ಉತ್ತರಾಖಂಡದಲ್ಲಿ ಟ್ರಾನ್ಸ್‌ಫಾರ್ಮರ್ ಸ್ಫೋಟ: 15 ಮಂದಿ ವಿದ್ಯುತ್ ಸ್ಪರ್ಶದಿಂದ ಸಾವು!
ಡೆಹ್ರಾಡೂನ್ ಜುಲೈ 19: ಉತ್ತರಾಖಂಡದಲ್ಲಿ ನದಿಯ ಬಳಿ ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡ ನಂತರ 15 ಮಂದಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ. ಉತ್ತರಾಖಂಡದಲ್ಲಿ ಸೇತುವೆಯೊಂದಕ್ಕೆ ವಿದ್ಯುತ್ ಪ್ರವಹಿಸಿ ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡ ಪರಿಣಾಮ ಓರ್ವ ಪೊಲೀಸ್ ಹಾಗೂ ಮೂವರು ಗೃಹರಕ್ಷಕ ದಳದ ಸಿಬ್ಬಂದಿ ಸೇರಿದಂತೆ ಒಟ್ಟು 15 ಮಂದಿ ಸಾವನ್ನಪ್ಪಿದ್ದಾರೆ.
Uttarakhand: Policeman among 10 killed in Chamoli transformer explosion
— ANI Digital (@ani_digital) July 19, 2023
Read @ANI Story | https://t.co/en9zR94aYG#Uttarakhand #Chamoli pic.twitter.com/XXve8J5XVK
ನಮಾಮಿ ಗಂಗೆ ಯೋಜನೆಯ ಭಾಗವಾಗಿರುವ ಈ ಸೇತುವೆಯು ಉತ್ತರಾಖಂಡದ ಚಮೋಲಿ ಜಿಲ್ಲೆಯ ಅಲಕನಂದಾ ನದಿಯನ್ನು ವ್ಯಾಪಿಸಿದೆ.

ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಮಾತನಾಡಿ, "ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮತ್ತು ಮೂವರು ಗೃಹ ರಕ್ಷಕರು ಸೇರಿದಂತೆ 15 ಜನರು ವಿದ್ಯುತ್ ಸ್ಪರ್ಶಿಸಿದ್ದಾರೆ. ಘಟನೆಯ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಸಲಾಗುತ್ತಿದೆ" ಎಂದು ಹೇಳಿದರು. ಕಳೆದ ರಾತ್ರಿ ಈ ಘಟನೆ ನಡೆದಿದೆ ಎಂದು ಚಮೋಲಿ ಪೊಲೀಸ್ ವರಿಷ್ಠಾಧಿಕಾರಿ ಪ್ರಮೇಂದ್ರ ದೋಭಾಲ್ ಹೇಳಿದ್ದಾರೆ.
"ಸೆಕ್ಯುರಿಟಿ ಗಾರ್ಡ್ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ ಎಂದು ನಮಗೆ ಗ್ರಾಮದಿಂದ ಕರೆ ಬಂದಿತು. ಪೊಲೀಸ್ ಸಿಬ್ಬಂದಿ ಸ್ಥಳ ತಪಾಸಣೆಗಾಗಿ ಗ್ರಾಮಸ್ಥರೊಂದಿಗೆ ಹೋದಾಗ 21 ಜನರು ವಿದ್ಯುತ್ ಸ್ಪರ್ಶಿಸಿ ತೀವ್ರ ಗಾಯಗೊಂಡರು. 15 ಜನರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಉಳಿದವರು ಗಂಭೀರರಾಗಿದ್ದಾರೆ'' ಎಂದು ಪ್ರಮೇಂದ್ರ ದೋಭಾಲ್ ತಿಳಿಸಿದ್ದಾರೆ.












Click it and Unblock the Notifications