ಕೇಂದ್ರ ಬಜೆಟ್‌ 2026ರಲ್ಲಿ ಹೊಸದೇನಿದೆ, ಯಾರಿಗೆಲ್ಲ ಲಾಭ: ಇಲ್ಲಿದೆ ಸಂಪೂರ್ಣ ಮಾಹಿತಿ

ಕೇಂದ್ರ ಸರ್ಕಾರವು 2026ನೇ ಸಾಲಿನ ಬಜೆಟ್‌ನಲ್ಲಿ ಹಲವು ಹೊಸ ಯೋಜನೆಗಳನ್ನು ಘೋಷಣೆ ಮಾಡಿದೆ. ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿಸಲು ಹಲವು ವಿಶೇಷ ಯೋಜನೆಗಳನ್ನು ಘೋಷಿಸಲಾಗಿದೆ. ಬಯೋಫಾರ್ಮಾ ಶಕ್ತಿ ಹಾಗೂ ಮಹಿಳೆಯರಿಗೆ ಶಿ - ಮಾರ್ಟ್ ಸೇರಿದಂತೆ ಹಲವು ಹೊಸ ಯೋಜನೆಗಳನ್ನು ಈ ಬಾರಿ ಘೋಷಣೆ ಮಾಡಲಾಗಿದೆ. ಜಾಗತಿಕ ಬಯೋಫಾರ್ಮಾ ಉತ್ಪಾದನಾ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಐದು ವರ್ಷಗಳಲ್ಲಿ 10,000 ಕೋಟಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ.

ಭಾರತ ಸೆಮಿಕಂಡಕ್ಟರ್ ಮಿಷನ್ (ISM) 2.0: ಇದು ಸ್ಥಳೀಯ ಸೆಮಿಕಂಡಕ್ಟರ್ ಉಪಕರಣಗಳು, ವಿಶೇಷ ವಸ್ತುಗಳು ಮತ್ತು ಭಾರತೀಯ ಸ್ವಾಮ್ಯದ ಮೇಲೆ ಕೇಂದ್ರೀಕರಣವನ್ನು ಹೊಂದಿದೆ. ಅಪರೂಪದ ಭೂಮಿಯ ಖನಿಜಗಳ ದೇಶೀಯ ಗಣಿಗಾರಿಕೆ ಮತ್ತು ಸಂಸ್ಕರಣೆಯನ್ನು ಉತ್ತೇಜಿಸಲು ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಈ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ.

Union Budget 2026

ಜವಳಿಗಳಿಗೆ ಸಮಗ್ರ ಕಾರ್ಯಕ್ರಮ: ರಾಷ್ಟ್ರೀಯ ನಾರು ಯೋಜನೆ, ಜವಳಿ ವಿಸ್ತರಣೆ ಮತ್ತು ಉದ್ಯೋಗ ಯೋಜನೆ ಮತ್ತು ಕೌಶಲ್ಯಕ್ಕಾಗಿ ಸಮರ್ಥ್ 2.0 ಸೇರಿದಂತೆ ಸಮಗ್ರ ಯೋಜನೆಯನ್ನು ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್: ಜಾಗತಿಕ ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಸಂಪರ್ಕಗಳ ಮೂಲಕ ಖಾದಿ, ಕೈಮಗ್ಗ ಮತ್ತು ಕರಕುಶಲ ವಸ್ತುಗಳನ್ನು ಬಲಪಡಿಸಲು ಹೊಸ ಉಪಕ್ರಮವನ್ನು ಕೇಂದ್ರ ಸರ್ಕಾರವು 2026ನೇ ಸಾಲಿನ ಬಜೆಟ್‌ನಲ್ಲಿ ಅಳವಡಿಸಿಕೊಂಡಿದೆ.

ಬಹುಭಾಷಾ AI ಸಾಧನ: ಕಸ್ಟಮೈಸ್ ಮಾಡಿದ ಸಲಹೆ ಮತ್ತು ಬೆಂಬಲವನ್ನು ಒದಗಿಸಲು ಮತ್ತು ಕೃಷಿ ಅಪಾಯಗಳನ್ನು ಕಡಿಮೆ ಮಾಡಲು ಕೃಷಿ ಪೋರ್ಟಲ್‌ಗಳನ್ನು ಸಂಯೋಜಿಸುವ ಬಹುಭಾಷಾ AI ಸಾಧನ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ.

ಹೊಸ ಆದಾಯ ತೆರಿಗೆ ಕಾಯ್ದೆ: ಹೊಸ ಆದಾಯ ತೆರಿಗೆ ಕಾಯ್ದೆಯು ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದೆ. 1961 ರ ಕಾಯಿದೆಯನ್ನು ಸರಳೀಕೃತ ನಿಯಮಗಳು ಮತ್ತು ಕಡಿಮೆ ವಿಭಾಗಗಳೊಂದಿಗೆ ಬದಲಾಯಿಸಲಾಗಿದೆ.

ವಿದೇಶಿ ಆಸ್ತಿ ಬಹಿರಂಗಪಡಿಸುವಿಕೆ ಯೋಜನೆ: ಸಣ್ಣ ತೆರಿಗೆದಾರರು (ವಿದ್ಯಾರ್ಥಿಗಳು, ಯುವ ವೃತ್ತಿಪರರು, NRIಗಳು) ನಿರ್ದಿಷ್ಟ ಮಿತಿಗಿಂತ ಕಡಿಮೆ ವಿದೇಶಿ ಆಸ್ತಿಗಳನ್ನು ಬಹಿರಂಗಪಡಿಸಲು ಒಂದು ಬಾರಿ, 6 ತಿಂಗಳ ಅವಧಿ ವಿಸ್ತರಣೆಗೆ ಅವಕಾಶ ಕಲ್ಪಿಸಲಾಗಿದೆ.

ಶಿ - ಮಾರ್ಟ್ ಸ್ಥಾಪನೆ

ಕೇಂದ್ರ ಸರ್ಕಾರವು 2026ನೇ ಸಾಲಿನ ಬಜೆಟ್‌ನಲ್ಲಿ ಮಹಿಳೆಯರಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಲಖ್ಪತಿ ದೀದಿ ಯೋಜನೆಯನ್ನು ವಿಸ್ತರಿಸಲಾಗಿದೆ. ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಶಿ - ಮಾರ್ಟ್ ಸ್ಥಾಪನೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿದ್ದಾರೆ. ಮಹಿಳೆಯರು ಸಾಲ ಆಧಾರಿತ ಜೀವನೋಪಾಯದಿಂದ ಸ್ವಂತ ಉದ್ಯಮಗಳನ್ನು ಸ್ಥಾಪನೆ ಮಾಡುವುದಕ್ಕೆ ಇದು ಸಹಕಾರಿಯಾಗಲಿದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ. ಲಖ್ಪತಿ ದೀದಿ ಕಾರ್ಯಕ್ರಮದ ಯಶಸ್ಸಿನಿಂದಾಗಿ ಈ ಪ್ರಸ್ತಾಪವನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಸ್ವ - ಸಹಾಯ ಉದ್ಯಮಕ್ಕೆ ಪೂರಕವಾಗಿ ಈ ಯೋಜನೆಯನ್ನು ಘೋಷಣೆ ಮಾಡಿರುವುದಾಗಿ ಹೇಳಲಾಗಿದೆ.

ಲಖ್ಪತಿ ದೀದಿ ಕಾರ್ಯಕ್ರಮ ಎಂದರೇನು

ಗ್ರಾಮೀಣಾಭಿವೃದ್ಧಿ ಸಚಿವಾಲಯವು ನಡೆಸುತ್ತಿರುವ ಲಖ್ಪತಿ ದೀದಿ ಕಾರ್ಯಕ್ರಮವು ಸ್ವಸಹಾಯ ಗುಂಪುಗಳ ಸದಸ್ಯರು ಸಣ್ಣ ವ್ಯವಹಾರಗಳನ್ನು ಪ್ರಾರಂಭಿಸಲು ಮತ್ತು ವರ್ಷಕ್ಕೆ ಕನಿಷ್ಠ 1 ಲಕ್ಷ ರೂಪಾಯಿ ಸ್ಥಿರ ಆದಾಯವನ್ನು ಗಳಿಸಲು ಸಹಾಯ ಮಾಡುವ ಮೂಲಕ ಗ್ರಾಮೀಣ ಮಹಿಳೆಯರನ್ನು ಬೆಂಬಲಿಸಲು ಪ್ರಯತ್ನಿಸುತ್ತದೆ. ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮದ ಭಾಗವಾಗಿ ಮಹಿಳೆಯರಿಗೆ ಪ್ಲಂಬಿಂಗ್, ಎಲ್ಇಡಿ ಬಲ್ಪ್‌ಗಳನ್ನು ತಯಾರಿಸುವುದು ಮತ್ತು ಡ್ರೋನ್‌ಗಳನ್ನು ಬಳಸುವುದು ಮತ್ತು ದುರಸ್ತಿ ಮಾಡುವಂತಹ ಕೌಶಲ್ಯಗಳನ್ನು ಕಲಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+