ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಟರ್ನೆಟ್‌ ಎಕ್ಸ್‌ಪ್ಲೋರರ್‌ ಸೇವೆ ಸ್ಥಗಿತ: ನಕ್ಕು ನಗಿಸುವ ಮೀಮ್‌

|
Google Oneindia Kannada News

90ರ ದಶಕದ ಇಂಟರ್ನೆಟ್‌ ಬಳಕೆದಾರರ ನೆಚ್ಚಿನ ಬ್ರೌಸರ್‌ 'ಇಂಟರ್ನೆಟ್‌ ಎಕ್ಸ್‌ಪ್ಲೋರರ್‌' (Internet Explorer) ಸೇವೆ ಜೂನ್‌ 15 ರಿಂದ ಸ್ಥಗಿತಗೊಳ್ಳಲಿದೆ. ಆ ಮೂಲಕ ಸುಮಾರು 27 ವರ್ಷಗಳ ಬ್ರೌಸರ್‌ ಇತಿಹಾಸ ಪುಟ ಸೇರಲಿದೆ. 1995ರಲ್ಲಿ ಆರಂಭವಾಗಿ 2003ರವರೆಗೂ ಇಂಟರ್ನೆಟ್ ಬಳಕೆದಾರರ ನೆಚ್ಚಿನ ಬ್ರೌಸರ್ ಆಗಿತ್ತು.

2003ರಲ್ಲಿ ಒಟ್ಟು ಇಂಟರ್ನೆಟ್ ಬಳಕೆದಾರರ ಪೈಕಿ ಶೇ.93 ರಷ್ಟು ಬಳಕೆದಾರರು ಇಂಟರ್ನೆಟ್‌ ಎಕ್ಸ್‌ಪ್ಲೋರರ್‌ ಉಪಯೋಗ ಮಾಡುತ್ತಿದ್ದರು. ಆರಂಭದಲ್ಲಿ ಇಂಟರ್ನೆಟ್‌ ಬಳಕೆದಾರರ ನೆಚ್ಚಿನ ಬ್ರೌಸರ್‌ ಆಗಿದ್ದ ಇಂಟರ್ನೆಟ್‌ ಎಕ್ಸ್‌ಪ್ಲೋರರ್‌ ಆ ಬಳಿಕ ಹೊಸ ಬ್ರೌಸರ್‌ಗಳ ಎದುರು ತನ್ನ ಪ್ರಾಮುಖ್ಯತೆ ಕಡಿಮೆಯಾಗಿತ್ತು. ಇದೀಗ ಮಾರುಟ್ಟೆಯಲ್ಲಿ ಇತರೆ ಕಂಪನಿಗಳ ಬ್ರೌಸರ್‌ಗಳಿಗೆ ಪೈಪೋಟಿ ಕೊಡಲಾಗದೇ, ಇಂಟರ್ನೆಟ್‌ ಎಕ್ಸ್‌ಪ್ಲೋರರ್‌ ಸ್ಥಗಿತಗೊಳ್ಳಲಿದೆ.

ಮೈಕ್ರೋಸಾಫ್ಟ್ 27 ವರ್ಷಗಳ ನಂತರ ಇಂಟರ್ನೆಟ್ ಎಕ್ಸ್‌ಪ್ಲೋರರ್ ಅನ್ನು ಮುಚ್ಚಲು ಸಿದ್ಧವಾಗುತ್ತಿದ್ದಂತೆ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಬಾಲ್ಯದಲ್ಲಿ ಇಂಟರ್ನೆಟ್‌ ಎಕ್ಸ್‌ಪ್ಲೋರರ್‌ ಮೂಲಕ ತಾವು ಸರ್ಫಿಂಗ್‌ ಮಾಡಿಕೊಂಡಿದ್ದನ್ನು ಮೆಲುಕು ಹಾಕಿದ್ದಾರೆ. ಇಂಟರ್ನೆಟ್‌ ಎಕ್ಸ್‌ಪ್ಲೋರರ್‌ ಕಾರ್ಯ ಸ್ಥಗಿತಗೊಳ್ಳುತ್ತಿರುವುದಕ್ಕೆ ನೆಟ್ಟಿಗರು ಸಾಕಷ್ಟು ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲೂ ತರೇವಾರಿ ಮೀಮ್‌ಗಳು ನೋಡುಗರಲ್ಲಿ ನಗೆ ಉಕ್ಕಿಸುತ್ತದೆ.

Twitter Flooded with Memes about Internet Explorer Shut Down From June 15

ಅತ್ಯುತ್ತಮ ಮೀಮ್ ವಿಚಾರ

90 ರ ದಶಕದ ಮಕ್ಕಳು ಸಹ ನಿಮ್ಮನ್ನು ಮಿಸ್ ಮಾಡಿಕೊಳ್ಳುವುದಿಲ್ಲ! TBH, ಇಂಟರ್ನೆಟ್ ಎಕ್ಸ್‌ಪ್ಲೋರರ್ ಅತ್ಯುತ್ತಮ ಮೀಮ್ ವಿಷಯವಾಗಿದೆ ಮತ್ತು ಯಾವಾಗಲೂ ನಾಸ್ಟಾಲ್ಜಿಯಾವನ್ನು ನೀಡುತ್ತದೆ!! ಯಾರಾದರೂ ನಿಧಾನ ಅಥವಾ ಪ್ರಾಚೀನ ಎಂದು ವ್ಯಂಗ್ಯವಾಡುವುದನ್ನು ತಪ್ಪಿಸಿಕೊಳ್ಳುತ್ತೇವೆ ಎಂದಿದ್ದಾರೆ.

ಜೂನ್ 15ರಿಂದ ಇಂಟರ್ನೆಟ್ ಎಕ್ಸ್‌ಪ್ಲೋರರ್ ಸೇವೆ ಸ್ಥಗಿತಗೊಳಿಸಲಿದೆ! ನೀವು ಇದನ್ನು ಕೊನೆಯಾಗಿ ಬಳಸಿದ್ದು ಯಾವಾಗ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.

ಇದೇ ಜೂನ್‌ನಲ್ಲಿ ಶ್ರೇಷ್ಠ ಇಂಟರ್ನೆಟ್ ಎಕ್ಸ್‌ಪ್ಲೋರರ್ ಗುಡ್‌ ಬೈ ಹೇಳುವ ಸಮಯ ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರರು RIP ಎಂದು ಪೋಸ್ಟ್ ಮಾಡಿದ್ದಾರೆ.

ನಗೆಯುಕ್ಕಿಸುವ ಹಲವು ಮೀಮ್‌ಗಳು

2021ರಲ್ಲಿ ಬ್ಲಾಗ್ ಪೋಸ್ಟ್‌ನಲ್ಲಿ, Microsoft ಇಂಟರ್ನೆಟ್ ಎಕ್ಸ್‌ಪ್ಲೋರರ್ 11 ಡೆಸ್ಕ್‌ಟಾಪ್ ಅಪ್ಲಿಕೇಶನ್ ಅನ್ನು ನಿವೃತ್ತಿಗೊಳಿಸಲಾಗುವುದು ಮತ್ತು Windows 10ನ ಕೆಲವು ಆವೃತ್ತಿಗಳಿಗೆ ಜೂನ್ 15, 2022 ರಂದು ಹಲವು ಸೇವೆಗಳು ಸ್ಥಗಿತಗೊಳ್ಳುತ್ತವೆ ಎಂದು ಘೋಷಣೆ ಮಾಡಿತ್ತು.

'ಬೆಂಗಳೂರಿನ ಹೆದ್ದಾರಿಯಲ್ಲಿ ಈಜಾಡೋಣ ಬಾ ಗೆಳೆಯ'- ಟ್ವಿಟ್ಟರ್ ಮೀಮ್ಸ್ 'ಬೆಂಗಳೂರಿನ ಹೆದ್ದಾರಿಯಲ್ಲಿ ಈಜಾಡೋಣ ಬಾ ಗೆಳೆಯ'- ಟ್ವಿಟ್ಟರ್ ಮೀಮ್ಸ್

ರೆಡ್‌ಮಂಡ್, ವಾಷಿಂಗ್‌ಟನ್ ಮೂಲದ ಟೆಕ್ ದೈತ್ಯ ತನ್ನ ಕ್ರೋಮಿಯಂ-ಆಧಾರಿತ ಎಡ್ಜ್ ಅನ್ನು ವಿಂಡೋಸ್ ಪಿಸಿಗಳಿಗೆ ಪ್ರಾಥಮಿಕ ಬ್ರೌಸರ್‌ನಂತೆ ನಿಧಾನವಾಗಿ ಪ್ರಮೋಟ್ ಮಾಡುತ್ತಿದೆ.

English summary
Internet Explorer made its debut 27 years back in 1995 as the bundled web browser with the Windows 95 operating system for PCs. Initially, users were asked to pay to get the browser and after a while you got it for free.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X