Tirumala Tirupati: ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ, ದರ್ಶನ-ಪೂಜೆ ವೇಳಾಪಟ್ಟಿ ಬಗ್ಗೆ ಟಿಟಿಡಿಯಿಂದ ಮಹತ್ವದ ಮಾಹಿತಿ

ತಿರುಪತಿ, ನವೆಂಬರ್ 19: ತಿರುಮಲ ತಿರುಪತಿ ದೇವರ ಭಕ್ತಾಧಿಗಳಿಗೆ ಸಿಹಿ ಸುದ್ದಿಯೊಂದು ಲಭ್ಯವಾಗಿದೆ. ತಿಮ್ಮಪ್ಪನ ದರ್ಶನ ಕುರಿತು ತಿರುಮಲ ತಿರುಪತಿ ದೇವಸ್ಥಾನ (TTD) ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮಾಹಿತಿ ಆಧರಿಸಿ ನೀವು ಮುಂದಿನ ದಿನಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಂಡು ಬಾಲಾಜಿ ದರ್ಶನ ಪಡೆಯಬಹುದು.

ತಿರುಮಲ ತಿರುಪತಿ ದೇವಸ್ಥಾನ (TTD) 2024ರ ಹೊಸ ವರ್ಷದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಫೆಬ್ರವರಿ ತಿಂಗಳಲ್ಲಿ ವಿವಿಧ ಸೇವೆಗಳ ದರ್ಶನ ಟಿಕೆಟ್‌ಗಳ ಸಮಯ, ದಿನಾಂಕದ ಮಾಹಿತಿ ನೀಡಿದೆ.

Tirupati Tirumala Darshan Ticket-Various Services Schedule of 2024 February Released by TTD

ವೇಳಾಪಟ್ಟಿ ಪ್ರಕಾರ ಟಿಟಿಡಿ ಶ್ರೀವಾರಿ ಅರ್ಜಿತ ಸೇವೆಯ (ಕಲ್ಯಾಣಂ, ಊಂಜಲ್ ಸೇವೆ, ಆರ್ಜಿತ ಬ್ರಹ್ಮೋತ್ಸವಂ, ಸಹಸ್ರದೀಪಾಲಂಕಾರಣ) ಟಿಕೆಟ್‌ಗಳನ್ನು ಬಿಡುಗಡೆ ಮಾಡಲಿದೆ. ಫೆಬ್ರವರಿ ತಿಂಗಳ 21 ರಂದು ಬೆಳಗ್ಗೆ 10 ಗಂಟೆಗೆ ವರ್ಚುವಲ್ ಆರ್ಜಿತ (ಕಲ್ಯಾಣೋತ್ಸವ, ಊಂಜಲ್ ಸೇವೆ, ಆರ್ಜಿತ ಬ್ರಹ್ಮೋತ್ಸವಂ, ಸಹಸ್ರದೀಪಾಲಂಕರಣ) ಸೇವೆಗಳ ಟಿಕೆಟ್‌ಗಳನ್ನು ಇದೇ ನವೆಂಬರ್ 21 ರಂದು ಮಧ್ಯಾಹ್ನ 3 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ.

ನವೆಂಬರ್ 23 ರಂದು ಬೆಳಗ್ಗೆ 10 ಗಂಟೆಗೆ ತಿರುಮಲ ಶ್ರೀವಾರಿ ಅಂಗಪ್ರದಕ್ಷಿಣೆ ಟಿಕೆಟ್‌ಗಳು ಹಾಗೂ ಹಿರಿಯರು ಮತ್ತು ಅಂಗವಿಕಲರಿಗೆ ಟೋಕನ್‌ಗಳನ್ನು ಬಿಡುಗಡೆ ಮಾಡುವುದಾಗಿ ಟಿಟಿಡಿ ತಿಳಿಸಿದೆ. ಇದರೊಂದಿಗೆ ಮುಂದಿನ 2024 ಫೆಬ್ರವರಿಯಲ್ಲಿ ರೂ.300/- ವಿಶೇಷ ದರ್ಶನ ಟಿಕೆಟ್‌ಗಳ ಕೋಟಾವನ್ನು ನವೆಂಬರ್ 24 ರಂದು ಬಿಡುಗಡೆ ಆಗಲಿವೆ.

ನಂತರ ನವೆಂಬರ್ 25 ರಂದು ತಿರುಪತಿಯಲ್ಲಿ ಕೊಠಡಿಗಳ ಕೋಟಾ ಮತ್ತು ನವೆಂಬರ್ 26ರಂದು ತಿರುಮಲದಲ್ಲಿ ಕೊಠಡಿಗಳ ಕೋಟಾ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+