ಚಿತ್ರಗಳಲ್ಲಿ: ಆಕ್ಸೀಸ್ ಬ್ಯಾಂಕ್ ಜತೆ ಆಧಾರ್ ಬೆಸುಗೆ
ಬೆಂಗಳೂರು, ಅ.25: ನಾಗರೀಕರಿಗೆ ವಿಶಿಷ್ಟ ಗುರುತಿನ ಚೀಟಿಯಾಗಿರುವ UIDAI ಈಗ ಆಕ್ಸಿಸ್ ಬ್ಯಾಂಕ್ ಜತೆ ಕೈಜೋಡಿಸಿದೆ. ಆಕ್ಸಿಸ್ ಬ್ಯಾಂಕಿನ ಸುಮಾರು ಸಾವಿರಕ್ಕೂ ಅಧಿಕ ಬ್ರಾಂಚ್ ಗಳಲ್ಲಿ ಆಧಾರ್ ಕಾರ್ಡ್ ಬಳಸಿ ಸುಲಭವಾಗಿ ಖಾತೆ ಆರಂಭಿಸಬಹುದಾಗಿದೆ ಎಂದು ಆಕ್ಸಿಸ್ ಬ್ಯಾಂಕ್ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶಿಖಾ ಶರ್ಮ ಹೇಳಿದ್ದಾರೆ.
ಗುರುವಾರ ಮುಂಬೈನಲ್ಲಿ ಈ ಹೊಸ ವ್ಯವಸ್ಥೆಗೆ UIDAIನ ಚೇರ್ಮನ್ ನಂದನ್ ನಿಲೇಕಣಿ ಅವರು ಚಾಲನೆ ನೀಡಿದರು. ಈ ಸೌಲಭ್ಯದ ಮೂಲಕ ಆಧಾರ್ ಕಾರ್ಡ್ ವುಳ್ಳ ವ್ಯಕ್ತಿಗಳು ಯಾವುದೇ ಇತರೆ ದಾಖಲೆ ಬಗ್ಗೆ ತಲೆಕೆಡಿಸಿಕೊಳ್ಳದೆ ಆಧಾರ್ ಕಾರ್ಡ್ ಜತೆ ಬಯೋ ಐಡೆಂಡಿಫಿಕೇಷನ್ ನೀಡಿ ಖಾತೆ ಹೊಂದಬಹುದಾಗಿದೆ.
ಬೇರೆ ಊರಿಗೆ ವರ್ಗವಾದರೂ ಈ ವ್ಯವಸ್ಥೆಯಲ್ಲಿ ಯಾವುದೇ ತೊಂದರೆಯಾಗುವುದಿಲ್ಲ. ಆಧಾರ್ ಕಾರ್ಡಿನ ವಿಳಾಸ ಬದಲಾಯಿಸಿಕೊಂಡರೆ ಸಾಕು.ದೇಶದ 1000ಕ್ಕೂ ಅಧಿಕ ಆಕ್ಸಿಸ್ ಬ್ಯಾಂಕಿನಲ್ಲಿ ಈ ಸೌಲಭ್ಯ ಲಭ್ಯವಿದೆ ಇನ್ನಷ್ಟು ಬ್ಯಾಂಕ್ ಗಳಲ್ಲೂ ಆಧಾರ್ ಕಾರ್ಡ್ ಬಳಕೆ ಹೆಚ್ಚಲಿದೆ ಎಂದು ನಂದನ್ ನಿಲೇಕಣಿ ಹೇಳಿದ್ದಾರೆ.
ಉಳಿದಂತೆ ಲಂಡನ್ನಿನ ರಾಜಮನೆತನ ಕುಟುಂಬ ಚಿತ್ರ, ನೋಯ್ಡಾದಲ್ಲಿ ಜಗತ್ತಿನ ಅತಿವೇಗದ ಚಾಲಕರು, ಈರುಳ್ಳಿ ಬೆಳೆಗಾರರು, ಪೋಲಿಯೋ ದಿನಾಚರಣೆ, ಸಚಿನ್ ಮ್ಯಾಚ್ ಟಿಕೆಟ್ ಮುಂತಾದ ಚಿತ್ರಗಳು ಇಂದಿನ ಪ್ಯಾಕೇಜಿನಲ್ಲಿದೆ ತಪ್ಪದೇ ನೋಡಿ...

ಆಕ್ಸಿಸ್ ಬ್ಯಾಂಕ್ -ಆಧಾರ್
ಮುಂಬೈ: UIDAI ಚೇರ್ಮನ್ ನಂದನ್ ನಿಲೇಕಣಿ, ಆಕ್ಸಿಸ್ ಬ್ಯಾಂಕ್ ಸಿಇಒ ಹಾಗೂ ಎಂಡಿ ಶಿಖಾ ಶರ್ಮ ಅವರು ಆಧಾರ್ ಕಾರ್ಡ್ ಬಳಸಿ eKYC ಮೂಲಕ ಖಾತೆ ತೆರೆದ ಗ್ರಾಹಕರೊಬ್ಬರೊಂದಿಗೆ PTI Photo by Mitesh Bhuvad

ಪೋಲಿಯೋ ದಿನಾಚರಣೆ
ನವದೆಹಲಿ: ವಿಶ್ವ ಪೋಲಿಯೋ ದಿನಾಚರಣೆ ಅಂಗವಾಗಿ ಗುರುವಾರ(ಅ.24) ಇಂಡಿಯಾ ಗೇಟ್ ಪ್ರಜ್ವಲಿಸುವಂತೆ ಮಾಡಿದ ರೋಟರಿ ಸಂಸ್ಥೆ. PTI Photo by Shrish Shete

ಮಹಾರಾಷ್ಟ್ರದಲ್ಲಿ ಯಾತ್ರೆ'
ಕೋಲ್ಹಾಪುರದ ಪಟ್ಟಾನ್ ಕೊಡೊಲಿ ಗ್ರಾಮದಲ್ಲಿ ಕುರುಬ ಜನಾಂಗದ ಭಕ್ತರು ವಾರ್ಷಿಕ ಶ್ರೀ ವಿಠಲ್ ಬೀರದೇವ್ ಯಾತ್ರೆಯಲ್ಲಿ ಪಾಲ್ಹೊಂಡು ಸಂಭ್ರಮಿಸಿದರು.

ಭಾರತದಲ್ಲಿ ಎಫ್ 1 ರೇಸ್
ಗ್ರೇಟರ್ ನೋಯ್ಡಾ: ವಿಲಿಯಮ್ಸ್ ಎಫ್ 1 ತಂಡ 2013 ರ ಎಫ್ ಐಎ ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ಶಿಪ್ ಭಾರತ ಗ್ರಾಂಡ್ ಪ್ರಿಕ್ಸ್ ತಯಾರಿಯಲ್ಲಿದೆ. ಇಲ್ಲಿನ ಬುದ್ಧ ಇಂಟರ್ ನ್ಯಾಷನಲ್ ಸರ್ಕ್ಯೂಟ್ ನಲ್ಲಿ ಜಗತ್ತಿನ ಅತಿವೇಗದ ಚಾಲಕರು ಬೀಡುಬಿಟ್ಟಿದ್ದಾರೆ. PTI Photo by Vijay Verma

ರಾಜ ಕುಟುಂಬದ ಚಿತ್ರ
ಕೇಂಬ್ರಿಡ್ಜ್ ನ ರಾಣಿ ಕೇಟ್ ಪುತ್ರ ಪ್ರಿನ್ಸ್ ಜಾರ್ಜ್ ಅವರು ಎಲಿಜಬೇತ್ ರಾಣಿ II ಹಾಗೂ ಪ್ರಿನ್ಸ್ ವಿಲಿಯಂ
ಹಿಂಬದಿಯಲ್ಲಿ ಎಡದಿಂದ ಫಿಲಿಫ್, ಪ್ರಿನ್ಸ್ ಚಾರ್ಲ್ಸ್, ಕಾರ್ನ್ ವೆಲ್ ರಾಣಿ, ಪ್ರಿನ್ಸ್ ಹ್ಯಾರಿ ಪಿಪ್ಪ ಮಿಡ್ಲೆಟ್ ಜತೆ ಲಂಡನ್ನಿನ ಕ್ಲಾರೆನ್ಸ್ ಹೌಸ್ ನಲ್ಲಿ












Click it and Unblock the Notifications