ಆಕರ್ಷಕ, ಕಣ್ಮನ ಸೆಳೆಯುವ ಸುದ್ದಿ ಚಿತ್ರಗಳು
ಬೆಂಗಳೂರು, ಜು.4: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಇತ್ತೀಚಿನ ರೌಂಡ್ಅಪ್ ಅನ್ನು ಚಿತ್ರಗಳ ಮೂಲಕ ಹೇಳುವ ಪ್ರಯತ್ನ ಇದಾಗಿದೆ. ಇಲ್ಲಿ ಅಕ್ಷರಕ್ಕಿಂತ ಆಕರ್ಷಕ ಚಿತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಚುಟುಕು ಮಾಹಿತಿಯೊಂದಿಗೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
ಮುಂಬೈನಲ್ಲಿ ಈಗ ಮಳೆ ಸಿಂಚನ ಸ್ವಲ್ಪ ಜೋರಾಗೇ ಆಗಿದೆ. ರಸ್ತೆಗಳಲ್ಲಿರುವ ಹೊಂಡಗಳು ತುಂಬಿ ತುಳುಕುತ್ತಿದ್ದು, ಕಳೆದೆರಡು ದಿನಗಳಿಂದ ಕೆಸರು ಭರಿತ ರಸ್ತೆಗಳಲ್ಲಿ ವಾಹನ ಚಲಾಯಿಸುವುದೇ ಕಷ್ಟದ ಕೆಲಸ. ಕೆಸರಿನ ರಸ್ತೆಯಲ್ಲಿ ಸಾಗುವ ದೃಶ್ಯ ನಿಮಗಾಗಿ ಇಲ್ಲಿದೆ. ಅಂದ ಹಾಗೆ ಇದು ಗಲ್ಫ್ ಮಾನ್ಸೂಸ್ ಚಾಂಪಿಯನ್ ಶಿಪ್ ಗೆ ತಯಾರಿಯಂತೆ.
ದುರ್ಗಾ ಪ್ರತಿಮೆ ಮಾಡುವ ಶಿಲ್ಪಿ ಫುಟ್ಬಾಲ್ ಸ್ಟಾರ್ ಪ್ರತಿಮೆ ಮಾಡುತ್ತಿರುವುದು, ಹುಯ್ಯೋ ಹುಯ್ಯೋ ಮಳೆರಾಯ ಎಂದು ನಡೆದ ವರುಣ ಪೂಜೆ, ಜಮ್ಮು ಮತ್ತು ಕಾಶ್ಮೀರಕ್ಕೆ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಉಂಟಾದ ಟ್ರಾಫಿಕ್ ಜಾಮ್, ಬೆಲಾರುಸ್ ನಲ್ಲಿ ಸ್ವತಂತ್ರ ಸಂಭ್ರಮ, ಓರ್ಲಾಂಡೋನ ಅತಿಥಿ, ಅಹಮದಾಬಾದಿನ ಸುಂದರ ಸೇತುವೆ ಮುಂತಾದ ಚಿತ್ರಗಳು ಇಲ್ಲಿವೆ...

ಗಲ್ಫ್ ಮಾನ್ಸೂಸ್ ಚಾಂಪಿಯನ್ ಶಿಪ್
ಕೆಸರಿನ ರಸ್ತೆಯಲ್ಲಿ ಸಾಗುವ ದೃಶ್ಯ ನಿಮಗಾಗಿ ಇಲ್ಲಿದೆ. ಅಂದ ಹಾಗೆ ಇದು ಗಲ್ಫ್ ಮಾನ್ಸೂಸ್ ಚಾಂಪಿಯನ್ ಶಿಪ್ ಗೆ ತಯಾರಿ

ಹೈದರಾಬಾದಿನಲ್ಲಿ ಮಳೆಗಾಗಿ ಪ್ರಾರ್ಥನೆ
ಗಂಡಿಪೇಟ್ ನ ಕೆರೆಯೊಂದರಲ್ಲಿ ಚಿಲ್ಕೂರು ಬಾಲಾಜಿ ದೇಗುಲದ ಅರ್ಚಕರು ವರುಣ ಪೂಜೆ ಸಲ್ಲಿಸಿ ಪರ್ಜನ್ಯ ಜಪ ಮಾಡಿ ಮಳೆಗಾಗಿ ಪ್ರಾರ್ಥಿಸಿದ್ದಾರೆ.

ಕಲಾವಿದನ ಕೈಯಲ್ಲಿ ಫುಟ್ಬಾಲ್ ಪಟು
ಕೋಲ್ಕತ್ತಾದ ದುರ್ಗಾ ಕುಮಾರ್ ಟುಲಿಯಲ್ಲಿ ಪ್ರತಿಮೆ ಮಾಡುವ ಕಲಾವಿದನ ಕೈಯಲ್ಲಿ ಅನಾವರಣಗೊಂಡ ಬ್ರೆಜಿಲ್ಲಿನ ಫುಟ್ಬಾಲ್ ಪಟು ನೇಮಾರ್ ಮೂಡಿದ್ದು ಹೀಗೆ PTI Photo by Ashok Bhaumik

ಶ್ರೀನಗರದಲ್ಲಿ ಸಕತ್ ಟ್ರಾಫಿಕ್ ಜಾಮ್
ಪ್ರಧಾನಿ ನರೇಂದ್ರ ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ಶ್ರೀನಗರ ಹಲವೆಡೆ ತಪಾಸಣೆ ನಡೆಸಲಾಗಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. PTI Photo by S Irfan

ಬೆಲಾರುಸ್ ನಲ್ಲಿ ಸ್ವತಂತ್ರ ಸಂಭ್ರಮ
ಬೆಲಾರುಸ್ ನಲ್ಲಿ ಸ್ವತಂತ್ರ ಸಂಭ್ರಮಾಚರಣೆ ಅಂಗವಾಗಿ ಜೆಟ್ ಫೈಟರ್ ಗಳು ಹೊರ ಹಾಕಿದ ಚಿತ್ರಾವಳಿ. ಮಿಂಕ್ಸ್ ನಗರವು 1944ರಲ್ಲಿ ನಾಜಿ ಅತಿಕ್ರಮಿಗಳ ಕೈಗೆ ಸಿಲುಕಿತ್ತು ರೆಡ್ ಆರ್ಮಿಯಿಂದ ಜು.3 ರಂದು ಮುಕ್ತಗೊಂಡಿತು.

ಅಲಹಾಬಾದಿನ ಸೇತುವೆ ಸುಂದರ ಚಿತ್ರ
ಅಲಹಾಬಾದ್ : ನೈನಿ ಸೇತುವೆ ಮೋಡಗಳ ಗಳ ಬರೆದ ಒಂದು ಸುಂದರ ಚಿತ್ತಾರ

ಓರ್ಲಾಂಡೋದಿಂದ ಬಂದ ಕಿಲ್ಲರ್ ವೇಲ್
ಓರ್ಲಾಂಡೋದ ಸೀ ವರ್ಲ್ಡ್ ನ ರಿಯಾನ್ ಫಾಲ್ಕ್ನರ್, ಕಿಲ್ಲರ್ ತಿಮಿಂಗಲ ಮೆಲಿಯಾ ಹಾಗೂ ಮಿಚೆಲ್ ಶೂಮ್ಯಾಕರ್ (ಬಲಗಡೆ) ತಿಮಿಂಗಲ ಕಾಯ್ಲಾ ಹಳೆ ಚಿತ್ರ ಮತ್ತೆ ಪ್ರದರ್ಶಿಸಲಾಗುತ್ತಿದೆ. ಹಿಡಿದಿಟ್ಟ ತಿಮಿಂಗಲಗಳ ಆಯಸ್ಸು(27 ವರ್ಷ) ಹಾಗೂ ಮುಕ್ತವಾದ ತಿಮಿಂಗಲ(49 ವರ್ಷ) ವಯಸ್ಸಿನ ಅಂತರದ ಬಗ್ಗೆ ಬ್ರಿಟಿಷ್ ಕೊಲಂಬಿಯಾ ಹಾಗೂ ವಾಷಿಂಗ್ಟನ್ ನಲ್ಲಿ ಸಂಶೋಧನೆ ನಡೆಸಲಾಗುತ್ತಿದೆ. AP/PTI












Click it and Unblock the Notifications