Breaking: ಮಂಕಿಫಾಕ್ಸ್‌ ಹರಡುವಿಕೆ ತಡೆಗೆ ವಿಶ್ವ ಆರೋಗ್ಯ ಸಂಸ್ಥೆ ಕರೆ

ನವದೆಹಲಿ, ಜುಲೈ 24: ಹರಡುತ್ತಿರುವ ಮಂಕಿಫಾಕ್ಸ್ ತಡೆಯಲು ಸಾರ್ವಜನಿಕ ಆರೋಗ್ಯ ಚಿಕಿತ್ಸೆ, ನಿಯಂತ್ರಣ ಕ್ರಮಗಳನ್ನು ಮತ್ತಷ್ಟು ಬಲಪಡಿಸಿಕೊಳ್ಳುವಂತೆ ತನ್ನ ಸದಸ್ಯ ರಾಷ್ಟ್ರಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ವಲಯದ ಪ್ರಾದೇಶಿಕ ನಿರ್ದೇಶಕಿ ಡಾ.ಪೂನಂ ಖೇತ್ರಪಾಲ್ ಸಿಂಗ್ ಭಾನುವಾರ ಸೂಚಿಸಿದ್ದಾರೆ.

ವೇಗವಾಗಿ ಹರಡುತ್ತಿರುವ ಈ ಮಂಕಿಫಾಕ್ಸ್‌ ಕುರಿತು ಕಳವಳ ವ್ಯಕ್ತಪಡಿಸಿರುವ ಆರೋಗ್ಯ ಸಂಸ್ಥೆ ಈ ರೋಗವನ್ನು ಅಂತರರಾಷ್ಟ್ರೀಯ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ.

ಜಾಗತಿಕವಾಗಿ ಸುಮಾರು 75 ದೇಶಗಳಲ್ಲಿ ಈವರೆಗೆ 16,000ಗಿಂತ ಅಧಿಕ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಮಂಕಿಪಾಕ್ಸ್‌ ವೇಗವಾಗಿ ವ್ಯಾಪಿಸುತ್ತಿರುವುದು ಖಚಿತವಾಗಿದೆ. ಆರೋಗ್ಯ ಸಂಸ್ಥೆ ಪ್ರಕಾರ, ಆಗ್ನೇಯ ಏಷ್ಯಾದಲ್ಲಿ ಪತ್ತೆಯಾದ ನಾಲ್ಕು ಮಂಕಿಫಾಕ್ಸ್ ಪ್ರಕರಣಗಳ ಪೈಕಿ ಮೂರು ಭಾರತ ಮತ್ತು ಒಂದು ಥೈಲ್ಯಾಂಡ್‌ ದೇಶದಲ್ಲಿ ವರದಿಯಾಗಿದೆ.

The World Health Organization Calls for the Prevention of Spreading Monkeypox

ಜಾಗತಿಕವಾಗಿ ಮಂಕಿಫಾಕ್ಸ್‌ ಕಡಿವಾಣ ಕುರಿತು ಶನಿವಾರ ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕರ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಆರೋಗ್ಯ ನಿಯಮಗಳ (ಐಎಚ್ಆರ್) ತುರ್ತು ಸಮಿತಿ ಜತೆಗೆ ಸಭೆ ನಡೆಸಲಾಗಿದೆ. ಜಾಗತಿಕವಾಗಿ ಮಂಕಿಫಾಕ್ಸ್ ರೋಗದ ಅಪಾಯ ಮಧ್ಯಮವಾಗಿದ್ದರೂ, ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡುವಿಕೆಯ ಪ್ರಮಾಣ ಹೆಚ್ಚಾಗಿರುವುದು ಕಂಡು ಬಂದಿದೆ.

ಮಂಕಿಫಾಕ್ಸ್‌ ಜತೆಗೆ ಕೊರೋನಾದ ವೈರಸ್‌ನ ಹಲವು ಪ್ರಬೇಧಗಳು ಇದ್ದು ನಾವೆಲ್ಲರೂ ಜಾಗರೂಕರಾಗಿ ಇರಬೇಕು. ಆರೋಗ್ಯ ಎಚ್ಚರಿಕೆ ವಹಿಸಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡಾ ಖೇತ್ರಪಾಲ್ ಸಿಂಗ್ ಹೇಳಿದರು.

ಮಂಕಿಫಾಕ್ಸ್‌ ಹೆಚ್ಚಾಗುತ್ತಿರುವ ಹಿನ್ನೆಲೆ ಅದರ ಅಪಾಯವನ್ನು ಪೂರ್ವವಾಗಿ ನಿರ್ಧರಿಸಲು ಆರೋಗ್ಯ ತಪಾಸಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಪರೀಕ್ಷೆ ಪ್ರಮಾಣ ಹೆಚ್ಚಿಸಬೇಕು. ಎಲ್ಲ ದೇಶಗಳಲ್ಲಿ ತೀವ್ರ ನಿಗಾ ವಹಿಸಬೇಕು. ಮಂಕಿಫಾಕ್ಸ್ ಗಾಗಿ ನಿಗದಿತ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳಲ್ಲಿ ಕ್ಲಿನಿಕಲ್ ನಿರ್ವಹಣೆ ಮತ್ತು ಸೋಂಕು ತಡೆಗಟ್ಟುವಿಕೆ ಕ್ರಮಗಳನ್ನು ಬಲಪಡಿಸಬೇಕುದೆ ಎಂದು ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+