ಸಂಸದರ ಭತ್ಯೆ ಹೆಚ್ಚಳಕ್ಕೆ ಅಸ್ತು ಎಂದ ಮೋದಿ ಸಂಪುಟ

ನವದೆಹಲಿ, ಫೆಬ್ರವರಿ 28: ಸಂಸದರ ಭತ್ಯೆ ಹೆಚ್ಚಳಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವ ಕೇಂದ್ರ ಸಚಿವ ಸಂಪುಟ ಅಸ್ತು ಎಂದಿದೆ.

ಸಂಸದರಿಗೆ ಸೇರಬೇಕಾದ ಕ್ಷೇತ್ರ ಭತ್ಯೆ, ಪೀಠೋಪಕರಣ ಭತ್ಯೆ, ಸಂವಹನ ಖರ್ಚು ವೆಚ್ಚ ಕೂಡಾ ಇದರಲ್ಲಿ ಸೇರಿದೆ.

ಕೇಂದ್ರ ಸಂಸದೀಯ ವ್ಯವಹಾರ ಸಚಿವಾಲಯವು ಸಂಸದರ ಭತ್ಯೆ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದರಂತೆ ಪ್ರತಿ ತಿಂಗಳು ಸಿಗುತ್ತಿದ್ದ 45, 000ರು ಭತ್ಯೆ ಬದಲಿಗೆ 60,000 ರು ಸಿಗಲಿದೆ.

Union Cabinet nod to hike MPs' allowances

ಒಂದು ಬಾರಿಗೆ ನೀಡಲಾಗುವ ಪೀಠೋಪಕರಣ ಭತ್ಯೆ ಕೂಡಾ ಏರಿಕೆಯಾಗಿದ್ದು, ಹಾಲ್ 75,000 ರು ಬದಲಿಗೆ 1 ಲಕ್ಷ ರು ಸಿಗಲಿದೆ.

ವಿತ್ತ ಸಚಿವ ಅರುಣ್ ಜೇಟ್ಲಿ ಅವರು ತಮ್ಮ ಬಜೆಟ್ ಭಾಷಣದಲ್ಲಿ ಸಂಸದರ ಭತ್ಯೆ ಹೆಚ್ಚಳದ ಬಗ್ಗೆ ಪ್ರಸ್ತಾಪಿಸಿದ್ದರು. ಪ್ರತಿ ಐದು ವರ್ಷಗಳಿಗೊಮ್ಮೆ ಸಂಸದರ ವೇತನವನ್ನು ತುಟ್ಟಿಭತ್ಯೆ ಆಧಾರದ ಮೇಲೆ ಪರಿಷ್ಕರಿಸಲಾಗುವುದು ಎಂದು ಘೋಷಿಸಿದ್ದರು.

ಸಂಸದರಿಗೆ ಸಿಗುವ ಸಂಭಾವನೆಯಲ್ಲಿ ಮೂಲ ವೇತನ ಪ್ರತಿ ತಿಂಗಳಿಗೆ 50,000 ರು ಹಾಗೂ 45,000 ರು ಕ್ಷೇತ್ರ ಭತ್ಯೆ ಸಿಗಲಿದೆ. ಇದಲ್ಲದೆ ಇನ್ನಿತರ ಸೌಲಭ್ಯಗಳು, ಭತ್ಯೆಗಳು ಸಿಗುತ್ತಿವೆ. ಕೇಂದ್ರ ಸರ್ಕಾರವು ಪ್ರತಿ ತಿಂಗಳಿಗೆ ಸಂಸದರೊಬ್ಬರ ಮೇಲೆ 2.7 ಲಕ್ಷ ರು ವೆಚ್ಚ ಮಾಡುತ್ತಿದೆ.

ಈ ದಿನದ ಲೆಕ್ಕದಂತೆ ಸ್ಪೀಕರ್ ಹೊರತು ಪಡಿಸಿ, ಲೋಕಸಭೆಯಲ್ಲಿ 536 ಸಂಸದರು, ಇಬ್ಬರು ಆಂಗ್ಲೋ ಇಂಡಿಯನ್ ಸಮುದಾಯದ ನಾಮ ನಿರ್ದೇಶಿತ ಸದಸ್ಯರಿದ್ದಾರೆ. 8 ಖಾಲಿ ಸ್ಥಾನಗಳಿವೆ. ರಾಜ್ಯಸಭೆಯಲ್ಲಿ 239 ಸದಸ್ಯರಿದ್ದಾರೆ(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+