ಭಾರತೀಯ ವಾಯು ಸೇನೆಯ ಮಾನವ ರಹಿತ ವಿಮಾನ ಪತನ
ಶ್ರೀನಗರ, ಆಗಸ್ಟ್ 11 : ಭಾರತೀಯ ವಾಯು ಸೇನೆಯ ಮಾನವ ರಹಿತ ವಿಮಾನ ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ.
ರಡಾರ್ ಸಂಪರ್ಕ ಕಳೆದುಕೊಂಡಿದ್ದ ಭಾರತೀಯ ವಾಯು ಪಡೆ ವಿಮಾನ ಇಲ್ಲಿನ ಕಠುವಾ ಜಿಲ್ಲೆಯ ಲಡೋಲ್ ಗ್ರಾಮದ ಸಮೀಪ ಪತನಗೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಭಾರತೀಯ ವಾಯು ಪಡೆಯ ವಿಮಾನ ಪತ್ತೆ ಮಾಡಿದ್ದು,. ಮಾನವ ರಹಿತ ವಿಮಾನ ರಡಾರ್ ಸಂಪರ್ಕ ಕಳೆದುಕೊಂಡು ಪತನಗೊಂಡಿರುವ ಸಂಬಂಧ ವಾಯು ಪಡೆ ತನಿಖೆಗೆ ಆದೇಶಿಸಿದೆ.
J&K: Unmanned Aerial Vehicle (UAV) of Air Force crashes in Kathua pic.twitter.com/ulLrLMnn61
— ANI (@ANI) August 11, 2017












Click it and Unblock the Notifications