Tirupati Tirumala: ಜುಲೈ 25 ರಿಂದ ಸಿಗಲಿವೆ ವಿಶೇಷ ದರ್ಶನ ಟೋಕನ್‌ಗಳು- ವೆಬ್‌ಸೈಟ್‌, ಮಾಹಿತಿ, ವಿವರ

ತಿರುಪತಿ, ಜುಲೈ 22: ಅಕ್ಟೋಬರ್ ತಿಂಗಳಿನ ತಿರುಮಲ ಶ್ರೀವಾರಿಯ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು ವಿತರಿಸಲು ತಿರುಮಲ ತಿರುಪತಿ ದೇವಸ್ಥಾನಗಳು ( ಟಿಟಿಡಿ ) ಮುಂದಾಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್‌ನ ಹೆಚ್ಚುವರಿ ಟಿಕೆಟ್‌ಗಳನ್ನು ಜುಲೈ 25 ರಂದು ಟಿಟಿಡಿಯ ಅಧಿಕೃತ ವೆಬ್‌ಸೈಟ್ https://tirupatibalaji.ap.gov.in ನಲ್ಲಿ ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಿದೆ.

ಹೆಚ್ಚುವರಿ ಕೋಟಾದ ಅಡಿಯಲ್ಲಿ ಒಟ್ಟು 4,000 ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಅಕ್ಟೋಬರ್‌ಗೆ ಒಟ್ಟು 15,000 ವಿಶೇಷ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ.

TTD Rs.300 Special Darshan Tokens for October to be Released on July 25th

ಈ ತಿಂಗಳ 24 ರಂದು ಬೆಳಿಗ್ಗೆ 11 ಗಂಟೆಗೆ ಅಕ್ಟೋಬರ್ ತಿಂಗಳಿಗೆ ಸಂಬಂಧಿಸಿದ ಟಿಕೆಟ್‌ಗಳನ್ನು ಸಹ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುವುದು ಶ್ರೀವಾಣಿ ಟ್ರಸ್ಟ್ ತಿಳಿಸಿದೆ. ಹೆಚ್ಚುವರಿಯಾಗಿ, ಅದೇ ದಿನ ಮಧ್ಯಾಹ್ನ 3 ಗಂಟೆಗೆ, ಅಕ್ಟೋಬರ್ ತಿಂಗಳಿನ ವಯೋವೃದ್ಧರು ಮತ್ತು ಅಂಗವಿಕಲರ ದರ್ಶನ ಟಿಕೆಟ್‌ಗಳನ್ನು ಬಿಡುಗಡೆ ಮಾಡುವ ಮಾಹಿತಿ ಲಭ್ಯವಾಗಿದೆ.

ಇದಲ್ಲದೆ, ಈ ತಿಂಗಳ 26 ರಂದು, ಮೈಸೂರು ಮಹಾರಾಜರ ಜನ್ಮದಿನ ಪ್ರಯುಕ್ತವಾಗಿ ( ಉತ್ತರಾಭಾದ್ರ ನಕ್ಷತ್ರದ ಗೌರವಾರ್ಥ ) ಪಲ್ಲವೋತ್ಸವವನ್ನು ಆಯೋಜಿಸಲಾಗುತ್ತಿದೆ. ಈ ಪಲ್ಲವೋತ್ಸವವನ್ನು ಟಿಟಿಡಿ ಆಯೋಜಿಸುತ್ತದೆ.

TTD Rs.300 Special Darshan Tokens for October to be Released on July 25th

ಸಹಸ್ರದೀಪಾಲಂಕಾರ ಸೇವೆಯ ನಂತರ ಶ್ರೀದೇವಿ ಮತ್ತು ಭೂದೇವಿಯನ್ನು ಶ್ರೀಮಲಯಪ್ಪಸ್ವಾಮಿಯೊಂದಿಗೆ ಮೆರವಣಿಗೆಯಲ್ಲಿ ಕರ್ನಾಟಕಕ್ಕೆ ಕರೆದೊಯ್ಯಲಾಗುತ್ತದೆ.

ಕರ್ನಾಟಕ ರಾಜ್ಯ ಸರ್ಕಾರ ಮತ್ತು ಮೈಸೂರು ರಾಜ್ಯದ ಪ್ರತಿನಿಧಿಗಳು ದೇವರು ಮತ್ತು ಅಮ್ಮನವರನ್ನು ಆಹ್ವಾನಿಸಿ ವಿಶೇಷ ಆರತಿಯನ್ನು ಅರ್ಪಿಸುತ್ತಾರೆ. ಸದ್ಯ ತಿರುಮಲದಲ್ಲಿ ಭಕ್ತರ ನೂಕುನುಗ್ಗಲು ಉಂಟಾಗಿದ್ದು, ಎಲ್ಲಾ ವಿಭಾಗಗಳು ಭರ್ತಿಯಾಗಿವೆ. ಇದರಿಂದ ಶ್ರೀವಾರಿ ಸರ್ವದರ್ಶನಕ್ಕೆ 24 ಗಂಟೆ ಹಾಗೂ ವಿಶೇಷ ದರ್ಶನಕ್ಕೆ 5 ಗಂಟೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

TTD Rs.300 Special Darshan Tokens for October to be Released on July 25th

ಟಿಟಿಡಿಯಿಂದ ಹೊಸ ಉಪಕ್ರಮ

ತಿರುಮಲಕ್ಕೆ ಭೇಟಿ ನೀಡುವ ಭಕ್ತರಿಗೆ ತೊಂದರೆ-ಮುಕ್ತ ದರ್ಶನ ಟಿಕೆಟ್ ಬುಕಿಂಗ್ ವ್ಯವಸ್ಥೆ ಮಾಡಲು ಹೊಸ ಉಪಕ್ರಮವನ್ನು ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಪ್ರಾರಂಭಿಸಿದೆ.

ಪ್ರಾಯೋಗಿಕವಾಗಿ ಪ್ರಾರಂಭಿಸಲಾದ ಹೊಸ ಉಪಕ್ರಮವು ಲಕ್ಕಿ ಡಿಪ್ ವ್ಯವಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದೆ. ಲಕ್ಕಿ ಡಿಪ್ ವ್ಯವಸ್ಥೆ ಅಡಿಯಲ್ಲಿ ಭಕ್ತರು 'ಪೇ ಲಿಂಕ್ ಎಸ್‌ಎಂಎಸ್' ಮೂಲಕ ದರ್ಶನ ಟಿಕೆಟ್‌ಗಳಿಗೆ ಹಣ ಪಾವತಿಸಬಹುದು ಮತ್ತು ತಮ್ಮ ಟಿಕೆಟ್‌ಗಳ ಹಾರ್ಡ್ ಕಾಪಿಯನ್ನು ಪಡೆಯಬಹುದು.

ಪ್ರಸ್ತುತ ವ್ಯವಸ್ಥೆಯಲ್ಲಿ, ದರ್ಶನಕ್ಕಾಗಿ ತಿರುಮಲಕ್ಕೆ ಭೇಟಿ ನೀಡುವ ಭಕ್ತರು, ತಮ್ಮ ದರ್ಶನ ಟಿಕೆಟ್‌ಗಳ ಮುದ್ರಿತ ಪ್ರತಿಯನ್ನು ಪಡೆಯಲು ಕಾಯುವ ತೊಂದರೆಯನ್ನು ಅನುಭವಿಸಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+