ ಶರ್ಮಾ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+