ರೈಲ್ವೆ ಟಿಕೆಟ್ ಕನ್ ಫರ್ಮ್ ಆಗಿಲ್ಲವೇ? ಚಿಂತೆ ಬಿಡಿ

ಬೆಂಗಳೂರು, ಆಗಸ್ಟ್,12: ರೈಲ್ವೆ ಟಿಕೆಟ್ ಬುಕ್ ಮಾಡಿ ಹಲವು ದಿನ ಕಳೆದಿದ್ದರೂ ವೇಟಿಂಗ್ ಲಿಸ್ಟ್ ನಲ್ಲಿಯೇ ಇರುತ್ತದೆ. ಅಂತಿಮವಾಗಿ ಬೇರೆ ಏನಾದರೂ ವ್ಯವಸ್ಥೆ ಮಾಡಿಕೊಂಡು ಸ್ಥಳ ತಲುಪಬೇಕಾಗುತ್ತದೆ. ಇತ್ತ ಬುಕ್ ಮಾಡಿದ ಟಿಕೆಟ್ ಅನ್ನು ಅನಿವಾರ್ಯವಾಗಿ ಕ್ಯಾನ್ಸಲ್ ಮಾಡಬೇಕಾಗುತ್ತದೆ. ಇದು ಸಾಮಾನ್ಯ ಪ್ರಯಾಣಿಕರು ಪ್ರತಿದಿನ ಅನುಭವಿಸುತ್ತಿರುವ ವೇದನೆ.

ಇದೆಲ್ಲದಕ್ಕೆ ಪರಿಹಾರ ನೀಡಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ. ನೀವು ಬುಕ್ ಮಾಡಿದ ಮಾರ್ಗದಲ್ಲಿಯೇ ಸಂಚರಿಸುವ ಇನ್ನೊಂದು ರೈಲಿಗೆ ನಿಮ್ಮ ಟಿಕೆಟ್ ಹೊಂದಾಣಿಕೆ ಮಾಡಿಕೊಡಲು ಚಿಂತನೆ ನಡೆಸಿದೆ. [30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]

Train ticket not confirmed, don't worry! Railways could provide you back-up trains

ನೀವು ಟಿಕೆಟ್ ಕ್ಯಾನ್ಸಲ್ ಮಾಡುವ ಪ್ರಕ್ರಿಯೆನ್ನು ಇದು ತಡೆಯಲಿದ್ದು ಸುರಕ್ಷಿತವಾಗಿ ಅಂದುಕೊಂಡಿದ್ದ ಸ್ಥಳವನ್ನು ತಲುಪುತ್ತೀರಿ. ಅಲ್ಲದೇ ಹೊಸದಾಗಿ ಟಿಕೆಟ್ ಬುಕ್ ಮಾಡುವ ಕೆಲಸವೂ ಇರುವುದಿಲ್ಲ.[ರೈಲ್ವೆ ತತ್ಕಾಲ್ ಬುಕಿಂಗ್ ಗೆ ಐಡಿ ಪ್ರೂಫ್ ಬೇಕಾಗಿಲ್ಲ]

ನಾವು ಈ ಬಗ್ಗೆ ಸಕಲ ಮಾಹಿತಿ ಕಲೆ ಹಾಕಿದ್ದೇವೆ. ಕೆಲವೊಂದು ರೈಲುಗಳು ಜನರಿಂದ ತುಂಬಿದ್ದರೆ ಇನ್ನು ಕೆಲವು ಖಾಲಿ ತೆರಳುತ್ತವೆ. ಇವೆಲ್ಲವನ್ನು ಹೊಂದಾಣಿಕೆ ಮಾಡಿಕೊಂಡು ಜನರ ಅಗತ್ಯಕ್ಕೆ ತಕ್ಕಂತೆ ಮಾರ್ಪಾಡು ಮಾಡಿ ನೀಡಲಾಗುವುದು ಎಂದು ರೈಲ್ವೆ ಇಲಾಖೆಯ ನಿರ್ದೇಶ್ಹ ಅನಿಲ್ ಕುಮಾರ್ ಸಕ್ಸೇನಾ ತಿಳಿಸಿದ್ದಾರೆ.

ಪ್ರಯಾಣಿಕರಿಗೆ ಆಗುತ್ತಿರುವ ಗೊಂದಲ ತಪ್ಪಿಸಲು ಭಾರತೀಯ ರೈಲ್ವೆ ಪ್ರತಿದಿನ ಹೊಸ ಹೊಸ ಯೋಜನೆಗಳತ್ತ ಚಿತ್ತ ಹರಿಸುತ್ತಿದೆ. ಟಿಕೆಟ್ ನೀಡಿಕೆ ಪ್ರಕ್ರಿಯೆನ್ನು ಬಹಳ ಸುಲಭ ಮಾಡಿದೆ. ಅಲ್ಲದೇ ಜನರಿಗೆ ಶುದ್ಧ ಆಹಾರ ಮತ್ತು ನೀರು ನೀಡಿಕೆಗೂ ಒತ್ತು ನೀಡುತ್ತಾ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+