ಗಗನಕ್ಕೇರಿದ ಟೊಮ್ಯಾಟೋ ಬೆಲೆ: ರಾಜ್ಯವಾರು ದರ ಎಷ್ಟಿದೆ, ಇಲ್ಲಿದೆ ವಿವರ
ಬೆಂಗಳೂರು, ಜೂನ್ 29: ದೇಶಾದ್ಯಂತ ಪ್ರಮುಖ ಆಹಾರ ಬೆಳೆಯಾದ ಟೊಮ್ಯಾಟೋ ಬೆಲೆ ಗಗನಕ್ಕೇರಿದ್ದು, ಸಾಮಾನ್ಯ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಈಗಾಗಲೇ ಜೀವನೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದ ಕಂಗಲಾಗಿರುವ ಜನತೆಗೆ ಇದು ಮತ್ತೊಂದು ಆತಂಕದ ಸುದ್ದಿಯಾಗಿದೆ.
ಟೊಮ್ಯಾಟೋ ಬೆಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಲ್ಲಿ ಅದರ ಬೆಲೆಯನ್ನು ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ಅಂಕಿ ಅಂಶದ ಮೂಲಕ ತಿಳಿಯಬಹುದಾಗಿದೆ.

ದೇಶದಲ್ಲಿ ಟೊಮೆಟೊ ಬೆಳೆಯುವ ಟಾಪ್ 10 ರಾಜ್ಯಗಳು, ಅದರ ಉತ್ಪಾದನಾ ಸಾಮಾರ್ಥ್ಯ ಮತ್ತು ಬೆಲೆಗಳನ್ನು ಇಲ್ಲಿ ನೀಡಲಾಗಿದೆ. ಇದಲ್ಲದೆ ರಾಷ್ಟ್ರದಲ್ಲಿ ಅದರ ಉತ್ಪಾದನಾ ಪಾಲು ಎಷ್ಟು ಎಂದು ಇಲ್ಲಿ ನೀಡಲಾಗಿದೆ
1. ಮಧ್ಯ ಪ್ರದೇಶ
ಟೊಮೆಟೊ ದರ: 80-100 ರೂ.
ವಾರ್ಷಿಕ ಉತ್ಪಾದನೆ: 2,970 ಸಾವಿರ ಟನ್ ಉತ್ಪಾದನಾ ಪಾಲು: 14.63%
2. ಆಂಧ್ರಪ್ರದೇಶ
ಟೊಮೆಟೊ ದರ: 50-70 ರೂ.
ವಾರ್ಷಿಕ ಉತ್ಪಾದನೆ: 2,217 ಸಾವಿರ ಟನ್
ಉತ್ಪಾದನಾ ಪಾಲು: 10.92%
3. ಕರ್ನಾಟಕ
ದರ: 70-99 ರೂ.
ವಾರ್ಷಿಕ ಉತ್ಪಾದನೆ: 2,077 ಸಾವಿರ ಟನ್ ಉತ್ಪಾದನಾ ಪಾಲು: 10.23%
4. ತಮಿಳುನಾಡು
ಟೊಮೆಟೊ ದರ: 75-95 ರೂ.
ವಾರ್ಷಿಕ ಉತ್ಪಾದನೆ: 1489 ಸಾವಿರ ಟನ್
ಉತ್ಪಾದನಾ ಪಾಲು:7.34%

5. ಓಡಿಶಾ
ಟೊಮೆಟೊ ದರ: 75-95 ರೂ
ವಾರ್ಷಿಕ ಉತ್ಪಾದನೆ: 1,432 ಸಾವಿರ ಟನ್
ಉತ್ಪಾದನಾ ಪಾಲು: 7.06%
6. ಗುಜರಾತ್
ದರ : 80-100 ರೂ.
ವಾರ್ಷಿಕ ಉತ್ಪಾದನೆ: 1,395 ಸಾವಿರ ಟನ್ ಉತ್ಪಾದನಾ ಪಾಲು: 6.87%
7. ಪಶ್ಚಿಮ ಬಂಗಾಳ
ಟೊಮೆಟೊ ದರ: 80-100 ರೂ
ವಾರ್ಷಿಕ ಉತ್ಪಾದನೆ: 1,284 ಸಾವಿರ ಟನ್ ಉತ್ಪಾದನಾ ಪಾಲು: 6.33%
8. ಛತ್ತೀಸಗಡ
ಟೊಮೆಟೊ ದರ: 70-90 ರೂ.
ವಾರ್ಷಿಕ ಉತ್ಪಾದನೆ: 1,149 ಸಾವಿರ ಟನ್
ಉತ್ಪಾದನಾ ಪಾಲು: 5.66%
9. ಮಹಾರಾಷ್ಟ್ರ
ಟೊಮೆಟೊ ದರ: 75-96 ರೂ.
ವಾರ್ಷಿಕ ಉತ್ಪಾದನೆ: 1125 ಸಾವಿರ ಟನ್, ಉತ್ಪಾದನಾ ಪಾಲು: 5.54%
10. ಬಿಹಾರ
ಟೊಮೆಟೊ ದರ: 60-80 ರೂ.
ವಾರ್ಷಿಕ ಉತ್ಪಾದನೆ: 951 ಸಾವಿರ ಟನ್
ಉತ್ಪಾದನಾ ಪಾಲು: 4.68%












Click it and Unblock the Notifications