ಶಬರಿಮಲೆ ತೀರ್ಪಿಗೆ ಟ್ವೀಟ್ಸ್ 'ವೀರ್ಯ ಉತ್ಪಾದಕ' ಪುರುಷರಿಗೂ ನಿಷೇಧ ಹೇರಿ

ಬೆಂಗಳೂರು, ಸೆಪ್ಟೆಂಬರ್ 28: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಷೇಧ ಕುರಿತಂತೆ ಸುಪ್ರೀಂ ಕೋರ್ಟ್ ಸಂವಿಧಾನ ಪೀಠವು ಅರ್ಜಿ ವಿಚಾರಣೆ ನಡೆಸಿ ಮಹತ್ವದ ತೀರ್ಪು ನೀಡಿದ್ದು, ಮಹಿಳೆಯರ ದೇಗುಲ ಪ್ರವೇಶಕ್ಕೆ ಅನುಮತಿ ನೀಡಿದೆ.

ಪಂಚ ಸದಸ್ಯರ ನ್ಯಾಯಪೀಠದಲ್ಲಿದ್ದ ಏಕೈಕ ಮಹಿಳಾ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರು ಮಾತ್ರ ಈ ನಿರ್ಣಯ ವಿರುದ್ಧ ತಮ್ಮ ತೀರ್ಪು ನೀಡಿದ್ದಾರೆ. ಒಟ್ಟಾರೆ, ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ಜೋರಾಗಿದೆ.

ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪಂಚ ಸದಸ್ಯರ ಪೀಠವು, ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಶಬರಿಮಲೆ ದೇವಸ್ಥಾನವು ಪ್ರವೇಶವನ್ನು ನೀಡಬೇಕು ಎಂದು ಹೇಳಿದೆ. ಆದರೆ, ಸಮಾನತೆ ನೀಡಬೇಕು ಎಂಬ ಏಕೈಕ ಕಾರಣಕ್ಕೆ ಸಂಪ್ರದಾಯ ಕಟ್ಟಳೆ, ಆಚರಣೆಯನ್ನು ಪ್ರಶ್ನಿಸುವುದು, ಕಾನೂನು ಮೂಲಕ ಇದನ್ನು ಸಾಧಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ಕೇಳಿ ಬಂದಿದೆ

'ಋತುಮತಿಯಾದ ಮಹಿಳೆಯರು ದೇವಾಲಯ ಪ್ರವೇಶ ಮಾಡಬಾರದು' ಎಂದು ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರಯಾರ್ ಗೋಪಾಲಕೃಷ್ಣನ್‌ ನೀಡಿದ್ದ ಹೇಳಿಕೆ ವಿರುದ್ಧ ಮಹಿಳೆಯರು ತಿರುಗಿ ಬಿದ್ದಿದ್ದರು. ದೇವಾಲಯ ಪ್ರವೇಶ ಮಾಡುವುದಾದರೆ ಮುಟ್ಟಾಗಿದ್ದಾರೆಯೇ ಇಲ್ಲವೇ ಎಂಬುದನ್ನು ಪತ್ತೆ ಹಚ್ಚಿ ನಂತರ ಅವಕಾಶ ಕಲ್ಪಿಸಬೇಕು ಎಂದು ನೀಡಿದ್ದ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ 'ಹ್ಯಾಪಿ ಟು ಬ್ಲಡ್ ' ಎಂಬ ಅಭಿಯಾನವೇ ಆರಂಭವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Array

ಸ್ವಯಂನಾಶಕ್ಕೆ ಭಾರತ ಸಿದ್ಧವಾಗುತ್ತಿದೆ.

ನಿನ್ನೆ ದಿನ ಅನೈತಿಕ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೊಟ್ಟ ತೀರ್ಪು ಅರಗಿಸಿಕೊಳ್ಳುವಷ್ಟರಲ್ಲೇ ಋತುಮತಿ ಸೇರಿದಂತೆ ಎಲ್ಲಾ ವಯೋಮಿತಿಯ ಮಹಿಳೆಯರಿಗೆ ಶಬರಿಮಲೆಗೆ ಪ್ರವೇಶ ಸಿಕ್ಕಿರುವುದು ಹುಬೇರುವಂತೆ ಮಾಡಿದೆ. ಭಾರತದ ಸಮಾಜ ನಾಶಕ್ಕೆ ಹೊರಗಿನ ವೈರಿಗಳು ಬೇಡ. ನಮ್ಮೊಳಗಿನ ವೈರಿಗಳೇ ಸಾಕು.

Array

'ವೀರ್ಯ ಉತ್ಪಾದಕ' ಪುರುಷರಿಗೂ ನಿಷೇಧ ಹೇರಿ

ಋತುಮತಿ ಮಹಿಳೆಯರು ತಿಂಗಳಲ್ಲಿ ನಾಲ್ಕೈದು ದಿನ ಅನುಭವಿಸುವ ನೋವಿಗೆ ಇಂಥ ಶಿಕ್ಷೆಯಾದರೆ, ಪ್ರತಿದಿನ, ಪ್ರತಿಕ್ಷಣ ವೀರ್ಯ ಉತ್ಪಾದಿಸುವ ಪುರುಷರನ್ನು ಮೊದಲು ನಿಷೇಧಿಸಿ

ಮಹಿಳಾ ಜಡ್ಜ್ ನೀಡಿದ ತೀರ್ಪಿನ ಬಗ್ಗೆ ಬರ್ಖಾ

ಮಹಿಳಾ ಜಡ್ಜ್ ಅವರು ನೀಡಿದ ತೀರ್ಪಿನ ಬಗ್ಗೆ ಅಚ್ಚರಿ, ಕುತೂಹಲ ವ್ಯಕ್ತಪಡಿಸಿದ ಪತ್ರಕರ್ತೆ ಬರ್ಖಾ ದತ್.

ಭಾರತದ ಪಾಲಿಗೆ ಸೂಪರ್ ಸೆಪ್ಟೆಂಬರ್

ಆಧುನಿಕ ಹಾಗೂ ಸಾಂಸ್ಕೃತಿಕವಾಗಿ ಪರಿವರ್ತನೆಗೊಂಡ ಭಾರತ ನಮ್ಮದಾಗುತ್ತಿದೆ. ಭಾರತದ ಪಾಲಿಗೆ ಸೂಪರ್ ಸೆಪ್ಟೆಂಬರ್ ಎಂದು ಟ್ವೀಟ್ ಬಂದಿದೆ.

ತೆಹ್ಸೀನ್ ಪೂನಾವಾಲಾ ಅವರಿಂದ ಟ್ವೀಟ್

ತೆಹ್ಸೀನ್ ಪೂನಾವಾಲಾ ಅವರಿಂದ ಟ್ವೀಟ್, ತಂತ್ರ ವಿದ್ಯೆಯ ವಿದ್ಯಾರ್ಥಿನಿಯಾದ ನಾನು ಪ್ರವೇಶ ನಿಷೇಧ ಏಕೆ ಎಂಬುದನ್ನು ಅರ್ಥ ಮಾಡಿಕೊಳ್ಳಬಲ್ಲೆ . ಸುಪ್ರೀಂಕೋರ್ಟ್ ನೀಡಿರುವ ಈ ತೀರ್ಪುಗೆ ತಲೆಬಾಗುವೆ.

ಮಹಿಳಾ ನ್ಯಾಯಮೂರ್ತಿ ಇಂದು ನೀಡಿದ ತೀರ್ಪು

ಮಹಿಳಾ ನ್ಯಾಯಮೂರ್ತಿ ಇಂದು ನೀಡಿದ ತೀರ್ಪಿನ ಬಗ್ಗೆ ಕೂಡಾ ಚರ್ಚೆ ನಡೆಯುತ್ತಿದೆ. ಆದರೆ, ಮಹಿಳೆಯಾಗಿ ಮಹಿಳೆ ಪರ ತೀರ್ಪು ನೀಡಬೇಕಿತ್ತು ಎಂಬ ಪೂರ್ವಾಗ್ರಹದಿಂದ ಹೊರ ಬನ್ನಿ ಎಂದು ಕೂಡಾ ಕೆಲವರು ಉತ್ತರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+