ಚಿತ್ರಸುದ್ದಿ: ಕೊಲ್ಲೂರಿನಲ್ಲಿ ನಡೆದ ವಿಶೇಷ ಮದುವೆ
ಉಡುಪಿ, ಫೆ.21: ಶ್ರೀಕ್ಷೇತ್ರ ಕೊಲ್ಲೂರು ಮುಕಾಂಬಿಕಾ ದೇಗುಲದಲ್ಲಿ ವಿಶೇಷವಾದ ಮದುವೆ ಜರುಗಿದೆ, ಭಾರತೀಯ ಸಂಸ್ಕೃತಿ, ಸಾಂಪ್ರದಾಯಿಕ ಮದುವೆಗೆ ಮಾರು ಹೋದ ಯುಕೆ ರೂಪದರ್ಶಿ, ಯೋಗ ಗುರುಯೊಬ್ಬರು ಅಮೆರಿಕ ವಧುವಿನ ಜತೆಗೆ ಹಿಂದೂ ಪದ್ಧತಿ ಪ್ರಕಾರ ಮದುವೆಯಾಗಿದ್ದಾರೆ.
ಉಡುಪಿ ಜಿಲ್ಲೆಯ ಕೊಲ್ಲೂರು ಮುಕಾಂಬಿಕೆಯ ಸನ್ನಿಧಿಯಲ್ಲಿ ಹಾಲಿವುಡ್ ನಟಿ ಜೈಮಾ ಎಂಬವರು, ಯೋಗಗುರು, ಒಂದು ಕಾಲದ ರೂಪದರ್ಶಿ ಕ್ಯಾಮರೋನ್ ಎಂಬಾತನನ್ನು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾಳೆ. ಮೂಕಾಂಬಿಕಾ ಕ್ಷೇತ್ರದ ಸಮೀಪವಿರುವ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಇಬ್ಬರೂ ಗುರುವಾರ ಸಪ್ತಪದಿ ತುಳಿದಿದ್ದಾರೆ.
ಮೆಹಂದಿ, ವರಪೂಜೆ, ಗಣಪತಿ ಪೂಜೆ, ಗೌರಿ ಪೂಜೆ, ಕಾಶಿ ಯಾತ್ರೆ, ಮಾಂಗಲ್ಯಧಾರಣೆ, ಕನ್ಯಾದಾನ, ಸಪ್ತಪದಿ ಹೀಗೆ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಮದುವೆ ಜರುಗಿದೆ. ಸ್ಥಳೀಯ ಅರ್ಚಕ ಸುರೇಶ್ ಭಟ್ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ನಡೆದ ವಿವಾಹ ನೆರವೇರಿದ್ದು ಬಳಿಕ ದಂಪತಿಗಳು ಕೊಲ್ಲೂರು ಮುಕಾಂಬಿಕೆಯ ದರ್ಶನ ಪಡೆದು ಧನ್ಯತೆ ಅನುಭವಿಸಿದ್ದಾರೆ. ನೂತನ ವಧುವರರ ಚಿತ್ರ ಇಲ್ಲಿದೆ ತಪ್ಪದೇ ನೋಡಿ..
ಉಳಿದಂತೆ, ನವದೆಹಲಿಯಲ್ಲಿ ಹೇಮಮಾಲಿನಿ ನೃತ್ಯ, ಸೋಚಿ ಒಲಿಂಪಿಕ್ಸ್, ಮೋದಿ ಅವರ ವಿಜಯ್ ಶಂಖನಾದ್ ಯುವ ಸಂಗಮ್ ಸಮಾವೇಶ, ಅರುಣಾಚಲ ಪ್ರದೇಶದವರ ಸಂಭ್ರಮ ಎಲ್ಲವೂ ಇಂದಿನ ಪ್ಯಾಕೇಜಿನಲ್ಲಿದೆ ತಪ್ಪದೇ ನೋಡಿ..

ಕೊಲ್ಲೂರಿನಲ್ಲಿ ನಡೆದ ವಿಶೇಷ ಮದುವೆ
ಶ್ರೀಕ್ಷೇತ್ರ ಕೊಲ್ಲೂರು ಮುಕಾಂಬಿಕಾ ದೇಗುಲದಲ್ಲಿ ವಿಶೇಷವಾದ ಮದುವೆ ಜರುಗಿದೆ, ಭಾರತೀಯ ಸಂಸ್ಕೃತಿ, ಸಾಂಪ್ರದಾಯಿಕ ಮದುವೆಗೆ ಮಾರು ಹೋದ ಯುಕೆ ರೂಪದರ್ಶಿ, ಯೋಗ ಗುರುಯೊಬ್ಬರು ಅಮೆರಿಕ ವಧುವಿನ ಜತೆಗೆ ಹಿಂದೂ ಪದ್ಧತಿ ಪ್ರಕಾರ ಮದುವೆಯಾಗಿದ್ದಾರೆ.

ಸೋಚಿ ಒಲಿಂಪಿಕ್ಸ್ ಫ್ರೀ ಸ್ಕೇಟಿಂಗ್
ಸೋಚಿ ಚಳಿಗಾಲ ಒಲಿಂಪಿಕ್ಸ್ 2014ರ ಐಸ್ ಬರ್ಗ್ ಸ್ಕೇಟಿಂಗ್ ಪ್ಯಾಲೇಸ್ ನಲ್ಲಿ ಆಸ್ಟ್ರೇಲಿಯಾದ ಬ್ರೂಕ್ಲಿ ಹಾನ್ ಅವರು ಫ್ರೀ ಸ್ಕೇಟ್ ಫಿಗರ್ ಫೈನಲ್ ಸ್ಪರ್ಧೆಯಲ್ಲಿ ಕಾಣಿಸಿಕೊಂಡಿದ್ದು ಹೀಗೆ(AP Photo/Bernat Armangue)

ಪಾರ್ವತಿ ವೇಷಧಾರಿಯಾದ ಹೇಮಮಾಲಿನಿ
ಪಾರ್ವತಿ ವೇಷಧಾರಿಯಾದ ಹೇಮಮಾಲಿನಿ ಅವರು ನವದೆಹಲಿಯ ಎಫ್ ಐ ಸಿಸಿಐ ಆಡಿಟೋರಿಯಂನಲ್ಲಿ ನೃತ್ಯ ಪ್ರದರ್ಶನ ನೀಡಿದರು.

ವಿಜಯ್ ಶಂಖನಾದ್ ಯುವ ಸಂಗಮ್
ಅಹಮದಾಬಾದಿನಲ್ಲಿ ನರೇಂದ್ರ ಮೋದಿ ಅವರ ವಿಜಯ್ ಶಂಖನಾದ್ ಯುವ ಸಂಗಮ್ ನಲಿ ಕಂಡು ಬಂದ ಬಿಜೆಪಿ ಕಾರ್ಯಕರ್ತರು (ಪಿಟಿಐ ಚಿತ್ರ)

ಅರುಣಾಚಲ ಪ್ರದೇಶ ರಾಜ್ಯದವರ ಸಂಭ್ರಮ
ಇಟಾನಗರ: ಗುರುವಾರದಂದು 28ನೇ ರಾಜ್ಯ ದಿವಸ ಆಚರಣೆ ಸಂದರ್ಭದಲ್ಲಿ ಅರುಣಾಚಲಪ್ರದೇಶದ ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲಿ ಅಲ್ಲಿನ ಮಹಿಳೆಯರು

ದೇಶದ 29ನೇ ರಾಜ್ಯವಾಗಿ ತೆಲಂಗಾಣ
ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ಹೊಸ ರಾಜ್ಯದ ಬಗ್ಗೆ ಪಿಟಿಐ ಗ್ರಾಫಿಕ್ಸ್












Click it and Unblock the Notifications