ಯುಪಿ: ಮುಖ್ತಾರ್ ಅನ್ಸಾರಿ ಪುತ್ರನ ಮನೆ ಮೇಲೆ ಬುಲ್ಡೋಜರ್ ಕ್ರಮ- 2 ಅಂತಸ್ತಿನ ಕಟ್ಟಡ ನೆಲಸಮ!

ಉತ್ತರಪ್ರದೇಶದಲ್ಲಿ ಬುಲ್ಡೋಜರ್ ಕ್ರಮ ಮುಂದುವರೆದಿದ್ದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿಸುವ ಆರೋಪಿಗೆ ಬಿಸಿಮುಟ್ಟಿಸಲಾಗಿದೆ.ಜೈಲಿನಲ್ಲಿರುವ ದರೋಡೆಕೋರ-ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರ ಪುತ್ರ, ಜೈಲಿನಲ್ಲಿರುವ ಶಾಸಕ ಅಬ್ಬಾಸ್ ಅನ್ಸಾರಿ ವಿರುದ್ಧ ಉತ್

ಲಕ್ನೋ ಮಾರ್ಚ್ 3: ಜೈಲಿನಲ್ಲಿರುವ ದರೋಡೆಕೋರ-ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರ ಪುತ್ರ, ಜೈಲಿನಲ್ಲಿರುವ ಶಾಸಕ ಅಬ್ಬಾಸ್ ಅನ್ಸಾರಿ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಶುಕ್ರವಾರ ಬುಲ್ಡೋಜರ್ ಕ್ರಮವನ್ನು ಪ್ರಾರಂಭಿಸಿದ್ದಾರೆ. ಮೌ ಜಿಲ್ಲೆಯ ಜಹಾಂಗೀರಾಬಾದ್‌ನಲ್ಲಿ ಅಧಿಕಾರಿಗಳು ಎರಡು ಅಂತಸ್ತಿನ ಮನೆಯನ್ನು ಕೆಡವಿದ್ದಾರೆ. ಮುಖ್ತಾರ್ ಅನ್ಸಾರಿಯವರ ಮಕ್ಕಳಾದ ಅಬ್ಬಾಸ್ ಅನ್ಸಾರಿ ಮತ್ತು ಉಮರ್ ಅನ್ಸಾರಿ ಅವರ ಹೆಸರಿನಲ್ಲಿ ಮನೆ ಇತ್ತು.

ಅಬ್ಬಾಸ್ ಮತ್ತು ಉಮರ್ ಅನ್ಸಾರಿ ಅವರು ಎರಡು ಅಂತಸ್ತಿನ ಮನೆಯನ್ನು ನಿರ್ಮಿಸಲು ಅಗತ್ಯ ಅನುಮೋದನೆಯನ್ನು ಪಡೆದಿಲ್ಲ ಮತ್ತು ಅದರ ನಕ್ಷೆಯನ್ನು ಅಂಗೀಕರಿಸಲಿಲ್ಲ ಎಂಬ ಆರೋಪದ ನಂತರ ಈ ಕ್ರಮವನ್ನು ಪ್ರಾರಂಭಿಸಲಾಗಿದೆ.

UP: Bulldozer action on Mukhtar Ansaris sons house - 2 storied building razed!

ಎರಡಂತಸ್ತಿನ ಮನೆಯನ್ನು ಕೆಡವಲು ಸಿಟಿ ಮ್ಯಾಜಿಸ್ಟ್ರೇಟ್ ಆದೇಶ ಹೊರಡಿಸಿದ್ದರು. ಬಳಿಕ ಶುಕ್ರವಾರ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ಹಾಗೂ ಇತರೆ ಅಧಿಕಾರಿಗಳು ಐಶಾರಾಮಿ ಮನೆಯನ್ನು ನೆಲಸಮಗೊಳಿಸಿದ್ದಾರೆ.

ಮೌವಿನ ಶಾಸಕ ಅಬ್ಬಾಸ್ ಅನ್ಸಾರಿ ಕಳೆದ ಮೂರು ತಿಂಗಳಿಂದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಿನಲ್ಲಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+