ವೀಕೆಂಡ್‌ನಲ್ಲೂ ಇಮೇಲ್‌ಗೆ ಉತ್ತರಿಸಬೇಕು, ಆರಾಮಾಗಿರಲು ಬರೋದಾದ್ರೆ ಕಂಪನಿಗೆ ಬರಬೇಡಿ ಎಂದ Uber CEO

ಉಬರ್ ಸಿಇಒ ದಾರಾ ಖೋಸ್ರೋಶಾಹಿ ಅವರು ತಮ್ಮ ಕಂಪನಿಯ ಆಫೀಸ್‌ ಕಲ್ಚರ್‌ ಬಗ್ಗೆ ನೀಡಿರುವ ಹೇಳಿಕೆ ಇದೀಗ ಕಾರ್ಪೊರೇಟ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಉಬರ್ ಕಂಪನಿಯಲ್ಲಿ ಕೆಲಸ ಮಾಡುವುದು ಅಷ್ಟು ಸುಲಭವಲ್ಲ. ಇಲ್ಲಿ ಉದ್ಯೋಗಿಗಳು ವೀಕೆಂಡ್‌ನಲ್ಲೂ ಇಮೇಲ್‌ಗಳಿಗೆ ಕಡ್ಡಾಯವಾಗಿ ಉತ್ತರಿಸುವ ಮೂಲಕ ಸಕ್ರಿಯವಾಗಿರಬೇಕು ಎಂದು ಸಿಇಒ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಆರಾಮದಾಯಕ ಕೆಲಸ ಅಥವಾ ಸುಲಭದ ಕೆಲಸವನ್ನ ಬಯಸುವವರು ನಮ್ಮ ಕಂಪನಿಗೆ ಸೇರುವ ಯೋಚನೆಯೇ ಮಾಡಬೇಡಿ ಎಂದು ಅವರು ನೇರವಾಗಿ ಹೇಳಿದ್ದಾರೆ.

Uber CEO Dara Khosrowshahi Warns Staff Expects Weekend Email Replies Says Don t Coast At Work

ವಾರಾಂತ್ಯದಲ್ಲಿಯೂ ರಿಪ್ಲೈಲ್‌ ಮಾಡಬೇಕು: ವೀಕೆಂಡ್ ಕೆಲಸ ಅನಿವಾರ್ಯ

ಇತ್ತೀಚೆಗೆ ಫಾರ್ಚೂನ್ ಫಾರ್ಚ್ಯುನ್ ಮ್ಯಾಗ್ಜಿನ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಉಬರ್ ಸಿಇಒ, ತಮ್ಮ ಉದ್ಯೋಗಿಗಳು ಕಠಿಣ ಪರಿಶ್ರಮ ಪಡಬೇಕು ಮತ್ತು ನಿರಂತರವಾಗಿ ಫಲಿತಾಂಶಗಳನ್ನ ನೀಡಬೇಕು ಎಂದು ನಿರೀಕ್ಷಿಸುವುದಾಗಿ ತಿಳಿಸಿದ್ದಾರೆ. "ಕೇವಲ ಕಾಲಹರಣ ಮಾಡಲು ಮತ್ತು ಆರಾಮಾಗಿರಲು ಇಲ್ಲಿಗೆ ಬರಬೇಡಿ" ಎಂದು ಅವರು ಎಚ್ಚರಿಸಿದ್ದಾರೆ.

ಕಠಿಣ ಪರಿಶ್ರಮದ ಒಂದು ಭಾಗವೆಂದರೆ ಶನಿವಾರದಂದು ತಂಡಕ್ಕೆ ಇಮೇಲ್ ಕಳುಹಿಸುವುದು. ಒಂದು ವೇಳೆ ಶನಿವಾರದಂದು ನನ್ನ ಇಮೇಲ್‌ಗೆ ಉದ್ಯೋಗಿಗಳಿಂದ ಪ್ರತಿಕ್ರಿಯೆ ಬರದಿದ್ದರೆ, ಭಾನುವಾರ ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ( ? ) ಮತ್ತೊಂದು ಇಮೇಲ್ ಕಳುಹಿಸಿ, 'ಏನಾಗುತ್ತಿದೆ?' ಎಂದು ಕೇಳುತ್ತೇನೆ ಎಂದು ತಮ್ಮ ಕಾರ್ಯವೈಖರಿಯನ್ನ ವಿವರಿಸಿದ್ದಾರೆ.

ಕಠಿಣ ಪರಿಶ್ರಮ ಇಲ್ಲದಿದ್ದರೆ ವಜಾ

ಉಬರ್ ಕಂಪನಿಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಉದ್ಯೋಗಿಗಳಿಗೆ ಮೊದಲು ಎಚ್ಚರಿಕೆ ಹಾಗೂ ಫಿಡ್‌ಬ್ಯಾಕ್‌ ನೀಡಲಾಗುತ್ತದೆ. ಒಂದು ವೇಳೆ ಅವರು ತಮ್ಮ ಕೆಲಸವನ್ನ ಸುಧಾರಿಸಿಕೊಳ್ಳದಿದ್ದರೆ, ಅಂತಹವರನ್ನ ನಿರ್ದಾಕ್ಷಿಣ್ಯವಾಗಿ ಕಂಪನಿಯಿಂದ ಹೊರಹಾಕಲಾಗುವುದು ಎಂದು ಖೋಸ್ರೋಶಾಹಿ ಸ್ಪಷ್ಟಪಡಿಸಿದ್ದಾರೆ.

ಇಲ್ಲಿ ಉದ್ಯೋಗಿಗಳಿಗೆ ಕಲಿಯಲು ಸಾಕಷ್ಟು ಅವಕಾಶಗಳಿವೆ ಮತ್ತು ಜಗತ್ತಿನಲ್ಲಿ ನಿಜವಾದ ಬದಲಾವಣೆ ತರುವ ಶಕ್ತಿ ಅವರಿಗಿದೆ. ಆದರೆ, ಕೆಲಸದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಅವರು ಹೇಳಿದ್ದಾರೆ.

ನಷ್ಟದಿಂದ ಲಾಭದತ್ತ ಉಬರ್ ಕಂಪನಿ ಪಯಣ

2017ರಲ್ಲಿ ದಾರಾ ಖೋಸ್ರೋಶಾಹಿ ಅವರು ಉಬರ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡಾಗ, ಕಂಪನಿಯು ವಾರ್ಷಿಕವಾಗಿ 2.5 ಬಿಲಿಯನ್‌ನಿಂದ 3 ಬಿಲಿಯನ್ ಡಾಲರ್‌ನಷ್ಟು ಭಾರಿ ನಷ್ಟದಲ್ಲಿತ್ತು. ಆ ಸಮಯದಲ್ಲಿ ಅವರು ಕಂಪನಿಯ ತಂತ್ರಗಾರಿಕೆ ಹಾಗೂ ಕಚೇರಿ ಸಂಸ್ಕೃತಿಯನ್ನ ಸಂಪೂರ್ಣವಾಗಿ ಬದಲಾಯಿಸಿದರು.

ಈ ಕಟ್ಟುನಿಟ್ಟಿನ ನಿಯಮಗಳ ಫಲವಾಗಿ, ಕಳೆದ ವರ್ಷ ಉಬರ್ ಕಂಪನಿಯು 9.8 ಬಿಲಿಯನ್ ಡಾಲರ್‌ನಷ್ಟು ಫ್ರೀ ಕ್ಯಾಶ್‌ ಫ್ಲೋ ಗಳಿಸಿದೆ. ನಮ್ಮ ಈ ಕಠಿಣ ಪರಿಶ್ರಮದ ಸಂಸ್ಕೃತಿಯೇ ಇಂದು ಕಂಪನಿಯ ಯಶಸ್ಸಿಗೆ ಕಾರಣ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ವೈಯಕ್ತಿಕ ಜೀವನ ಮತ್ತು ಕಚೇರಿ ಸಂಸ್ಕೃತಿ ನಡುವೆ ಹೊಂದಾಣಿಕೆ

ಕಠಿಣ ಪರಿಶ್ರಮ ಎಂದರೆ ದಿನದ 24 ಗಂಟೆಯೂ ಯಂತ್ರದಂತೆ ಕೆಲಸ ಮಾಡುವುದಲ್ಲ, ಕೆಲಸದ ಜೊತೆಗೆ ಹೊಂದಾಣಿಕೆಯೂ ಇರಬೇಕು ಎಂಬುದನ್ನ ಖೋಸ್ರೋಶಾಹಿ ಒಪ್ಪಿಕೊಳ್ಳುತ್ತಾರೆ. ಅವರು ಪ್ರತಿದಿನ ತಮ್ಮ ಕುಟುಂಬದೊಂದಿಗೆ ರಾತ್ರಿಯ ಊಟಕ್ಕಾಗಿ ಎರಡು ಗಂಟೆಗಳ ಸಮಯವನ್ನ ಮೀಸಲಿಡುತ್ತಾರೆ. ಆದರೆ ಊಟ ಮುಗಿದ ಬಳಿಕ, ರಾತ್ರಿ 9:30ರ ಸುಮಾರಿಗೆ ಮತ್ತೆ ತಮ್ಮ ಇಮೇಲ್‌ಗಳನ್ನ ಪರಿಶೀಲಿಸುತ್ತಾರೆ.

ಹಾಗೆಯೇ ಬೆಳಗ್ಗೆ 5:30ಕ್ಕೆ ಎದ್ದ ತಕ್ಷಣ ಮತ್ತೆ ಕೆಲಸಕ್ಕೆ ಮರಳುತ್ತಾರೆ. "ಜೀವನದಲ್ಲಿ ಕಠಿಣ ಪರಿಶ್ರಮವೇ ಅತ್ಯಂತ ದೊಡ್ಡ ಕೌಶಲ್ಯ. ಬೇರೆಯವರು ನನಗಿಂತ ಬುದ್ಧಿವಂತರಾಗಿರಬಹುದು, ಆದರೆ ನನ್ನಷ್ಟು ಕಠಿಣವಾಗಿ ಕೆಲಸ ಮಾಡಲು ನಾನು ಯಾರಿಗೂ ಬಿಡುವುದಿಲ್ಲ" ಎಂದು ಅವರು ತಮ್ಮ ಯಶಸ್ಸಿನ ಗುಟ್ಟನ್ನು ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+