ಚಿತ್ರಗಳಲ್ಲಿ: ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್
ಬೆಂಗಳೂರು, ಅ.16 : ದೇಶದೆಲ್ಲೆಡೆ ಈದ್ ಅಝಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಮುಸ್ಲಿಂ ಬಾಂಧವರು ಹೊಸ ಬಟ್ಟೆ ತೊಟ್ಟು ಸಂಭ್ರಮಪಟ್ಟಿದ್ದಾರೆ. ತಕ್ಬೀರ್ ಓದಿದ ನಂತರ ಸಲಾತ್ ಅಲ್ ಈದ್ ಸಾಮೂಹಿಕ ಪ್ರಾರ್ಥನೆ ಕೈಗೊಳ್ಳಲಾಗಿದೆ.
ರಂಜಾನ್ ಮತ್ತು ಬಕ್ರೀದ್ ವಿಶ್ವದ್ಯಾಂತ ಮುಸ್ಲಿಮರು ಆಚರಿಸುವ ಎರಡು ಅತಿದೊಡ್ಡ ಹಬ್ಬಗಳು. ರಂಜಾನ್ ಸಂದರ್ಭದಲ್ಲಿ ಮುಸ್ಲಿಮರು ಇಡೀ ಒಂದು ಮಾಸ ಉಪವಾಸಾಚರಣೆ ಆಚರಿಸಿ ಕೊನೆ ದಿನ ಈದ್ ಉಲ್ ಫಿತರ್ ಹಬ್ಬದ ಮೂಲಕ ಭಾವೈಕ್ಯ ಮರೆಯುತ್ತಾರೆ. ಬಕ್ರೀದ್. ತ್ಯಾಗ ಬಲಿದಾನದ ಸಂಕೇತ. ಭಾರತವೂ ಸೇರಿದಂತೆ ವಿಶ್ವದ್ಯಾಂತ ಮುಸ್ಲಿಮರು ಈ ಹಬ್ಬವನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಿದ್ದಾರೆ.
ಈದ್ ಗಾಹ್ ಗಳಲ್ಲಿ ಇಮಾಮರ ಹಿ೦ದೆ ಸಾಲುಸಾಲಾಗಿ ನಿ೦ತು "ಅಲ್ಲಾಹು ಅಕ್ಬರ್", "ಅಲ್ಲಾಹು ಅಕ್ಬರ್" ಎ೦ದು ಘೋಷಣೆ ಮಾಡುತ್ತಾ ಸಾಮೂಹಿಕವಾಗಿ ಎಲ್ಲರೂ ತಲೆ ಬಾಗುವ, ದೇವರಿಗೆ ಶರಣೆನ್ನುತ್ತಾರೆ. ನಮಾಜ್ ನ೦ತರ ಒಬ್ಬರನೊಬ್ಬರು ಆಲಿ೦ಗನ ಮಾಡಿಕೊಳ್ಳುವುದು, ಕೈ ಕುಲುಕುವುದು, "ಈದ್ ಮುಬಾರಕ್" ಅ೦ದರೆ "ಈ ಹಬ್ಬ ನಿಮಗೆ ಶುಭವನ್ನು೦ಟು ಮಾಡಲಿ" ಎಂದು ಶುಭ ಹಾರೈಕೆ ಹಾಗೂ ಉಡುಗೊರೆಗಳನ್ನು ವಿನಿಯಮ ಮಾಡಿಕೊಳ್ಳುತ್ತಾರೆ.
ಬಕ್ರೀದ್ ಸಂದರ್ಭದಲ್ಲಿ ಶಕ್ತ ಮುಸ್ಲಿಮರು, ಇಸ್ಲಾಂ ಧರ್ಮದ ಐದು ಪ್ರಮುಖ ಕರ್ತವ್ಯಗಳಲ್ಲೊಂದಾದ ಪವಿತ್ರ ಹಜ್ ಯಾತ್ರೆಗೆ ತೆರಳುತ್ತಾರೆ. ಪ್ರವಾದಿ ಮಹಮ್ಮದರ ಕರ್ಮಭೂಮಿಯಾಗಿದ್ದ ಸೌದಿ ಅರೆಬಿಯಾದ ಮೆಕ್ಕಾ ಮತ್ತು ಮದೀನ ಪಟ್ಟಣಗಳಲ್ಲಿರುವ ಪವಿತ್ರ ಯಾತ್ರಾ ಸ್ಥಳಗಳ ದರ್ಶನ ಪಡೆದು ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ ಬರುತ್ತಾರೆ.
ವಿಶ್ವದ ಮೂಲೆಮೂಲೆಗಳಿಂದ ಬಂದು ಹಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಬಕ್ರೀದ್ ಹಬ್ಬದ ದಿನದಂದು ತಮ್ಮ ಯಾತ್ರೆಯನ್ನು ಪೂರೈಸಿ ತಮ್ಮ ತಮ್ಮ ತಾಯಿನಾಡಿಗೆ ಮರಳುತ್ತಾರೆ. ಭಾರತದೆಲ್ಲೆಡೆ ಬಕ್ರೀದ್ ಪ್ರಾರ್ಥನೆ ಆಚರಣೆ ಸಂಭ್ರಮದ ಚಿತ್ರಗಳು ಇಲ್ಲಿವೆ...

ಹುಬ್ಬಳ್ಳಿಯಲ್ಲಿ
ಕರ್ನಾಟಕದ ಹುಬ್ಬಳ್ಳಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಪ್ರಾರ್ಥನೆ ಮುಗಿಸಿಕೊಂಡ ಬರುತ್ತಿರುವ ಮುಸ್ಲಿಮರು

ಶ್ರೀನಗರದಲ್ಲಿ
ಕಾಶ್ಮೀರದ ಮುಸ್ಲಿಮರು ಈದ್ ಉಲ್ ಜುಹಾ ಅಂಗವಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ PTI Photo by S Irfan

ದೆಹಲಿಯಲ್ಲಿ
ಮುಸ್ಲಿಮರು ಈದ್ ಉಲ್ ಜುಹಾ ಅಂಗವಾಗಿ ಜಮಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ PTI Photo by Shirish Sethe

ದೆಹಲಿಯಲ್ಲಿ
ಮುಸ್ಲಿಮರು ಈದ್ ಉಲ್ ಜುಹಾ ಅಂಗವಾಗಿ ಜಮಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ PTI Photo by Kamal Singh

ಜೈಪುರದಲ್ಲಿ
ಜೈಪುರದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದಾರೆ.

ಭೋಪಾಲ್ ನಲ್ಲಿ
ಮಧ್ಯಪ್ರದೇಶದ ಭೋಪಾಲ್ ನ ಮೋತಿ ಮಸೀದಿಯಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ
ಶ್ರೀನಗರದ ಪೊಲೊ ಮೈದಾನದಲ್ಲಿ ಮುಸ್ಲಿಂ ಮಹಿಳೆಯರು ಪ್ರಾರ್ಥನೆ ಮಾಡಿದರು. PTI Photo by S Irfan

ಕೋಲ್ಕತ್ತಾದಲ್ಲಿ
ಕೋಲ್ಕತ್ತಾದ ರೆಡ್ ರಸ್ತೆಯಲ್ಲಿ ಈದ್ ಉಲ್ ಜುಹಾ ಅಂಗವಾಗಿ ಸಾಮೂಹಿಕ ಪ್ರಾರ್ಥನೆ PTI Photo by Ashok Bhaumik

ಹೈದರಾಬಾದಿನಲ್ಲಿ
ಹೈದರಾಬಾದಿನಲ್ಲಿ ಮೆಕ್ಕಾ ಮಸೀದಿಯಲ್ಲಿ ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ

ಜಮ್ಮು ಕಾಶ್ಮೀರದಲ್ಲಿ
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಅವರು ಹಜರತ್ ಮಂದಿರದಲ್ಲಿ ಈದ್ ಉಲ್ ಜುಹಾ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು

ಮಥುರಾದಲ್ಲಿ
ಮಥುರಾದಲ್ಲಿ ಈದ್ ಉಲ್ ಜುಹಾ ಅಂಗವಾಗಿ ಸಾಮೂಹಿಕ ಪ್ರಾರ್ಥನೆ.

ನವದೆಹಲಿ
ನವದೆಹಲಿ: ಮಕ್ಕಳು ಹೊಸ ಬಟ್ಟೆ ತೊಟ್ಟು ಸಂಭ್ರಮದಿಂದ ಹಬ್ಬ ಆಚರಿಸಿದ್ದಾರೆ.

ಆಗ್ರಾದಲ್ಲಿ
ಆಗ್ರಾದಲ್ಲಿ ಈದ್ ಉಲ್ ಜುಹಾ ಅಂಗವಾಗಿ ಸಾಮೂಹಿಕ ಪ್ರಾರ್ಥನೆ.

ನೋಯ್ಡಾದಲ್ಲಿ
ಈದ್ ಉಲ್ ಜುಹಾ ಅಂಗವಾಗಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ.

ಲಕ್ನೋದಲ್ಲಿ
ಈದ್ ಉಲ್ ಜುಹಾ ಅಂಗವಾಗಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ. PTI Photo by Nand Kumar












Click it and Unblock the Notifications