Get Updates
Get notified of breaking news, exclusive insights, and must-see stories!

ರಾಯಲ್‌ ಎನ್‌ಫೀಲ್ಡ್‌ ಸೇರಿ ಈ ದ್ವಿಚಕ್ರ ವಾಹನಗಳ ದರ ಭರ್ಜರಿ ಇಳಿಕೆ

Two Wheeler Price Cut 2025: ಬೈಕ್‌ ಖರೀದಿ ಮಾಡಬೇಕೆಂಬ ಆಸೆ ಯಾರಿಗೆ ಇರುವುದಿಲ್ಲ ಹೇಳಿ. ಅದರಲ್ಲೂ ರಾಯಲ್ ಎನ್‌ಫೀಲ್ಡ್‌ ಬೈಕ್‌ ಕೊಂಡುಕೊಳ್ಳಬೇಕೆಂಬ ಬಹುತೇಕರ ಕನಸು ದುಬಾರಿ ದುನಿಯಾದಿಂದ ಕನಸಾಗಿಯೇ ಉಳಿದುಬಿಡುತ್ತಿತ್ತು. ಆದರೆ, ಇದೀಗ ಅಂತಹವರಿಗೆ ಭರ್ಜರಿ ಸಿಹಿಸುದ್ದಿಯೊಂದು ಇದೆ. ಇದೇ ಸೆಪ್ಟೆಂಬರ್ 22ರಿಂದ ಹೊಸ ಜಿಎಸ್‌ಟಿ ಜಾರಿಯಾಗಲಿದ್ದು, ಇದರಿಂದ ಈ ಬೈಕ್‌ ಸೇರಿದಂತೆ ಹಲವು ದ್ವಿಚಕ್ರ ವಾಹನಗಳ ಬೆಲೆ ಭಾರೀ ಕುಸಿತವಾಗಲಿದೆ. ಹಾಗಾದ್ರೆ ಎಷ್ಟಕ್ಕೆ ಇಳಿಕೆ ಆಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ದುಬಾರಿ ದರದಿಂದ ಬಹುತೇಕ ಮಂದಿ ದ್ವಿಚಕ್ರ ವಾಹನಗಳ ಖರೀದಿಸುವ ಆಸೆಯಿದ್ದರೂ ಹಿಂದೇಟು ಹಾಕುತ್ತಿದ್ದಾರೆ. ಈ ನಡುವೆಯೇ ಇಂತಹವರಿಗೆ ಶುಭಸುದ್ದಿ ಸಿಕ್ಕಿದ್ದು, ಸೆಪ್ಟೆಂಬರ್ 22ರಿಂದ ಇಂತಹ ದ್ವಿಚಕ್ರ ವಾಹನಗಳ ಬೆಲೆ ಕಡಿಮೆಯಾಗಲಿದೆ. ಯಾವೆಲ್ಲಾ ಬೈಕ್‌ಗಳ ಬೆಲೆ ಎಷ್ಟು ಕಡಿಮೆಯಾಗಲಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

Two-Wheeler Price Cut 2025 Royal Enfield Hero Bikes to Get Cheaper from September 22 Under New GST

ಬೈಕ್‌ ತೆಗೆದುಕೊಂಡು ಸುತ್ತಾಡಬೇಕು ಎನ್ನುವ ಕನಸು ಬಹುತೇಕ ಯುವಕರ ಕನಸಾಗಿರುತ್ತದೆ. ಆದರೆ, ಮಧ್ಯಮ ವರ್ಗದವರು ದುಬಾರಿ ದುನಿಯಾದಿಂದ ಬೈಕ್‌ ಕೊಂಡುಕೊಳ್ಳುವ ಆಸೆಯನ್ನೇ ಬಿಟ್ಟುಬಿಡುತ್ತಾರೆ. ಆದರೆ, ಇದೀಗ ಇಂತಹ ಯುವಕರಿಗೆ ಹೇಳಿ ಮಾಡಿಸಿದ 350 ಸಿಸಿ ಸೇರಿದಂತೆ ಇದರ ಒಳಗಿನ ಬೈಕ್‌ಗಳ ದರ ಕಡಿಮೆಯಾಗಲಿದ್ದು, ಕೊಂಡುಕೊಳ್ಳಲು ಒಂದು ಸುವರ್ಣಾವಕಾಶ ಅಂತೇ ಹೇಳಬಹುದು.

ಇನ್ನೂ ಕೆಲವೇ ದಿನಗಳಲ್ಲಿ ಕರ್ನಟಕದಲ್ಲಿ ನಾಡಹಬ್ಬ ದಸರಾ ಹಬ್ಬ ಎಂಟ್ರಿ ಕೊಡಲಿದೆ. ಇದಕ್ಕೂ ಮುಂಚಿತವಾಗಿಯೇ ಈ ಬೈಕ್‌ಗಳ ಬೆಲೆ ಹೊಸ ಜಿಎಸ್‌ಟಿ ದರದಂತೆ ಕಡಿಮೆಯಾಗಲಿವೆ. 350 ಸೇರಿ ಇದರ ಒಳಗಿನ ರಾಯಲ್ ಎನ್‌ಫೀಲ್ಡ್ ಮತ್ತು ಹೀರೋ ಮೋಟೋಕಾರ್ಪ್ ಎರಡೂ ಗ್ರಾಹಕರ ನೆಚ್ಚಿನ ಬೈಕ್‌ಗಳ ದರಗಳನ್ನು ಕಡಿಮೆಗೊಳಿಸಿವೆ. ಇದು ಇತ್ತೀಚೆಗಷ್ಟೇ ಜಿಎಸ್‌ಟಿ ಸಭೆಯಲ್ಲಿ ಘೋಷಣೆ ಮಾಡಿದ ಹೊಸ ಜಿಎಸ್‌ಟಿ 2.0 ದರ ಸುಧಾರಣೆಗಳಿಂದ ಈ ಕಡಿತ ಆಗಿದೆ.

ಇದು ಜಾರಿಯಾದ್ರೆ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ನೆಚ್ಚಿನ ದ್ವಿಚಕ್ರ ವಾಹನಗಳು ಸಿಗಲಿವೆ. ಹೊಸ ಬೆಲೆಗಳು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿವೆ ಎಂದು ಈಗಾಗಲೇ ಜಿಎಸ್‌ಟಿ ಸಭೆಯಲ್ಲಿ ತಿಳಿಸಲಾಗಿದೆ. ಮೊದಲನೇಯದಾಗಿ ರಾಯಲ್ ಎನ್‌ಫೀಲ್ಡ್‌ ತನ್ನ 350 ಸಿಸಿಯ ಬೈಕ್‌ಗಳಿಗೆ 22,000 ರೂಪಾಯಿಗಳವರೆಗೆ ಕಡಿತ ಆಗಲಿದೆ ಎಂದು ಘೋಷಣೆ ಮಾಡಲಾಗಿದೆ. ಕಡಿತದ ಜಿಎಸ್‌ಟಿ ದರಗಳ ಸಂಪೂರ್ಣ ಪ್ರಯೋಜನವನ್ನು ತನ್ನ ಗ್ರಾಹಕರಿಗೆ ವರ್ಗಾಯಿಸಲಾಗುವುದು ಕಂಪನಿ ತಿಳಿಸಿದೆ.

ಎನ್‌ಫೀಲ್ಡ್‌ ಖರೀದಿಸುವವರಿಗೆ ಭರ್ಜರಿ ಆಫರ್: ಸೆಪ್ಟೆಂಬರ್ 22ರಿಂದ ಹೊಸ ದರಗಳಲ್ಲಿ ದ್ವಿಚಕ್ರ ವಾಹನಗಳು (ಶೋ ರೂಂ) ಮಾರುಕಟ್ಟೆಯಲ್ಲಿ ಸಿಗಲಿದ್ದು, ಇದರಿಂದ ರಾಯಲ್ ಎನ್‌ಫೀಲ್ಡ್‌ ಜನಪ್ರಿಯ 350 ಸಿಸಿ ಬೈಕ್‌ ಪ್ರಿಯರ ಬಾಯಿಗೆ ಸಕ್ಕರೆ ಬಿದ್ದಂತಾಗಿದೆ. ಬಹುತೇಕ ಯುವಕರು ಈ ಗಾಡಿ ತೆಗೆದುಕೊಳ್ಳಬೇಕೆಂಬ ಆಸೆ ನೆರವೇರಿದಂತಾಗಲಿದೆ. ಈಗಾಗಲೇ ಸೆಪ್ಟೆಂಬರ್ 22 ಯಾವಾಗ ಬರಲಿದೆಯೋ ಎಂದು ಗ್ರಾಹಕರು ಕಾದು ಕುಳಿತಿದ್ದಾರೆ.

ಇನ್ನು 350 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯ ಇರುವ ಮಾದರಿಯ ಬೈಕ್‌ಗಳ ಬೆಲೆಗಳು ಹೊಸ ಜಿಎಸ್‌ಟಿ ದರಗಳ ಪ್ರಕಾರ, ಹೆಚ್ಚಳ ಆಗಲಿವೆ ಎಂದು ಕಂಪನಿ ತಿಳಿಸಿದೆ. ಅಂದರೆ, ಹೊಸ ಜಿಎಸ್‌ಟಿ ಜಾರಿಯು ರಾಯಲ್ ಎನ್‌ಫೀಲ್ಡ್‌ನ ಸಂಪೂರ್ಣ ಶ್ರೇಣಿಯ ಮೇಲೆ ಪರಿಣಾಮ ಬೀರಲಿದೆ. 350 ಸಿಸಿ ಒಳಗಿನ ಬೈಕ್‌ಗಳನ್ನು ಖರೀದಿ ಮಾಡುವವರಿಗೆ ಸಿಹಿಸುದ್ದಿಯಾಗಿದೆ. ಮತ್ತೊಂದಡೆ ಇದಕ್ಕಿಂತ ಹೆಚ್ಚಿನ ಸಿಸಿ ಹೊಂದಿರುವ ಬೈಕ್‌ಗಳನ್ನು ಕೊಂಡುಕೊಳ್ಳುವವರ ಆಸೆ ನಿರಾಸೆಯಾಗುವುದಂತೂ ಪಕ್ಕಾ..

ಹಿರೋ ಬೈಕ್‌ಗಳ ಬೆಲೆಯಲ್ಲಿ ಭಾರೀ ಕಡಿತ: ಹೀರೋ ಮೋಟೋಕಾರ್ಪ್ ದ್ವಿಚಕ್ರ ವಾಹನಗಳಲ್ಲಿ ದೇಶದ ಅತೀ ದೊಡ್ಡ ಕಂಪನಿಯಾಗುದ್ದು, ಇದು ಸಹ ಗ್ರಾಹಕರ ನೆಚ್ಚಿನ ಬೈಕ್‌ಗಳ ಬೆಲೆಯನ್ನು ಕಡಿಗೊಳಿಸಿ ಘೋಷಣೆ ಮಾಡಿದೆ. ಸುಮಾರು 15,743 ರೂಪಾಯಿಗಳವರೆಗೆ ಬೆಲೆ ಕಡಿಮೆ ಮಾಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ. ಹೊಸ ಬೆಲೆಗಳು ಸೆಪ್ಟೆಂಬರ್ 22ರಿಂದ ಜಾರಿಯಾಗಲಿದ್ದು, ದೇಶಾದ್ಯಂತ ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ, ಇದು ತನ್ನ ಸ್ಪ್ಲೆಂಡರ್ ಪ್ಲಸ್, ಗ್ಲಾಮರ್ ಮತ್ತು ಎಕ್ಸ್‌ಟ್ರೀಮ್ ಮಾದರಿಯ ಸ್ಕೂಟರ್‌ಗಳ ದರಗಳನ್ನು ಸಹ ಕಡಿಮೆ ಮಾಡಲಿದೆ.

ಜಿಎಸ್‌ಟಿ 2.0 ಸುಧಾರಣೆಗಳು ಬಳಕೆಯನ್ನ ಹೆಚ್ಚಿಸುತ್ತವೆ ಮತ್ತು ಭಾರತದ ಜಿಡಿಪಿಯನ್ನ ಹೆಚ್ಚಳ ಮಾಡುತ್ತವೆ. ದೇಶದಲ್ಲಿ ತುಂಬಾ ಜನರು ದ್ವಿಚಕ್ರ ವಾಹನಗಳನ್ನು ಹೊಂದಿದ್ದಾರೆ. ಬೆಲೆ ಕಡಿತದಿಂದ ಇದು ಸಾಮಾನ್ಯ ಜನರಿಗೆ ಹೆಚ್ಚು ಸುಲಭವಾಗಿ ಲಭ್ಯ ಆಗಲಿದ್ದು, ಇದರಿಂದ ಹಬ್ಬಗಳ ಮೊದಲು ಮಾರಾಟವನ್ನು ಹೆಚ್ಚಳ ಮಾಡುತ್ತವೆ ಎಂದು ಹೀರೋ ಮೋಟೋಕಾರ್ಪ್ ಸಿಇಒ ವಿಕ್ರಮ್ ಕಾಸ್ಬೇಕರ್ ಹೇಳಿದ್ದಾರೆ ಅಂತಾ ವರದಿಯಾಗಿದೆ. ಹೀಗೆ ದ್ವಿಚಕ್ರ ವಾಹನಗಳನ್ನು ಕೊಂಡುಕೊಳ್ಳುವವರಿಗೆ ಗುಡ್‌ ನ್ಯೂಸ್‌ ಸಿಕ್ಕಂತಾಗಿದೆ. ಈ ಕಡಿತದ ದರಗಳು ಇದೇ ಸೆಪ್ಟೆಂಬರ್ 22ರಿಂದ ಜಾರಿಯಾಗಲಿದ್ದು, ಗ್ರಾಹಕರು ಇದರ ಪ್ರಯೋಜನಾ ಪಡೆದುಕೊಳ್ಳಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+