ಟ್ವಿಟ್ಟರ್ ನಲ್ಲಿ ಉಕ್ಕಿನ ಮಹಿಳೆ ಇಂದಿರಾ ಹುಟ್ಟುಹಬ್ಬ
ಬೆಂಗಳೂರು, ನ.19: ಭಾರತದ ಪ್ರಥಮ ಮಹಿಳಾ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ 98ನೇ ಹುಟ್ಟುಹಬ್ಬದ ಆಚರಣೆ ದೇಶದ ಹಲವೆಡೆ ಗುರುವಾರ ಆಚರಿಸಲಾಗುತ್ತಿದೆ. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಇಂದಿರಾ ಅವರ ಸಾಧನೆಗಳನ್ನು ಸ್ಮರಿಸಿದ್ದಾರೆ. ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಇಂದಿರಾ ಅವರ ಪರ -ವಿರೋಧ ಟ್ವೀಟ್ ಗಳು ಟ್ರೆಂಡಿಂಗ್ ನಲ್ಲಿದೆ.
ಇಂದಿರಾ ಪ್ರಿಯದರ್ಶಿನಿ ನೆಹರೂ ಆಗಿ ಹುಟ್ಟಿ ಇಂದಿರಾ ಗಾಂಧಿಯಾಗಿ ಜನಪ್ರಿಯರಾದರು. ಪಾರ್ಸಿ ವಕೀಲ ಫಿರೋಜ್ ರನ್ನು ವರಿಸಿ ಸಂಜಯ್ ಹಾಗೂ ರಾಜೀವ್ ಎಂಬ ಪುತ್ರರನ್ನು ಪಡೆದರು. ರಾಜೀವ್ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ನನ್ನ ಉತ್ತರಾಧಿಕಾರಿ ಎಂದು ಹೇಳಿದ್ದರಂತೆ.
ಆಪರೇಷನ್ ಬ್ಲೂ ಸ್ಟಾರ್ ನಂತರ ಸಿಖ್ ಅಂಗರಕ್ಷಕರಿಂದ ಅಕ್ಟೋಬರ್ 31, 1984ರಂದು ಸಫ್ದರ್ಜಂಗ್ ರಸ್ತೆಯ ನಿವಾಸದ ಬಳಿ ಆಕೆ ಹತರಾದರು. ಇಂದಿರಾ ಗಾಂಧಿ ಕೈಗೊಂಡ ಯೋಜನೆಗಳ ಜೊತೆಗೆ ಸಿಖ್ ಹತ್ಯಾಕಾಂಡ, ತುರ್ತು ಪರಿಸ್ಥಿತಿ ಹೇರಿಕೆ ಎಲ್ಲವೂ ಟ್ವಿಟ್ಟರ್ ನಲ್ಲಿ ಚರ್ಚಿತವಾಗುತ್ತಿದೆ,
ಇಂದಿರಾಗಾಂಧಿ ಅವರ ಸಮಾಧಿ ಸ್ಥಳವಾದ ಶಕ್ತಿ ಸ್ಥಳದಲ್ಲಿ ಮುಂಜಾನೆಯಿಂದಲೇ ಅನೇಕ ಗಣ್ಯರು ಆಗಮಿಸಿ ಹೂಗುಚ್ಛಗಳನ್ನು ಇರಿಸಿ ನಮನ ಸಲ್ಲಿಸಿದ್ದಾರೆ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮುಂತಾದವರು ನಮನ ಸಲ್ಲಿಸಿದವರಲ್ಲಿ ಮೊದಲಿಗರು.

ಎಲ್ಲವೂ ಟ್ವಿಟ್ಟರ್ ನಲ್ಲಿ ಚರ್ಚಿತ
ಆಪರೇಷನ್ ಬ್ಲೂ ಸ್ಟಾರ್ ನಂತರ ಸಿಖ್ ಅಂಗರಕ್ಷಕರಿಂದ ಅಕ್ಟೋಬರ್ 31, 1984ರಂದು ಸಫ್ದರ್ಜಂಗ್ ರಸ್ತೆಯ ನಿವಾಸದ ಬಳಿ ಆಕೆ ಹತರಾದರು. ಇಂದಿರಾ ಗಾಂಧಿ ಕೈಗೊಂಡ ಯೋಜನೆಗಳ ಜೊತೆಗೆ ಸಿಖ್ ಹತ್ಯಾಕಾಂಡ, ತುರ್ತು ಪರಿಸ್ಥಿತಿ ಹೇರಿಕೆ ಎಲ್ಲವೂ ಟ್ವಿಟ್ಟರ್ ನಲ್ಲಿ ಚರ್ಚಿತವಾಗುತ್ತಿದೆ,
|
#RememberingIndira ಟ್ರೆಂಡಿಂಗ್
#RememberingIndira ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.
|
ಉಕ್ಕಿನ ಮಹಿಳೆ ತುರ್ತು ಪರಿಸ್ಥಿತಿ ಹೇರಿದ್ದೇಕೆ?
ಉಕ್ಕಿನ ಮಹಿಳೆ ತುರ್ತು ಪರಿಸ್ಥಿತಿ ಹೇರಿದ್ದೇಕೆ? ಹೈಕೋರ್ಟ್ ನೀಡಿದ ತೀರ್ಪು ಇಷ್ಟವಾಗಲಿಲ್ಲವೇ?
|
ಇಂದಿರಾರನ್ನು ದುರ್ಗಾ ಎಂದ ಅಭಿಮಾನಿಗಳು
ಇಂದಿರಾ ಗಾಂಧಿರನ್ನು ದುರ್ಗಾ ಎಂದ ಅಭಿಮಾನಿಗಳು.
|
ರಾಜೀವ್ ಪ್ರತಾಪ್ ರೂಡಿಗೆ ಪ್ರಶಂಸೆ
ಇಂದಿರಾ ಗಾಂಧಿ ಅವರನ್ನು ಸ್ಮರಿಸಿದ ರಾಜೀವ್ ಪ್ರತಾಪ್ ರೂಡಿಗೆ ಪ್ರಶಂಸೆ
|
ಇಂದಿರಾ ಗಾಂಧಿ ಅವರ ಸಾಧನೆಗಳ ಸ್ಮರಣೆ
ಇಂದಿರಾ ಗಾಂಧಿ ಅವರ ಸಾಧನೆಗಳ ಸ್ಮರಣೆ, ಹೇಳಿಕೆಗಳನ್ನು ಟ್ವೀಟ್ ಮಾಡಲಾಗಿದೆ.












Click it and Unblock the Notifications