ಗೂಡ್ಸ್‌ ರೈಲುಗಳ ನಡುವೆ ಡಿಕ್ಕಿ; ಮೂರು ಸಾವು

ಭೋಪಾಲ್, ಮಾರ್ಚ್ 01 : ಸರಕು ಸಾಗಣೆ ಮಾಡುವ ರೈಲುಗಳು ಅಪಘಾತಕ್ಕೀಡಾಗಿದ್ದು ಮೂವರು ಮೃತಪಟ್ಟಿದ್ದಾರೆ. ಒಂದು ರೈಲಿನ 13 ವ್ಯಾಗನ್ ಮತ್ತು ಇಂಜಿನ ಹಳಿ ತಪ್ಪಿದ್ದು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಮಧ್ಯಪ್ರದೇಶ ರಾಜ್ಯದ ಸಿಂಗ್ರೌಲಿ ಜಿಲ್ಲೆಯಲ್ಲಿ ಭಾನುವಾರ ಈ ಅಪಘಾತ ನಡೆದಿದೆ. ಭೋಪಾಲ್‌ನಿಂದ 7 ಕಿ.ಮೀ. ದೂರದಲ್ಲಿರುವ ಘನ್ಹಾರಿ ಎಂಬ ಗ್ರಾಮದಲ್ಲಿ ಖಾಲಿ ಸರಕು ಸಾಗಣೆ ರೈಲಿಗೆ ಕಲ್ಲಿದ್ದಲು ತುಂಬಿದ್ದ ರೈಲು ಡಿಕ್ಕಿಯಾಗಿದೆ.

ಸಿಂಗ್ರೌಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಶೆಂಡೆ ಈ ಕುರಿತು ಮಾಹಿತಿ ನೀಡಿದ್ದು, "ಡಿಕ್ಕಿ ಹೊಡೆದ ರೈಲು ಮಧ್ಯಪ್ರದೇಶದ ಅಮ್ಲೋರಿ ಗಣಿಯಿಂದ ಉತ್ತರ ಪ್ರದೇಶಕ್ಕೆ ಕಲ್ಲಿದ್ದಲು ಸಾಗಣೆ ಮಾಡುತ್ತಿತ್ತು" ಎಂದು ಹೇಳಿದ್ದಾರೆ.

Indian railways

ಘರ್ಷಣೆ ಬಳಿಕ ಒಂದು ರೈಲಿನ 13 ವ್ಯಾಗನ್ ಮತ್ತು ಇಂಜಿನ್ ಹಳಿ ತಪ್ಪಿ ಪಕ್ಕಕ್ಕೆ ಉರುಳಿವೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಕಾರ್ಯಾಚರಣೆ ಕೈಗೊಂಡು ಒಂದು ಶವವನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೃತಪಟ್ಟವರ ಗುರುತು ಇನ್ನೂ ಪತ್ತೆಯಾಗಿಲ್ಲ. ಇಬ್ಬರು ಚಾಲಕರು ಮತ್ತು ಪಾಯಿಂಟ್ ಮ್ಯಾನ್‌ ಮೃತಪಟ್ಟವರು ಶಂದು ಶಂಕಿಸಲಾಗಿದ್ದು, ಶವಗಳನ್ನು ಹೊರತೆಗೆದ ಬಳಿಕ ಗುರುತು ಪತ್ತೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+