ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಂಗ್ಯ, ಕುಹಕ, ಆಕ್ರೋಶದ ಸರಕಾಯ್ತೇ ಕೇಂದ್ರ ಬಜೆಟ್?!

|
Google Oneindia Kannada News

ನವದೆಹಲಿ, ಫೆಬ್ರವರಿ 1: ಹಲವು ನಿನರೀಕ್ಷೆ, ಭರವಸೆಗಳಿಂದ ಕೇಂದ್ರ ಬಜೆಟ್ ಅನ್ನು ಕುತೂಹಲದ ಕಣ್ಣಿಂದ ನಿರುಕಿಸುತ್ತಿದ್ದ ಮಧ್ಯಮ ವರ್ಗದ ಜನರ ಆಸೆಗೆ ತಣ್ಣೀರೆರಚಿದಂತಾಗಿದೆಯಾ?

ಆದಾಯ ತೆರಿಗೆ ಮಿತಿ ಮತ್ತು ತೆರಿಗೆ ಸ್ಲಾಬ್ ನಲ್ಲಿ ಬದಲಾವಣೆಯಾಗಬಹುದು ಎಂಬ ನಿರೀಕ್ಷೆಯೂ ಸುಳ್ಳಾಗಿದೆ. 'ಆದಾಯ ತೆರಿಗೆ ನಿಯಮದಲ್ಲಿ ಈಗಾಗಲೇ ಸಾಕಷ್ಟು ಬದಲಾವಣೆಗಳನ್ನು ತಂದಿದ್ದೇವೆ. ಆದ್ದರಿಂದ ಈ ಬಾರಿ ಇದರಲ್ಲಿ ಯಾವ ಬದಲಾವಣೆಯೂ ಇಲ್ಲ' ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿಬಿಟ್ಟಿದ್ದಾರೆ!

ಕೇಂದ್ರ ಆಯವ್ಯಯ 2018 : ಬಡವರ ಕೃಷಿಕರ ಬಜೆಟ್ಕೇಂದ್ರ ಆಯವ್ಯಯ 2018 : ಬಡವರ ಕೃಷಿಕರ ಬಜೆಟ್

ಎಂಟು ರಾಜ್ಯಗಳ ಚುನಾವಣೆ, ಮುಂಬರುವ ಲೋಕಸಭಾ ಚುನಾವಣೆ ಯಾವುದನ್ನೂ ಗಮನದಲ್ಲಿಟ್ಟುಕೊಳ್ಳದೆ ಮಂಡನೆಯಾದ ಬಜೆಟ್ ತೀರಾ ನೀರಸ ಅನ್ನಿಸಿದೆಯಾ? ಹೌದೆನ್ನುತ್ತಾನೆ ಶ್ರೀಸಾಮಾನ್ಯ! ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಬಜೆಟ್ ಅನ್ನು ಕೆಲವರು ಹಾಸ್ಯ ಮಾಡಿದ್ದರೆ ಮತ್ತಷ್ಟು ಜನ ಕುಹಕದಿಂದ ಆಡಿಕೊಂಡಿದ್ದಾರೆ.

Array

ಉದ್ಯೋಗಿಗಳ ಪ್ರತಿಕ್ರಿಯೆ

ಈ ಬಜೆಟ್ ಬಗ್ಗೆ ವೇತನ ಪಡೆಯುವ ವರ್ಗದ ಪ್ರತಿಕ್ರಿಯೆ ಏನು ಎಂಬುದನ್ನು ಒಂದೇ ಚಿತ್ರದ ಮೂಲಕ ವಿವರಿಸಿದ್ದಾರೆ ಅಂಜಲಿ ಎ ಪಾಟೀಲ್. ನಾಯಿಯೊಂದು ಕೇವಲ ತಲೆಯಲ್ಲಾಡಿಸುತ್ತಿರುವ ಈ ದೃಶ್ಯ, ಬಜೆಟ್ ಕುರಿತ ಅಸಮಾಧಾನಕ್ಕೆ ಕನ್ನಡಿ ಎನ್ನಿಸಿದೆ.

ಬಜೆಟ್ ಆರ್ಥಿಕತೆಗೆ ಪ್ರೇರಕ: ಬಜೆಟ್ ಅನ್ನು ಕೊಂಡಾಡಿದ ಮೋದಿ ಬಜೆಟ್ ಆರ್ಥಿಕತೆಗೆ ಪ್ರೇರಕ: ಬಜೆಟ್ ಅನ್ನು ಕೊಂಡಾಡಿದ ಮೋದಿ

ಬಜೆಟ್ ನೋಡಿದ ನಂತರ...

ಮಧ್ಯಮ ವರ್ಗದ ಜನರು ಬಜೆಟ್ ನೋಡಿದ ನಂತರ ನೀಡುವ ಪ್ರತಿಕ್ರಿಯೆ ಇದು ಎಂದು ವಿಡಿಯೋ ಜೊತೆ ವಿವರಿಸಿದ್ದಾರೆ ಮಾಸ್ಕ್ ಇಂಡಿಯನ್!

ಪ್ರಾಮಾಣಿಕ ತೆರಿಗೆದಾರನ ಪ್ರತಿಕ್ರಿಯೆ

ಬಜೆಟ್ ಭಾಷಣ ಕೇಳಿದ ನಂತರ ಪ್ರಾಮಾಣಿಕ ತೆರಿಗೆದಾರನ ಪ್ರತಿಕ್ರಿಯೆ ಇದು ಎಂದು ವಿಡಿಯೋ ಹಾಕಿದ್ದಾರೆ ಅರೋರಾ ಸಹಾಬ್.

ಬಜೆಟ್ ಮತ್ತು ಎಳನೀರು!

ಆದಾಯ ಬರುವುದು ಹೇಗೆ, ಸಾಮಾನ್ಯ ಜನರಿಗೆ ಸಿಗುವುದೆಷ್ಟು, ನಂತರ ಟ್ಯಾಕ್ಸ್ ಮೂಲಕ ಸರ್ಕಾರಕ್ಕೆ ಸಿಗುವುದೆಷ್ಟು ಎಂದು ಚಿತ್ರದ ಮೂಲಕ ವಿವರಿಸಿದ್ದಾರೆ ನಿತೀಶ್!

ಬಿಜೆಪಿ ಪ್ರತಿಕ್ರಿಯೆ

ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತಿದೆ ಬಿಜೆಪಿ ಪ್ರತಿಕ್ರಿಯೆ! ಸಂಪೂರ್ಣ ದೇಹ ನೀರಿನಲ್ಲಿ ಮುಳುಗಿದ್ದರೂ ಥಂಮ್ಸಪ್ ಎನ್ನುತ್ತಿರುವ ಚಿತ್ರ ಹಾಕಿ ಇದೇ ಬಿಜೆಪಿ ಪ್ರತಿಕ್ರಿಯೆ ಎಂದಿದ್ದಾರೆ ಅಮ್ಜಾದ್ ಹೈದರ್.

ಮಧ್ಯಮ ವರ್ಗದ ಜನರ ಪ್ರತಿಕ್ರಿಯೆ

ಬಜೆಟ್ ಭಾಷಣ ಕೇಳುತ್ತಿದ್ದಂತೆಯೇ ವೇತನ ಪಡೆಯುವ ಮಧ್ಯಮ ವರ್ಗದ ಜನರ ಪ್ರತಿಕ್ರಿಯೆ ಹೇಗಿತ್ತು ಎಂದು ವಿಡಯೋ ಸಮೇತ ವಿವರಿಸಿದ್ದಾರೆ ಭುವನ್!

ಬಿಜೆಪಿ ಬೆಂಬಲಿಗರ ಪ್ರತಿಕ್ರಿಯೆ

ಬಜೆಟ್ ಭಾಷಣದ ನಂತರ ಬಿಜೆಪಿ ಬೆಂಬಲಿಗರ ಪ್ರತಿಕ್ರಿಯೆ ಹೇಗಿರುತ್ತೆ ಎಂದು ವಿಡಿಯೋ ಮೂಲಕ ಹೇಳಿದ್ದಾರೆ ಬಿಪಿನ್ ರಾಂಜ್.

English summary
Union Budget 2018 presented by Finance Minister Arun Jaitley has failed to fullfill common man wishes? Social media people show their unhappiness towards budget through witty and funny cartoons twitter. Here are some of them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X