Tripura Exit Poll Results 2023 :ತ್ರಿಪುರಾದಲ್ಲಿ 'ಕೈ' ಕಳೆದುಕೊಳ್ಳಲಿದೆ ಬಲ ಅರಳಲಿದೆ ಕಮಲ!
ತ್ರಿಪುರ ವಿಧಾನಸಭೆ ಚುನಾವಣೆಯ ನಿರ್ಗಮನ ಸಮೀಕ್ಷೆಗಳು ಇಂದು ಸಂಜೆ (ಫೆಬ್ರವರಿ 27, 2023) 7ಕ್ಕೆ ಪ್ರಕಟವಾಗಿದ್ದು, ಎಕ್ಸಿಟ್ ಪೋಲ್‌ಗಳ ಪ್ರಕಾರ ತ್ರಿಪುರದಲ್ಲಿ ಯಾರಿಗೆ ಜಯ ಸಿಗಲಿದೆ ಎಂದು ತಿಳಿಯೋಣ.
ತ್ರಿಪುರಾ ವಿಧಾನಸಭಾ ಚುನಾವಣೆ 2023 ಗಾಗಿ Zee ನ್ಯೂಸ್ ನಡೆಸಿದ ಪ್ರಮುಖ ಎಕ್ಸಿಟ್ ಪೋಲ್ ಫಲಿತಾಂಶವನ್ನು ಸೋಮವಾರ ಪ್ರಕಟಿಸಲಾಗಿದೆ. Zee Matrize ಎಕ್ಸಿಟ್ ಪೋಲ್ ಪ್ರಕಾರ, BJP 29 ರಿಂದ36 ಸ್ಥಾನಗಳನ್ನು, ಸಿಪಿಎಂ 13 ರಿಂದ 21 ಸ್ಥಾನಗಳನ್ನು, ತಿಪ್ರಾ 11 ರಿಂದ 16 ಮತ್ತು ಇತರರು 0-3 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ತ್ರಿಪುರಾ ಯಾವಾಗಲೂ ಎಡ ಭದ್ರಕೋಟೆಯಾಗಿದೆ.
2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಐಪಿ ನೇತೃತ್ವದ ಎನ್‌ಡಿಎ ಬಹುಮತವನ್ನು ಪಡೆದುಕೊಂಡಿತು. 60 ಸ್ಥಾನಗಳಲ್ಲಿ 44 ಸ್ಥಾನಗಳನ್ನು ಗಳಿಸಿತು. ಈ ಬಾರಿ ಬಿಜೆಪಿಯನ್ನು ಎದುರಿಸಲು ಸಿಪಿಎಂ ಮತ್ತು ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್‌ಟಿ)ಯನ್ನು ತನ್ನ ಪ್ರಾದೇಶಿಕ ಪಾಲುದಾರನಾಗಿ ಉಳಿಸಿಕೊಂಡಿದೆ.

ತ್ರಿಪುರಾದ ಮುಖ್ಯ ಚುನಾವಣಾಧಿಕಾರಿ ಕಿರಣ್ ಗಿಟ್ಟೆ ಈ ಹಿಂದೆ ಫೆಬ್ರವರಿ 27 ರಂದು ಸಂಜೆ 7 ಗಂಟೆಯವರೆಗೆ ಎಕ್ಸಿಟ್ ಪೋಲ್‌ಗಳನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದರು. ತ್ರಿಪುರಾ ಯಾವಾಗಲೂ ಎಡ ಭದ್ರಕೋಟೆಯಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಐಪಿ ನೇತೃತ್ವದ ಎನ್‌ಡಿಎ ಆರಾಮದಾಯಕ ಬಹುಮತವನ್ನು ಸಾಧಿಸಿದೆ. 60 ಸ್ಥಾನಗಳ ಪೈಕಿ 44 ಸ್ಥಾನಗಳನ್ನು ಗಳಿಸಿತ್ತು.
ಈ ಬಾರಿ ಬಿಜೆಪಿಯನ್ನು ಎದುರಿಸಲು ಸಿಪಿಎಂ ಮತ್ತು ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್‌ಟಿ)ಯನ್ನು ತನ್ನ ಪ್ರಾದೇಶಿಕ ಪಾಲುದಾರನಾಗಿ ಉಳಿಸಿಕೊಂಡಿದೆ.

ಈ ವರ್ಷ ಚುನಾವಣೆ ನಡೆಯಲಿರುವ ಒಂಬತ್ತು ರಾಜ್ಯಗಳಲ್ಲಿ ತ್ರಿಪುರ, ಮೇಘಾಲಯ, ನಾಗಾಲ್ಯಾಂಡ್ ಮೊದಲನೆಯದು. ಮೂರು ರಾಜ್ಯಗಳ ಮತ ಎಣಿಕೆ ಮಾರ್ಚ್ 2 ರಂದು ನಡೆಯಲಿದೆ. ತ್ರಿಪುರಾದಲ್ಲಿ 60 ಸದಸ್ಯರ ವಿಧಾನಸಭೆಗೆ ಚುನಾವಣೆ ಫೆಬ್ರವರಿ 16 ರಂದು ನಡೆಯಿತು. ಮೇಘಾಲಯ ಮತ್ತು ನಾಗಾಲ್ಯಾಂಡ್ ಫೆಬ್ರವರಿ 27 ರಂದು ಚುನಾವಣೆ ನಡೆದಿವೆ. ಮತದಾನ 5 ಗಂಟೆಗೆ ಕೊನೆಗೊಂಡಿದೆ.
ಇಂಡಿಯಾ ಟುಡೇ-ಮೈ ಆಕ್ಸಿಸ್ ಇಂಡಿಯಾ ಪ್ರಕಾರ, ಎನ್‌ಪಿಪಿ 18-24 ಸ್ಥಾನಗಳೊಂದಿಗೆ ಮೇಘಾಲಯವನ್ನು ಉಳಿಸಿಕೊಳ್ಳುತ್ತದೆ. ಮತ್ತೊಂದೆಡೆ, ಕಾಂಗ್ರೆಸ್ 6-12, ಬಿಜೆಪಿ 4-8 ಮತ್ತು ಇತರರು 4-8 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.
2023ರ ತ್ರಿಪುರಾ ಎಕ್ಸಿಟ್ ಪೋಲ್ ಫಲಿತಾಂಶಗಳು:- ತ್ರಿಪುರಾ ಮತ ಹಂಚಿಕೆ ಹೀಗಿದೆ:
ಬಿಜೆಪಿ+: 44%
CPM+: 44%
ತಿಪ್ರಾ: 11%
ಇತರೆ: 1%
ತ್ರಿಪುರಾ ಎಕ್ಸಿಟ್ ಪೋಲ್ ಫಲಿತಾಂಶ 2023 ಲೈವ್ ಅಪ್‌ಡೇಟ್‌ಗಳು:
ತ್ರಿಪುರಕ್ಕೆ ಸೀಟು ಹಂಚಿಕೆ ಹೀಗಿದೆ (ಒಟ್ಟು ಸೀಟುಗಳು: 60)
ಬಿಜೆಪಿ+: 29-36
CPM+: 13-21
ತಿಪ್ರಾ: 11-16
ಇತರೆ: 0-3












Click it and Unblock the Notifications