ಚಿತ್ರಗಳಲ್ಲಿ: ಲಂಡನ್ನಿನಲ್ಲಿ ಎಕೆ ರಾಮಾನುಜನ್ 'ಹೂ ಮರ'
ಬೆಂಗಳೂರು, ಮೇ.9: ಕನ್ನಡಿಗರ ಹೆಮ್ಮೆಯ ಸಾಹಿತಿ ದಿವಂಗತ ಎಕೆ ರಾಮಾನುಜನ್ ಅವರ A flowering Tree ಭಾರತೀಯ ಜಾನಪಕ ಕೃತಿಯನ್ನು ನೃತ್ಯ ರೂಪಕದ ಮೂಲಕ ಲಂಡನ್ನಿನಲ್ಲಿ ಪ್ರದರ್ಶಿಸಲಾಗಿದೆ.
ಇನ್ನೊಂದೆಡೆ ಚೀನಾದ ಶಾಂಘೈನಲ್ಲಿ ಭಾರತೀಯ ನೃತ್ಯಪಟುಗಳ ಗೆಜ್ಜೆನಾದ ಕೇಳಿ ಬಂದಿದೆ.ಚೆನ್ನೈ ಮೂಲದ ಕಲಾಕ್ಷೇತ್ರ ತಂಡ ಭಾರತೀಯ ಹಬ್ಬಗಳ ಮಹತ್ವದ ಸಾರುವ ನೃತ್ಯ ರೂಪಕವನ್ನು ಚೀನಾದಲ್ಲಿ ಪ್ರದರ್ಶಿಸಿದ್ದಾರೆ.
ಉಳಿದಂತೆ ಇಂದಿನ ಚಿತ್ರಗಳಲ್ಲಿ ಜಿನೀವಾದಲ್ಲಿ ಕಂಡು ಬಂದ 100.09 ಕ್ಯಾರೆಟ್ ವಜ್ರ, ಬ್ರೆಜಿಲಿನ ಕಡಲಿನಲ್ಲಿ ಸರ್ಫಿಂಗ್ ಆಟ, ಬ್ರಾಡ್ ಪಿಟ್ ಹಾಗೂ ಏಂಜಲೀನಾ ಜೋಲಿ ಜೋಡಿ, ಬಾಂಬ್ ಸ್ಫೋಟದ ನಂತರ ಗೋವಾ ಮುಂತಾದ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ...

ಲಂಡನ್ನಿನಲ್ಲಿ ಎಕೆ ರಾಮಾನುಜಂ 'ಹೂ ಮರ'
ಕನ್ನಡಿಗರ ಹೆಮ್ಮೆಯ ಸಾಹಿತಿ ದಿವಂಗತ ಎ.ಕೆ ರಾಮಾನುಜಂ ಅವರ A flowering Tree ಭಾರತೀಯ ಜಾನಪಕ ಕೃತಿಯನ್ನು ನೃತ್ಯ ರೂಪಕದ ಮೂಲಕ ಲಂಡನ್ನಿನಲ್ಲಿ ಪ್ರದರ್ಶಿಸಲಾಗಿದೆ.

ಶಾಂಘೈನಲ್ಲಿ ಭಾರತೀಯ ನೃತ್ಯಪಟುಗಳು
ಚೀನಾದ ಶಾಂಘೈನಲ್ಲಿ ಭಾರತೀಯ ನೃತ್ಯಪಟುಗಳ ಗೆಜ್ಜೆನಾದ ಕೇಳಿ ಬಂದಿದೆ.ಚೆನ್ನೈ ಮೂಲದ ಕಲಾಕ್ಷೇತ್ರ ತಂಡ ಭಾರತೀಯ ಹಬ್ಬಗಳ ಮಹತ್ವದ ಸಾರುವ ನೃತ್ಯ ರೂಪಕವನ್ನು ಚೀನಾದಲ್ಲಿ ಪ್ರದರ್ಶಿಸಿದ್ದಾರೆ.

ಬಾಂಬ್ ಸ್ಫೋಟದ ನಂತರ ಗೋವಾ
ಮಾರ್ಗೋವಾದಲ್ಲಿ ಬಾಂಬ್ ಸ್ಫೋಟದ ನಂತರ ಗೋವಾದಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಗುರುವಾರ(ಮೇ.8) ಮಾರ್ಗೋವಾ ಸಮೀಪದ ಚಂದೊರ್ ಗ್ರಾಮದ ಗುಡಿಸಲೊಂದರಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು ಒಬ್ಬರು ಮೃತರಾಗಿದ್ದು, ಮೂವರಿಗೆ ಗಾಯಗಳಾಗಿವೆ.

ಭಾರಿ ಬೆಲೆಬಾಳುವ ವಜ್ರ ಹರಾಜಿಗೆ
ಜಿನೀವಾ: ಗ್ರಾಫ್ ಹಳದಿ ಬಣ್ಣದ 100.09 ಕ್ಯಾರೆಟ್ ಇರುವ ವಜ್ರವನ್ನು ಹರಾಜು ಕಂಪನಿ ಸೊಥೆಬೆ ಉದ್ಯೋಗಿಯೊಬ್ಬರು ನೋಡುತ್ತಿದ್ದಾರೆ. ಸುಮಾರು 15,000,000 ದಿಂದ 25,000,000 ಯುಎಸ್ ಡಾಲರ್ ಗಳಿಗೆ ಹರಾಜಾಗುವ ನಿರೀಕ್ಷೆಯಿದೆ. ಮೇ.13 ರಂದು ಜೀನಿವಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಲಂಡನ್ನಿನಲ್ಲಿ ಬ್ರಾಡ್ ಜೋಲಿ ಜೋಡಿ
ತಾರಾ ದಂಪತಿ ಬ್ರಾಡ್ ಪಿಟ್ ಹಾಗೂ ಏಂಜಲೀನಾ ಜೋಲಿ ಅವರು ಕೆನ್ಸಿಂಗ್ಟನ್ ಗಾರ್ಡನ್ಸ್ ನಲ್ಲಿ ಗುರುವಾರ ಕಾಣಿಸಿಕೊಂಡಿದ್ದು ಹೀಗೆ..ಚಿತ್ರ:AP/PTI

ರಿಯೋದಲ್ಲಿ ಸರ್ಫಿಂಗ್ ಗೇಮ್ ನಲ್ಲಿ
ಬ್ರೆಜಿಲಿನ ಕಡಲಿನಲ್ಲಿ ಸರ್ಫಿಂಗ್ ಆಟ. ASP ಪ್ರಕಟಿಸಿರುವ ಚಿತ್ರದಲ್ಲಿ ಯುನೈಟೆಡ್ ಸ್ಟೇಟ್ಸ್ ನ ಲಾಕೀ ಪೀಟರ್ಸನ್ ಅವರು ಸರ್ಫಿಂಗ್ ಗೇಮ್ ನಲ್ಲಿ ತೊಡಗಿದ್ದಾರೆ.












Click it and Unblock the Notifications