ಜೆಇಇ ಪರೀಕ್ಷೆಯಲ್ಲಿ ಕಲ್ಪಿತ್ ಗಳಿಸಿದ್ದು 360ಕ್ಕೆ 360

ಐಐಟಿ, ಇಂಜಿನಿಯರಿಂಗ್ ಪ್ರವೇಶಕ್ಕಾಗಿ ನಡೆಸಲಾಗುವ ಜೆಇಇ ಮುಖ್ಯಪರೀಕ್ಷೆಯಲ್ಲಿ ರಾಜಸ್ಥಾನದ ಉದಯ್ ಪುರ ಮೂಲದ ಗುಮಾಸ್ತರೊಬ್ಬರ (ಕಾಂಪೌಂಡ್) ಮಗ 360ಕ್ಕೆ 360 ಅಂಕ ಗಳಿಸಿ ಅಚ್ಚರಿಯ ಸಾಧನೆ ಮಾಡಿದ್ದಾರೆ.

ನವದೆಹಲಿ, ಏಪ್ರಿಲ್ 27: ಐಐಟಿ, ಇಂಜಿನಿಯರಿಂಗ್ ಪ್ರವೇಶಕ್ಕಾಗಿ ನಡೆಸಲಾಗುವ ಜೆಇಇ ಮುಖ್ಯಪರೀಕ್ಷೆಯಲ್ಲಿ ರಾಜಸ್ಥಾನದ ಉದಯ್ ಪುರ ಮೂಲದ ಗುಮಾಸ್ತರೊಬ್ಬರ ಮಗ 360ಕ್ಕೆ 360 ಅಂಕ ಗಳಿಸಿ ಅಚ್ಚರಿಯ ಸಾಧನೆ ಮಾಡಿದ್ದಾರೆ. 17 ವರ್ಷದ ಕಲ್ಪಿತ್ ವೀರವಾಲ್ ರಾಷ್ಟ್ರೀಯ ಮಟ್ಟದಲ್ಲಿ ನಂ.1 ಸ್ಥಾನ ಪಡೆದಿದ್ದಾರೆ.

'ಫಲಿತಾಂಶ ನೋಡಿ ನನಗೆ ಮೊದಲಿಗೆ ನಂಬಲಾಗಲಿಲ್ಲ. ಸಿಬಿಎಸ್ ಇ ಅಧ್ಯಕ್ಷರಾದ ಆರ್.ಕೆ. ಚತುರ್ವೆದಿ ಕರೆ ಮಾಡಿ, 'ಪರಿಶಿಷ್ಟ ಜಾತಿ ಮತ್ತು ಸಾಮಾನ್ಯ ವಿಭಾಗ ಎರಡಲ್ಲೂ ನಾನೇ ಟಾಪರ್ ಆಗಿರುವ ವಿಷಯ ತಿಳಿಸಿದರು. 360ಕ್ಕೆ 360 ಅಂಕ ಪಡೆದಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ಶುಭಕೋರಿದರು' ಎಂದು ಕಲ್ಪಿತ್ ಪ್ರತಿಕ್ರಿಯಿಸಿದ್ದಾರೆ.

Kalpit

ಎಂಡಿಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಯಾದ ಕಲ್ಪಿತ್, ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. 'ಜೆಇಇ ಮುಖ್ಯಪರೀಕ್ಷೆಯಲ್ಲಿನ ಸಾಧನೆಗೆ ಖುಷಿಯಾಗಿದೆ ಎಂದಿದ್ದಾರೆ. ಪ್ರತಿ ದಿನ 4-5 ಗಂಟೆ ಮನೆಯಲ್ಲಿ ಓದುತ್ತಿದ್ದೆ ಅದೇ ಯಶಸ್ಸಿನ ಗುಟ್ಟು ಎಂದರು.

ಕಲ್ಪಿತ್ ಅವರು ಈ ಹಿಂದೆ ರಾಷ್ಟ್ರಮಟ್ಟದ ಜ್ಯೂನಿಯರ್ ಒಲಿಂಪಿಯಾಡ್, ರಾಷ್ಟ್ರೀಯ ಪ್ರತಿಭಾ ಶೋಧ ಪರೀಕ್ಷೆಗಳಲ್ಲಿ ಅಗ್ರಸ್ಥಾನ ಗಳಿಸಿದ್ದರು.

ಏಪ್ರಿಲ್ 2, ಏಪ್ರಿಲ್ 8 ಹಾಗೂ 9(ಆನ್ ಲೈನ್) ರಂದು ದೇಶದ 1,781 ಕೇಂದ್ರಗಳಲ್ಲಿ ನಡೆದ ಜೆಇಇ ಪರೀಕ್ಷೆಗೆ 10.2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು. ಜೆಇಇ ಮುಖ್ಯ ಪರೀಕ್ಷೆ ಪಾಸಾದವರು ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ತೆಗೆದುಕೊಳ್ಳುತ್ತಾರೆ. ಬಿಇ, ಬಿ ಟೆಕ್, ಬಿ ಆರ್ಕ್ ಕೋರ್ಸ್ ಗಳಿಗೆ ಸೇರಬಹುದು. ಐಐಟಿ ಐಐಐಟಿ, ಎನ್ ಐಟಿ ಹಾಗೂ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಜೆಇಇ ಸ್ಕೋರ್ ಪರಿಗಣಿಸಲಾಗುತ್ತದೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+