ಉಡ್ತಾ ಪಂಜಾಬ್ ಚಿತ್ರಕ್ಕೆ 89 ಕಟ್, ಸೆನ್ಸಾರಿಗೆ ಟ್ವೀಟ್ ಪೆಟ್ಟು

Posted By:
Subscribe to Oneindia Kannada

ಬೆಂಗಳೂರು, ಜೂನ್ 07: ನೈಜ ಕಥೆಗಳನ್ನು ಆಧಾರಿಸಿ ಸಿನಿಮಾ ನಿರ್ಮಿಸಿ, ನಿರ್ದೇಶಿಸುವ ಅನುರಾಗ್ ಕಶ್ಯಪ್ ಅವರಿಗೆ ನಿಜಕ್ಕೂ ಆಘಾತವಾಗಿದೆ. ಪಂಜಾಬಿನ ಡ್ರಗ್ ಮಾಫಿಯಾ ಸತ್ಯಾಸತ್ಯತೆ ಬಿಚ್ಚಿಡುವ 'ಉಡ್ತಾ ಪಂಜಾಬ್' ಚಿತ್ರಕ್ಕೆ 89ಕಟ್ ಗಳನ್ನು ಸೆನ್ಸಾರ್ ಮಂಡಳಿ ಹೇಳಿದೆ. ನಾವೇನು ಭಾರತದಲ್ಲಿದ್ದೇವಾ? ಅಥವಾ ಇದು ಉತ್ತರ ಕೊರಿಯಾನಾ? ಎಂದು ಕಶ್ಯಪ್ ಪ್ರಶ್ನಿಸಿದ್ದಾರೆ.

ಒಂದು ಚಿತ್ರದಲ್ಲಿ 89 ಸೀನ್ ಕಟ್ ಮಾಡುವುದೆಂದರೆ ಬಹುತೇಕ ಸಿನಿಮಾದ ಆಶಯವನ್ನೇ ಕೊಂದಂತೆ. ನಾನು ಉತ್ತರ ಕೊರಿಯಾದ ಸರ್ವಾಧಿಕಾರಿಯ ಆಡಳಿತದಲ್ಲಿದ್ದಂತೆ ಭಾಸವಾಗುತ್ತಿದೆ ಎಂದು ಅನುರಾಗ್ ಕಶ್ಯಪ್ ಪ್ರತಿಕ್ರಿಯಿಸಿದ್ದಾರೆ. [ಬೆಂಗ್ಳೂರು ಈಗ ಡ್ರಗ್ ಮಾಫಿಯಾ ಡೀಲ್ ಗೆ ತಂಗುದಾಣ!]

#UdtaPunjab or #UdtaPM: Twittterati debates Censor Board’s illogical diktats

ಇದೆಲ್ಲವೂ ಆಡಳಿತರೂಢ ಬಿಜೆಪಿ-ಅಕಾಲಿದಳದ ಕುಮ್ಮಕ್ಕು, ಈ ಚಿತ್ರದಿಂದ ಪಂಜಾಬಿನ ಸಂಸ್ಕೃತಿ, ಘನತೆ ಹಾಳಾಗುತ್ತದೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಅಸಲಿಗೆ ಹಾಳಾಗಿರುವ ಘನತೆ, ಗೌರವ ಬಗ್ಗೆ ಜನತೆಗೆ ಸಂದೇಶ ತಲುಪಿಸಲು ಈ ಚಿತ್ರ ಸಿದ್ಧವಾಗಿದೆ.

ಪಂಜಾಬಿನ ಯುವ ಪೀಳಿಗೆ ಡ್ರಗ್ಸ್ ಜಾಲದಲ್ಲಿ ಸಿಲುಕಿ ಹಾಳಾಗಿರುವುದನ್ನು ಏಮ್ಸ್ ಹಾಗೂ ಯುಎನ್ ವರದಿ ದೃಢಪಡಿಸಿದೆ. ಮಾದಕ ದ್ರವ್ಯ ಮಾರಾಟದಿಂದ ಕೋಟ್ಯಂತರ ರು ಅದಲು ಬದಲಾಗುತ್ತಿದೆ. [60 ಸಾವಿರ ಕೋಟಿ ದಂಧೆ]

ಇದೆಲ್ಲವನ್ನು ಬಹಿರಂಗಪಡಿಸಲು ಹೊರಟ ಚಿತ್ರ ತಂಡಕ್ಕೆ ಈಗ ಸೆನ್ಸಾರ್ ಮಂಡಳಿ ಈ ರೀತಿ ಆದೇಶ ನೀಡಿದೆ. ಚಿತ್ರದ ಶೀರ್ಷಿಕೆಯಿಂದ 'ಪಂಜಾಬ್' ತೆಗೆಯಿರಿ ಎನ್ನುವುದರಿಂದ ಹಿಡಿದು 89ಕ್ಕೂ ಅಧಿಕ ದೃಶ್ಯಗಳನ್ನು ತೆಗೆದು ಹಾಕಲು ಸೂಚಿಸಲಾಗಿದೆ.

ಸೆನ್ಸಾರ್ ಕಟ್ ವಿರುದ್ಧ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ಸಾರ್ವಜನಿಕರು, ಸೆಲೆಬ್ರಿಟಿಗಳು ಕಿಡಿಕಾರಿದ್ದಾರೆ. #udtapm ಎಂದು ಟ್ಯಾಗ್ ಮಾಡಿ ವಿದೇಶಗಳಿಗೆ ಹಾರುವ ಮೋದಿ ವಿರುದ್ಧ ಕೂಡಾ ಟ್ವೀಟ್ಸ್ ಗಳು ಹರಿದು ಬಂದಿವೆ.

ಉಡ್ತಾ ಪಂಜಾಬ್ ಚಿತ್ರಕ್ಕೆಪೆಟ್ಟು, ಮೋದಿ ವಿರುದ್ಧವೂ ಟ್ವೀಟ್

ಉಡ್ತಾ ಪಂಜಾಬ್ ಚಿತ್ರಕ್ಕೆಪೆಟ್ಟು, ಮೋದಿ ವಿರುದ್ಧವೂ ಟ್ವೀಟ್

-
-
-
-
-

ಉಡ್ತಾ ಪಂಜಾಬ್ ಒಂದು ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದ್ದು, ಏಕ್ತಾಕಪೂರ್ ಅವರ ಬಾಲಾಜಿ ಮೋಷನ್ ಪಿಕ್ಚರ್ಸ್ ನಿರ್ಮಿಸಿದೆ. ಅನುರಾಗ್ ಕಶ್ಯಪ್, ಸಮೀರ್ ನಾಯರ್ ಸೇರಿದಂತೆ ಅನೇಕರು ಸಹ ನಿರ್ಮಾಪಕರಾಗಿದ್ದಾರೆ.

ಚಿತ್ರಕ್ಕೆ ಕಥೆ ಬರೆದಿರುವ ಅಭಿಶೇಕ್ ಚೌಬೆ ಅವರು ನಿರ್ದೇಶನ ಕೂಡಾ ಮಾಡಿದ್ದಾರೆ. ಶಹೀದ್ ಕಪೂರ್, ಕರೀನಾ ಕಪೂರ್, ಆಲಿಯಾ ಭಟ್, ದಿಲ್ಜಿತ್ ದೊಸಾನ್ಜಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಜೂನ್ 17ಕ್ಕೆ ಚಿತ್ರ ಬಿಡುಗಡೆಯಾಗಲು ಸಿದ್ಧವಾಗಿದೆ. ಯ್ಯೂಟ್ಯೂಬ್ ನಲ್ಲಿ ಈಗಾಗಲೇ ಚಿತ್ರದ ಟ್ರೈಲರ್ ಸೂಪರ್ ಹಿಟ್ (12,274,402 ಬಾರಿ ವೀಕ್ಷಣೆ)ಆಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The users of the micro-blogging site, Twitter, have expressed their protest against the latest diktat of the Censor Board of Film Certification (CBFC). The Censor Board wants the word Punjab to be removed from the title of the upcoming Bollywood flick, Udta Punjab.
Please Wait while comments are loading...