ಅಪಘಾತಕ್ಕೊಳಗಾದವರಿಗೆ ನೆರವಾಗುತ್ತಿದ್ದವರ ಮೇಲೇ ಹರಿದ ಲಾರಿ: 7 ಸಾವು

ಬೆಟುಲ್(ಮಧ್ಯಪ್ರದೇಶ), ಡಿಸೆಂಬರ್ 14: ರಸ್ತೆಯಲ್ಲಿ ಅಪಘಾತಕ್ಕೊಳಗಾಗಿ ಸಂಕಷ್ಟದಲ್ಲಿದ್ದ ಕೆಲವರಿಗೆ ಕೈಲಾದ ಸಹಾಯ ಮಾಡುತ್ತ, ಅವರನ್ನು ಸಂತೈಸುತ್ತಿದ್ದ ಜನರ ಮೇಲೇ ಲಾರಿಯೊಂದು ಹರಿದ ಪರಿಣಾಮ 7 ಜನ ಸ್ಥಳದಲ್ಲೇ ಮೃತರಾದ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದ ಮೆಟುಲ್ ನ ಬೊರ್ದೇಹಿ ಎಂಬಲ್ಲಿ ನಡೆದಿದೆ.

ನಿನ್ನೆ(ಡಿ.13) ರಾತ್ರಿ ಇಲ್ಲಿನ ರಸ್ತೆಯಲ್ಲಿ ಒಂದು ಸಣ್ಣ ಅಪಘಾತವಾಗಿತ್ತು. ಆ ಅಪಘಾತದಲ್ಲಿ ಗಾಯಗೊಂಡವರಿಗೆ ಕೆಲವು ಸ್ಥಳೀಯರು ನೆರವು ನೀಡುತ್ತ, ಸಂತೈಸುತ್ತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ ಲಾರಿಯೊಂದು ಇಲ್ಲಿದ್ದ 10 ಕ್ಕೂ ಹೆಚ್ಚು ಜನರ ಮೇಲೆ ಹರಿದ ಪರಿಣಾಮ 7 ಜನ ಸ್ಥಳದಲ್ಲೇ ಮೃತರಾಗಿದ್ದು, ಗಂಭೀರ ಗಾಯಗೊಂಡಿರುವ ಇಬ್ಬರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ.

Tragic accident kills 7 in Madhya Pradesh

ಘಟನೆಯಲ್ಲಿ ಮೃತರಾದವರ ಗುರುತು ಪತ್ತೆಯಾಗಿಲ್ಲ. ದೂರು ದಾಖಲಿಸಿಕೊಂಡಿರುವ ಮೆಟುಲ್ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+