ಅನ್ ಲಾಕ್ 3.0; ಅಂತರರಾಜ್ಯ ಪ್ರಯಾಣಕ್ಕೂ ಮುನ್ನ ತಿಳಿಯಿರಿ

ನವದೆಹಲಿ, ಜುಲೈ 30 : ಕೇಂದ್ರ ಗೃಹ ಇಲಾಖೆ ಅನ್ ಲಾಕ್ 3.0 ಮಾರ್ಗಸೂಚಿಯನ್ನು ಪ್ರಕಟಿಸಿದೆ. ಆಗಸ್ಟ್ 1ರ ಶನಿವಾರದಿಂದ ಇದು ಜಾರಿಗೆ ಬರಲಿದೆ. ಆದರೆ, ಕಂಟೈನ್ಮೆಂಟ್ ಝೋನ್‌ಗಳಲ್ಲಿನ ಲಾಕ್ ಡೌನ್ ಹಾಗೆಯೇ ಮುಂದುವರೆಯಲಿದೆ.

2ನೇ ಹಂತದ ಅನ್ ಲಾಕ್ ಮಾರ್ಗಸೂಚಿಯಲ್ಲಿಯೇ ಅಂತರರಾಜ್ಯಗಳ ಪ್ರಯಾಣಕ್ಕೆ ಇದ್ದ ತಡೆಯನ್ನು ಕೇಂದ್ರ ಸರ್ಕಾರ ತೆಗೆದುಹಾಕಿತ್ತು. 3ನೇ ಹಂತದಲ್ಲಿಯೂ ಇದು ಮುಂದುವರೆದಿದೆ. ದೇಶದಲ್ಲಿ ಜಾರಿಯಲ್ಲಿದ್ದ ರಾತ್ರಿ ಕರ್ಫ್ಯೂವನ್ನು ಸಡಿಲಿಸಲಾಗಿದೆ.

ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಕಂಟೈನ್ಮೆಂಟ್ ವಲಯಗಳ ಹೊರಗೆ ಮಾತ್ರ ಅನ್ವಯವಾಗಲಿದೆ. ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿ ಕಂಟೈನ್ಮೆಂಟ್ ಝೋನ್ ಎಂದು ಘೋಷಣೆಯಾದ ಪ್ರದೇಶದಲ್ಲಿ ಆಗಸ್ಟ್ 31ರ ತನಕ ನಿರ್ಬಂಧ ಮುಂದುವರೆಯಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಅಂತರರಾಜ್ಯ ಪ್ರಯಾಣ ಮಾಡುವ ಜನರು ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕಂಟೈನ್ಮೆಂಟ್ ಝೋನ್ ಪ್ರದೇಶದಲ್ಲಿ ನೀವು ವಾಸವಾಗಿದ್ದರೆ ಹೊರ ರಾಜ್ಯಗಳಿಗೆ ತೆರಳಲು ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಸೂಚನೆ - 01

ಸೂಚನೆ - 01

ಭಾರತದ ಯಾವುದೇ ರಾಜ್ಯಕ್ಕೆ ಸಂಚಾರ ನಡೆಸಲು ಯಾವುದೇ ಅನುಮತಿ ಬೇಕಾಗಿಲ್ಲ. ನೀವು ಬಯಸಿದ ಸಾರಿಗೆ ಸಂಪರ್ಕದ ಮೂಲಕ ಅಥವ ಸ್ವಂತ ವಾಹನದಲ್ಲಿ ಯಾವುದೇ ರಾಜ್ಯಕ್ಕೆ ಆಗಸ್ಟ್ 1ರಿಂದ ಪ್ರಯಾಣಿಸಬಹುದು.

ಸೂಚನೆ - 02

ಸೂಚನೆ - 02

ಯಾವುದೆ ಪಾಸು ಇಲ್ಲದೇ ಸಂಚಾರ ನಡೆಸುವ ನಿಯಮ ಕಂಟೈನ್ಮೆಂಟ್ ಝೋನ್‌ಗಳಿಗೆ ಅನ್ವಯವಾಗುವುದಿಲ್ಲ. ನೀವು ಕಂಟೈನ್ಮೆಂಟ್ ಝೋನ್‌ಗಳಲ್ಲಿ ವಾಸವಾಗಿದ್ದು, ಬೇರೆ ರಾಜ್ಯಗಳಿಗೆ ಸಂಚಾರ ನಡೆಸಬೇಕಾದ ಅಗತ್ಯವಿದ್ದರೆ ರಾಜ್ಯ ಸರ್ಕಾರಗಳ ಒಪ್ಪಿಗೆಯನ್ನು ಪಡೆಯಬೇಕು.

ಸೂಚನೆ - 03

ಸೂಚನೆ - 03

ಕಂಟೈನ್ಮೆಂಟ್ ಝೋನ್‌ಗಳ ಹೊರಗೆ ಚಟುವಟಿಕೆ ನಿಷೇಧಿಸುವ ಅಧಿಕಾರವನ್ನು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ. ಅಂತರ ರಾಜ್ಯಗಳ ನಡುವಿನ ಸರಕು ಸಾಗಣೆ, ಜನರ ಓಡಾಟವನ್ನು ನಿಷೇಧಿಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.

ಸೂಚನೆ - 04

ಸೂಚನೆ - 04

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಕಂಟೈನ್ಮೆಂಟ್ ಝೋನ್‌ಗಳ ಹೊರಗೆ ಕೆಲವು ಚಟುವಟಿಕೆಗಳಿಗೆ ಅಗತ್ಯವಿದ್ದರೆ ನಿಷೇಧ ಹೇರಬಹುದು. ಆದರೆ, ಅಂತರರಾಜ್ಯ ಸಂಚಾರಕ್ಕೆ ಪಾಸು, ಇ ಪರ್ಮಿಟ್ ಮುಂತಾದವುಗಳನ್ನು ಪರಿಚಯಿಸುವಂತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+