ಕೇಂದ್ರ ಬಜೆಟ್ 2018: ಮಹಿಳೆಯರಿಗೆ ಗುಡ್ ನ್ಯೂಸ್?!
ನವದೆಹಲಿ, ಫೆಬ್ರವರಿ 01: ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸುತ್ತಿರುವ 2018-19 ನೇ ಸಾಲಿನ ಕೇಂದ್ರ ಬಜೆಟ್ ಮಹಿಳೆಯರಿಗೊಂದು ಸಿಹಿ ಸುದ್ದಿ ನೀಡಿದೆ.
ಕಾರ್ಮಿಕರ ಭವಿಷ್ಯ ನಿಧಿ(ಇಪಿಎಫ್)ಗೆಂದು ಮಹಿಳಾ ಉದ್ಯೋಗಿಗಳ ಕೊಡುಗೆಯನ್ನು ಶೇ.12 ರಿಂದ ಶೇ.8 ಕ್ಕೆ ಇಳಿಸಿದೆ. ಆದರೆ ಕಂಪನಿ ಅಥವಾ ಉದ್ಯೋಗದಾರ ನೀಡಬೇಕಾದ ಶೇ.12 ಕೊಡುಗೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಈ ನಿಯಮ ಮೂರು ವರ್ಷದವರೆಗ ಮಾತ್ರ ಅನ್ವಯವಾಗಲಿದೆ.
ಇದರಿಂದ ಮಹಿಳೆಯರಿಗೆ ಪ್ರತಿ ತಿಂಗಳು ಸಿಗುವ ಟೇಕ್ ಹೋಮ್ ಸಂಬಳ 4 % ಅಷ್ಟು ಜಾಸ್ತಿ ಸಿಗಲಿದೆ. ಈ ನಿಯಮ 2017-18 ಹಣಕಾಸು ವರ್ಷದಿಂದ ಅನ್ವಯವಾಗಲಿದೆ.

ಪ್ರತಿ ತಿಂಗಳು ಉದ್ಯೋಗಿ ಮತ್ತು ಕಂಪನಿ ನೀಡುತ್ತಿದ್ದ ತಲಾ ಶೇ.12 ರಷ್ಟು ಕೊಡುಗೆಯನ್ನು ಉದ್ಯೋಗಿ ನಿವೃತ್ತಿಯಾದ ನಂತರ ಆತನ ಭವಿಷ್ಯಕ್ಕಾಗಿ ನೀಡಲಾಗುತ್ತದೆ.












Click it and Unblock the Notifications