ಇಬ್ಬರು ಪಾಕ್ ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ
ಶ್ರೀನಗರ, ಜು.25: ಗಡಿಯಲ್ಲಿ ಅಕ್ರಮವಾಗಿ ಒಳ ನುಸುಳಲು ಯತ್ನಿಸುತ್ತಿದ್ದ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಬಳಿ ಬುಧವಾರ ಬೆಳಗ್ಗೆ ಎನ್‌ಕೌಂಟರ್ ನಡೆದಿದ್ದು, ಹತ್ಯೆಗೀಡಾದವರ ಬಳಿಯಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಾಕ್ ಪ್ರೇರಿತ ಉಗ್ರರು ಗಡಿ ಮೂಲಕ ಭಾರತವನ್ನು ಪ್ರವೇಶಿಸಿ ವಿಧ್ವಂಸಕ ಕೃತ್ಯ ಎಸಗಲು ಪದೇ ಪದೇ ಯತ್ನಿಸುತ್ತಿದ್ದರೂ ಭಾರತೀಯ ಸೇನೆ ಯೋಧರು ಇದನ್ನು ಯಶಸ್ವಿಯಾಗಿ ಹತ್ತಿಕ್ಕುತ್ತಿದ್ದಾರೆ.

ಟೆರರಿಸ್ಟ್ ಮತ್ತು ಭಾರತೀಯ ಸೇನೆ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಇಬ್ಬರು ಉಗ್ರರು ಅಡಗಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಉಗ್ರರ ಶೋಧಕಾರ್ಯ ಮುಂದುವರೆದಿದ್ದು ಎಷ್ಟು ಮಂದಿಯನ್ನು ಹತ್ಯೆ ಮಾಡಲಾಗಿದೆ ಎನ್ನುವ ಸಂಪೂರ್ಣ ವರದಿ ಇನ್ನೂ ಬರಬೇಕಿದೆ.
#Visuals from #JammuAndKashmir: Two terrorists have been gunned down in the encounter which started in Anantnag this morning. The encounter has concluded, combing operation is underway. (visuals deferred by unspecified time) pic.twitter.com/CR9G2Lzm6M
— ANI (@ANI) July 25, 2018












Click it and Unblock the Notifications