Get Updates
Get notified of breaking news, exclusive insights, and must-see stories!

ಉತ್ತರ ಪ್ರದೇಶದಲ್ಲಿ ಯುವತಿ ಅಪಹರಣ, ಗ್ಯಾಂಗ್ ರೇಪ್

ಮೀರತ್, ಆ.5: 20 ವರ್ಷದ ಯುವತಿಯನ್ನು ಅಪಹರಿಸಿ, ಸಾಮೂಹಿಕವಾಗಿ ಅತ್ಯಾಚಾರ ನಡೆಸಿರುವ ಘಟನೆ ಉತ್ತರಪ್ರದೇಶವನ್ನು ಬೆಚ್ಚಿ ಬೀಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೆ ಮೂವರನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

20 ವರ್ಷದ ಬಿಎ ಪದವೀಧರೆಯೊಬ್ಬಳನ್ನು ಜುಲೈ 23ರಂದು ಅಪಹರಣ ಮಾಡಿದ ಕೆಲ ದುಷ್ಕರ್ಮಿಗಳ ಗುಂಪು, ಹಾಪುರ್ ನ ಮದರಸಾ ಹೊತ್ತೊಯ್ದು ಬಂಧನದಲ್ಲಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಮದರಸಾದ ನವಾಬ್ ಹಾಗೂ ನಾಲ್ವರ ಈ ನೀಚ ಕೃತ್ಯ ಎಸಗಿದ್ದಾರೆ.

ಬಳಿಕ ಯುವತಿಯನ್ನ ಮುಜಾಫರಬಾದ್ ಗೆ ಶಿಫ್ಟ್ ಮಾಡಲಾಗಿದೆ. ಈ ಸಂದರ್ಭ ತಪ್ಪಿಸಿಕೊಂಡ ಯುವತಿ ತನ್ನ ಕುಟುಂಬವನ್ನ ಸಂಪರ್ಕಿಸಿದ್ದಾಳೆ. ಘಟನೆ ಸಂಬಂಧ ಪೊಲೀಸರು ಮೂವರನ್ನ ಬಂಧಿಸಿದ್ಧಾರೆ. ಘಟನೆ ಸಂಬಂಧ ಸರವಾ ಗ್ರಾಮದ ಮುಖ್ಯಸ್ಥ ಮತ್ತು ಓರ್ವ ಮಹಿಳೆಯನ್ನು ಬಂಧಿಸಲಾಗಿದೆ. ಆದರೆ, ಪ್ರಮುಖ ಆರೋಪಿ ಇನ್ನೂ ಪತ್ತೆಯಾಗಿಲ್ಲ.

UP: Gangrape, forced conversion of 20-year-old girl put Meerut on the boil

'ನನ್ನನ್ನ ಮೊದಲು ಹಾಪುರ್ ನ ಮದರಸಾಗೆ ಕರೆದೊಯ್ಯಲಾಯ್ತು. ಬಳಿಕ ಮುಜಾಫರನಗರಕ್ಕೆ ಕರೆದೊಯ್ದರು. ಅಲ್ಲಿ ಇನ್ನೂ ಹಲವು ಅಪಹೃತ ಯುವತಿಯರಿದ್ದರು. ನಾನು ಅವರನ್ನ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಧೈರ್ಯಮಾಡಿ ತಪ್ಪಿಸಿಕೊಂಡು ಬಂದೆ, ನನ್ನನ್ನ ಅಪಹರಿಸಿದ್ದ ದುಷ್ಕರ್ಮಿಗಳು ಕೊಡಬಾರದ ಹಿಂಸೆ ಕೊಟ್ಟರು, ಹಲ್ಲೆ ಮಾಡಿ ಸಾಮೂಹಿಕ ಅತ್ಯಾಚಾರ ನಡೆಸಿದರು' ಎಂದು ಯುವತಿತಿಳಿಸಿದ್ದಾರೆ.

ಅತ್ಯಾಚಾರದ ನಂತರ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದೆ ನವಾಬ್ ರನ್ನು ಮದುವೆಯಾಗಿದ್ದಾರೆ ಎಂದು ಘೋಷಿಸಲಾಗಿದೆ. ವಿಷಯ ಸಾರ್ವಜನಿಕರಿಗೆ ತಿಳಿಯುತ್ತಿದ್ದಂತೆ ಮೀರತ್ ನಲ್ಲಿ ಕೋಮು ಗಲಭೆ ಆರಂಭವಾಗಿದ್ದು, ಉದ್ರಿಕ್ತ ಗುಂಪೊಂದು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಸಹರನ್ ಪುರ ಗಲಭೆ ನಂತರ ಮೀರತ್ ನಲ್ಲಿ ನಡೆದಿರುವ ಘಟನೆ ನಡೆದಿದ್ದು, ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತೆ ಇದೆ.

'ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲಾವುಲ್ಲ, ಆತನ ಪತ್ನಿ ಹಾಗೂ ನಿಶಾತ್ ಎಂಬುವವರನ್ನು ಬಂಧಿಸಲಾಗಿದೆ. ಯುವತಿಯ ತಂದೆ ನೀಡಿದ ದೂರಿನ ಅನ್ವಯ ಖಾಖೌಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮುಖ್ಯ ಆರೋಪಿ ನವಾಬ್ ಖಾನ್ ಇನ್ನೂ ನಾಪತ್ತೆಯಾಗಿದ್ದಾನೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಕಿಬ್ಬೊಟ್ಟೆಗೆ ಭಾರಿ ಪೆಟ್ಟಾಗಿದೆ. ಆದರೆ, ಮಾಧ್ಯಮಗಳ ವರದಿಯಂತೆ ಆಕೆ ಕಿಡ್ನಿಯನ್ನು ಕದಿಯಲಾಗಿಲ್ಲ ' ಎಂದು ಐಜಿಪಿ ಅಮರೇಂದ್ರ ಸಿಂಗ್ ಸೆನ್ಗಾರ್ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+