Tirupati: ಪಾದಚಾರಿ ಮಾರ್ಗಕ್ಕೆ ನಿರ್ಬಂಧ- ತಿಪ್ಪಮ್ಮನ ದರ್ಶನಕ್ಕೆ ದಿನಗಟ್ಟಲೇ ಕಾಯಬೇಕಾದ ಅನಿವಾರ್ಯತೆ, ಮಾಹಿತಿ, ವಿವರ

ತಿರುಪತಿ, ಅಕ್ಟೋಬರ್‌ 03: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತರು ದಿನಗಟ್ಟಲೇ ಕಾಯಬೇಕಾದ ಅನಿವಾರ್ಯತೆ ಬಂದೊದಗಿದೆ. ಅಲಿಪಿರಿ ಪಾದಚಾರಿ ಮಾರ್ಗದಲ್ಲಿ ಭಕ್ತಾದಿಗಳಿಗೆ ಯಾವುದೇ ಕಾಡು ಪ್ರಾಣಿಗಳ ಬೆದರಿಕೆ ಇಲ್ಲ ಎಂದು ಅರಣ್ಯ ಇಲಾಖೆ ಖಚಿತಪಡಿಸುವವರೆಗೆ ಇದು ಮುಂದುವರಿಯಲಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ ( ಟಿಟಿಡಿ ) ತಿಳಿಸಿದೆ.

ಅಲಿಪಿರಿ ಪಾದಚಾರಿ ಮಾರ್ಗದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮಾರ್ಗಕ್ಕೆ ನಿರ್ಬಂಧ ಹೇರಲಾಗಿದೆ. ಈ ಮಾರ್ಗದಲ್ಲಿ ಭಕ್ತರಿಗೆ ಯಾವುದೇ ಬೆದರಿಕೆ ಇಲ್ಲವೆಂದು ಅರಣ್ಯ ಇಲಾಖೆ ಖಚಿತಪಡಿಸಲಿದೆ. ಅಲ್ಲಿಯವರಿಗೆ ಪಾದಚಾರಿ ಮಾರ್ಗಗಳ ಮೇಲಿನ ನಿರ್ಬಂಧ ಮುಂದುವರಿಯುತ್ತದೆ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.

Tirumala Tirupati Devasthanam continues curbs on walkways; temple sees 12-hour wait for darshan

ತಿರುಪತಿಯಲ್ಲಿ ಭಕ್ತರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಹೇಳಿದ್ದಾರೆ.

ಪಾದಚಾರಿ ಮಾರ್ಗದಲ್ಲಿ 6 ವರ್ಷದ ಲಕ್ಷಿತಾ ಚಿರತೆಗೆ ಬಲಿಯಾಗಿದ್ದಾರೆ. ಆ ನಂತರ 12 ವರ್ಷದೊಳಗಿನ ಮಕ್ಕಳನ್ನು ಮಧ್ಯಾಹ್ನ 2 ಗಂಟೆಯ ನಂತರ ಟ್ರೆಕ್ಕಿಂಗ್ ಮಾಡದಂತೆ ಟಿಟಿಡಿ ನಿರ್ಬಂಧ ಹೇರಿದೆ.

ಇತ್ತೀಚೆಗೆ ಸಂಜೆ 6 ಗಂಟೆಯ ನಂತರ ಘಾಟ್ ರಸ್ತೆಗಳಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳ ಮೇಲಿನ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಟಿಟಿಡಿ ಹೇಳಿದೆ.

Tirumala Tirupati Devasthanam continues curbs on walkways; temple sees 12-hour wait for darshan

ವಾಹನ ಸಂಚಾರದ ಅನುಮತಿಯನ್ನು ರಾತ್ರಿ 10 ರ ವರೆಗೆ ವಿಸ್ತರಿಸಲಾಗಿದೆ. ಅರಣ್ಯ ಇಲಾಖೆ ಸಹಯೋಗದಲ್ಲಿ ಟಿಟಿಡಿ ಆರು ಚಿರತೆಗಳನ್ನು ಸೆರೆ ಹಿಡಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಬಾಲಾಜಿಯ ದರ್ಶನಕ್ಕಾಗಿ 12 ಗಂಟೆ ಕಾಯಲೇಬೇಕಾದ ಅನಿವಾರ್ಯತೆ

ಇದರ ನಡುವೆ, ತಿರುಮಲದಲ್ಲಿ ಭಕ್ತರ ದಟ್ಟಣೆ ಭಾರೀ ಪ್ರಮಾಣದಲ್ಲಿ ಮುಂದುವರೆದಿದೆ. ಅಕ್ಟೋಬರ್ 2 ರಂದು ದರ್ಶನಕ್ಕಾಗಿ ಕನಿಷ್ಟ 12 ಗಂಟೆಗಳ ಸಮಯದವರೆಗೆ ಕಾಯಬೇಕಾದ ಅನಿವಾರ್ಯತೆ ಬಂದೊದಗಿತು ಎಂದು ವರದಿಗಳು ಹೇಳಿವೆ.

ಭಕ್ತರ ಕಾಯುವ ಸಮಯವು ವಾರಾಂತ್ಯಕ್ಕೆ ಹೋಲಿಸಿದರೆ 4 ಪಟ್ಟು ಕಡಿಮೆಯಾಗಿದೆ. ವಾರಾಂತ್ಯದಲ್ಲಿ ಕಾಯುವ ಸಮಯವು ಸುಮಾರು 48 ಗಂಟೆಗಳಷ್ಟಿತ್ತು ಎಂದು ತಿಳಿದುಬಂದಿದೆ.

Tirumala Tirupati Devasthanam continues curbs on walkways; temple sees 12-hour wait for darshan

ಸೋಮವಾರ ಸುಮಾರು 80,551 ಭಕ್ತರು ವೆಂಕಟೇಶ್ವರನಿಗೆ ಹರಕೆ ಸಲ್ಲಿಸಿದ್ದು, ಹುಂಡಿ ಆದಾಯ 4.27 ಕೋಟಿ ರೂ.ಗಳಷ್ಟು ಬಂದಿದೆ ಎಂದು ಟಿಟಿಡಿ ಮಾಹಿತಿ ನೀಡಿದೆ.

ಯಾತ್ರಿಕರ ದಟ್ಟಣೆ ಹೆಚ್ಚಿರುವ ಹಿನ್ನೆಲೆಯಲ್ಲಿ ಟಿಟಿಡಿ ಅಧ್ಯಕ್ಷರು ಸರದಿ ಸಾಲುಗಳನ್ನು ಪರಿಶೀಲಿಸಿದ್ದಾರೆ. ಭಕ್ತರಿಗೆ ಒದಗಿಸಿರುವ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದ ಅವರು, ಯಾವುದೇ ಭಕ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಯಾತ್ರಾರ್ಥಿಗಳಿಗೆ ನೀಡುತ್ತಿರುವ ಆಹಾರ, ಕುಡಿಯುವ ನೀರು ಸೇರಿದಂತೆ ಸೌಲಭ್ಯಗಳ ಕುರಿತು ಪರಿಶೀಲನೆ ಟಿಟಿಡಿ ಅಧಿಕಾರಿಗಳು ಕಾಳಜಿ ವಹಿಸಿರುವುದು ಕಂಡುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+