ನಾಲ್ವರು ಉಗ್ರರ ಬಂಧನ; 24 ಬಾಂಬು ವಶ

Ujjain- Bhopal and Nagpur ATS arrest 4 terrorists 24 bombs seized
ಉಜ್ಜಯಿನಿ, ಜ.1: ಹೊಸ ವರ್ಷದ ಸಂದರ್ಭದಲ್ಲಿ ಭಯೋತ್ಪಾದನಾ ನಿಗ್ರಹ ದಳ ಭರ್ಜರಿ ಬೇಟೆಯಾಡಿದೆ. ಸಿಮಿ ಭಯೋತ್ಪಾದಕ ಸಂಘನೆಗೆ ಸೇರಿದ ಶಂಕಿತ ನಾಲ್ವರು ಉಗ್ರರನ್ನು ಎಟಿಎಸ್ ಅಧಿಕಾರಿಗಳು ಮಂಗಳವಾರ ಮಧ್ಯರಾತ್ರಿ ಬಂಧಿಸಿದ್ದಾರೆ.

ಮಧ್ಯ ಪ್ರದೇಶದ ಉಜ್ಜಯಿನಿ ಬಳಿ ಭೂಪಾಲ್ ಮತ್ತು ನಾಗ್ಪುರದ ATS ಅಧಿಕಾರಿಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಬಂಧಿಸಲಾಗಿದೆ. ಬಂಧಿತ ಉಗ್ರರಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ.

ಪಾಟ್ನಾ ಸರಣಿ ಸ್ಫೋಟದ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ATS ಅಧಿಕಾರಿಗಳು ದಾಳಿ ನಡೆಸಿದ್ದು, ಉಗ್ರರು ಭಾರಿ ಪ್ರಮಾಣದ ವಿಧ್ವಂಸಕ ಕೃತ್ಯವೆಸಗಲು ಸಜ್ಜಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಉಗ್ರರನ್ನು ಜಾವೇದ್ ನಗೋರಿ (Mahidpur), ಅಬ್ದುಲ್ ಅಜೀಜ್ (Kandar Mohalla), ಮಹಮದ್ ಅದಿಲ್ ನಗೋರಿ (Nagori mohalla) ಮತ್ತು ಅಬ್ದುಲ್ ವಹೀದ್ ಖಾನ್ (Wazir park) ಎಂದು ಗುರುತಿಸಲಾಗಿದೆ ಎಂದು ATS ಮುಖ್ಯಸ್ಥ ಮತ್ತು ಪೊಲೀಸ್ ಅಧಿಕಾರಿ ಸಂಜೀವ್ ಶಮಿ ಅವರು ತಿಳಿಸಿದ್ದಾರೆ.

ಬಂಧನದ ವೇಳೆ ಶಂಕಿತ ಉಗ್ರರಿಂದ 24 ಬಾಂಬುಗಳು, 12 ಕಚ್ಚಾ ಬಾಂಬ್, 900 ಜಿಲೇಟಿನ್ ಕಡ್ಡಿ ಮತ್ತು 600 ಡಿಟೊನೇಟರುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬಂಧಿತರನ್ನು ವಿಚಾರಣೆ ನಡೆಸುತ್ತಿರುವುದಾಗಿ ಶಮಿ ತಿಳಿಸಿದ್ದಾರೆ.

ಕಳೆದ ವಾರವಷ್ಟೇ ರಾಜ್ಯ ಭಯೋತ್ಪಾದನ ನಿಗ್ರಹ ದಳ ಐವರು ಶಂಕಿತ ಉಗ್ರರನ್ನು ಬಾರ್ವಾನಿ ಜಿಲ್ಲೆಯ ಸೇಂದ್ವರ ಪತಾರ್ ಎಂಬಲ್ಲಿ ಬಂಧಿಸಿತ್ತು. (ರಾಂಚಿ - ಐಎಂ ಭಯೋತ್ಪಾದಕರ ಹೊಸ ನೆಲವೀಡು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+