Surgical Strike: ಪಾಕಿಸ್ತಾನದ ಮೇಲೆ ದಾಳಿ, ಮತ್ತೊಂದು ಸರ್ಜಿಕಲ್ ಸ್ಟ್ರೈಕ್...
ಭಾರತೀಯರ ರಕ್ತ ಕೊತ ಕೊತ ಕುದಿಯುತ್ತಿದೆ... ಭಾರತ ಮಾತೆಯ ಕಿರೀಟದಂತೆ ಇರುವ ನಮ್ಮ ಜಮ್ಮು & ಕಾಶ್ಮೀರದಲ್ಲಿ 26 ಭಾರತೀಯರ ಹತ್ಯೆ ದೊಡ್ಡ ಕಿಚ್ಚು ಹೊತ್ತಿಸಿದೆ. ಇಡೀ ಜಗತ್ತಿನಾದ್ಯಂತ ಪ್ರಪಂಚದ ಮೂಲೆ ಮೂಲೆಯಲ್ಲೂ ಜಮ್ಮು & ಕಾಶ್ಮೀರದ ಉಗ್ರರ ಅಟ್ಯಾಕ್ ಬಗ್ಗೆ ಆಕ್ರೋಶದ ಕಹಳೆ ಮೊಳಗಿದೆ. ಹೀಗಿದ್ದಾಗಲೇ, ಪಾಕಿಸ್ತಾನದ ಮೇಲೆ ದಾಳಿ, ಮತ್ತೊಂದು ಸರ್ಜಿಕಲ್ ಸ್ಟ್ರೈಕ್...
ಭಾರತ ಶಾಂತಿಯ ನಾಡು ನಿಜ, ಆದರೆ ಭಾರತದ ತಂಟೆಗೆ ಬಂದ ಶತ್ರುವಿನ ಕಥೆ ಮುಗಿಸಿದೆ ಬಿಡುವುದಿಲ್ಲ. ಭಾರತೀಯ ಸೇನೆ ಎದುರು ಹಾಕಿಕೊಂಡು ಶತ್ರುಗಳು ಬದುಕಿ ಉಳಿಯುವುದಿಲ್ಲ. ಅಷ್ಟಕ್ಕೂ ಇದೀಗ ಆಗಿದ್ದು ಏನು ಅಂದ್ರೆ, ಕಾಶ್ಮೀರದ ಪ್ರಮುಖ ನಗರ ಶ್ರೀನಗರ ಭಾಗದಿಂದ ಕೇವಲ 90 ಕಿ.ಮೀ. ದೂರದಲ್ಲಿ ಇರುವ ಪಹಲ್ಗಾಮ್ ಜಾಗದಲ್ಲಿ ಉಗ್ರರು ಅಟ್ಟಹಾಸವನ್ನ ಮೆರೆದಿದ್ದಾರೆ. ಪಹಲ್ಗಾಮ್ ಪ್ರದೇಶಕ್ಕೆ ಪ್ರವಾಸಕ್ಕೆ ಅಂತಾ ತೆರಳಿದ್ದ ಟೂರಿಸ್ಟ್‌ಗಳನ್ನೇ ಈಗ ಟಾರ್ಗೆಟ್ ಮಾಡಿ ಪಾಪಿ ಉಗ್ರರು ದಾಳಿ ಮಾಡಿದ್ದಾರೆ, ಈ ಮೂಲಕ 26 ಭಾರತೀಯರ ಹತ್ಯೆ ನಡೆದಿದೆ...

ಮತ್ತೊಂದು ಸರ್ಜಿಕಲ್ ಸ್ಟ್ರೈಕ್...
ನಿಮಗೆ ಪುಲ್ವಾಮಾ ದಾಳಿ ದುರ್ಘಟನೆಯಲ್ಲಿ ಹುತಾತ್ಮರಾದ ಸೈನಿಕರ ಬಗ್ಗೆ ಗೊತ್ತಿರಬಹುದು. ಅದು 2019ರ ಫೆಬ್ರವರಿ 14, ಇಂಡಿಯಾದ ಪ್ರತಿಯೊಬ್ಬ ಪ್ರಜೆಯೂ ಮರೆಯಲು ಆಗದಿರುವ ದಿನ. ಯಾಕಂದ್ರೆ ಇದೇ ದಿನ ಭಾರತದ 40 ಹೆಮ್ಮೆಯ ಯೋಧರು ಹುತಾತ್ಮರಾಗಿದ್ದರು. ಆ ದಿನವನ್ನು ಇಡೀ ಜಗತ್ತೇ ಕರಾಳ ದಿನ ಎನ್ನುತ್ತದೆ. ಹೀಗೆ, ಇಂತಹ ಭೀಕರ ಘಟನೆ ನಡೆದು 6 ವರ್ಷಗಳ ನಂತರ ಮತ್ತೊಂದು ರಣಭೀಕರ ಘಟನೆಗೆ ಜಮ್ಮು & ಕಾಶ್ಮೀರ ಸಾಕ್ಷಿಯಾಗಿದೆ. ಹೀಗಿದ್ದಾಗಲೇ, ಪಾಕಿಸ್ತಾನದ ಮೇಲೆ ದಾಳಿ, ಮತ್ತೊಂದು ಸರ್ಜಿಕಲ್ ಸ್ಟ್ರೈಕ್...
ಉಗ್ರರಿಗೆ ಸರಿಯಾದ ಪಾಠ ಕಲಿಸಬೇಕು!
ಹೌದು, ಜಮ್ಮು & ಕಾಶ್ಮೀರದಲ್ಲಿ ಭೀಕರ ಘಟನೆ ನಡೆದ ನಂತರ ಪಾಕಿಸ್ತಾನದ ಮೇಲೆ ದಾಳಿ ಮಾಡಿ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಬೇಕು ಎಂಬ ಒತ್ತಾಯ ಜೋರಾಗಿದೆ. ಈ ಹಿಂದೆ ಕೂಡ ಪಾಕಿಸ್ತಾನದ ಉಗ್ರರು ಜಮ್ಮು & ಕಾಶ್ಮೀರದಲ್ಲಿ ರಕ್ತ ಹರಿಸಿದ್ದ ಸಮಯದಲ್ಲಿ ದೊಡ್ಡ ಪ್ಲಾನ್ ಮಾಡಿ, ಪಾಕಿಸ್ತಾನದ ನೆಲಕ್ಕೆ ನುಗ್ಗಿ ದಾಳಿಯನ್ನ ಮಾಡಿ ಉಗ್ರರ ಜೀವ ತೆಗೆದಿದ್ದರು ನಮ್ಮ ಯೋಧರು. ಈಗ ಕೂಡ ಅದೇ ರೀತಿಯಾಗಿ ಪಾಕಿಸ್ತಾನದ ನೆಲಕ್ಕೆ ನುಗ್ಗಿ ದಾಳಿಯನ್ನ ಮಾಡಿ ಅಂತಾ ಒತ್ತಾಯ ಮಾಡುತ್ತಿದ್ದಾರೆ ಜನ. ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಆಗಬೇಕು ಎಂಬ ಒತ್ತಾಯ ಹೆಚ್ಚಾಗಿದೆ.












Click it and Unblock the Notifications