ಕೆಜಿಗೆ 162 ರೂಪಾಯಿಗೆ ಏರಿದ ಚಿಲ್ಲರೆ ಟೊಮ್ಯಾಟೊ ಬೆಲೆ!: ಎಲ್ಲೆಲ್ಲೇ ಎಷ್ಟು ಬೆಲೆ ತಿಳಿಯಿರಿ
ನವದೆಹಲಿ, ಜುಲೈ. 07: ತರಕಾರಿ ಮಾರುಕಟ್ಟೆಯಲ್ಲಿ ಈಗ ಕೆಂಪು ಸುಂದರಿ ಟೊಮ್ಯಾಟೊದ್ದೆ ಸುದ್ದಿ. ದಿನ ದಿನಕ್ಕೂ ಬೆಲೆ ಹೆಚ್ಚಾಗುತ್ತಲೇ ಇದ್ದು, ದೇಶದ ಹಲವು ಭಾಗಗಳಲ್ಲಿ ಮಳೆಯಿಂದಾಗಿ ಟೊಮ್ಯಾಟೊ ಪೂರೈಕೆ ಕಡಿಮೆಯಾಗಿದೆ. ಇದರ ಹಿನ್ನೆಲೆ ದೇಶಾದ್ಯಂತ ಗುರುವಾರ ಚಿಲ್ಲರೆ ಬೆಲೆಗಳು ಕೆಜಿಗೆ 162 ರೂಪಾಯಿಗೆ ಏರಿಕೆಯಾಗಿದೆ.
ಮಹಾನಗರಗಳಲ್ಲಿ ಚಿಲ್ಲರೆ ಟೊಮ್ಯಾಟೊ ಬೆಲೆಗಳು ಕೋಲ್ಕತ್ತಾದಲ್ಲಿ ಪ್ರತಿ ಕೆಜಿಗೆ 152 ರೂಪಾಯಿ, ದೆಹಲಿಯಲ್ಲಿ ರೂ. 120, ಚೆನ್ನೈನಲ್ಲಿ ರೂ. 117 ಮತ್ತು ಮುಂಬೈನಲ್ಲಿ 108 ರೂಪಾಯಿಗೆ ಏರಿಕೆಯಾಗಿದೆ. ಅಖಿಲ ಭಾರತದಲ್ಲಿ ಸರಾಸರಿ ಚಿಲ್ಲರೆ ಟೊಮ್ಯಾಟೊ ಬೆಲೆ ಗುರುವಾರ ಕೆಜಿಗೆ 95.58 ರೂಪಾಯಿ. ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಪ್ರತಿ ಕೆಜಿಗೆ ಗರಿಷ್ಠ 162 ರೂ., ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಕನಿಷ್ಠ ದರ 31 ರೂಪಾಯಿ.

ದೇಶದ ಇತರ ಪ್ರಮುಖ ನಗರಗಳಲ್ಲಿ ಟೊಮ್ಯಾಟೊ ಬೆಲೆ ಹೆಚ್ಚೇ ಇತ್ತು. ಗುರುಗ್ರಾಮ್‌ನಲ್ಲಿ ಚಿಲ್ಲರೆ ಟೊಮ್ಯಾಟೊ ಬೆಲೆ ಕೆಜಿಗೆ 140 ರೂಪಾಯಿ, ಬೆಂಗಳೂರಿನಲ್ಲಿ ಕೆಜಿಗೆ 110 ರೂ., ವಾರಣಾಸಿಯಲ್ಲಿ ಕೆಜಿಗೆ 107 ರೂ., ಹೈದರಾಬಾದ್‌ನಲ್ಲಿ ಕೆಜಿಗೆ 98 ರೂ. ಮತ್ತು ಭೋಪಾಲ್‌ನಲ್ಲಿ 90 ರೂಪಾಯಿಯಿದೆ.
ಸಾಮಾನ್ಯವಾಗಿ, ಮಾನ್ಸೂನ್‌ನಿಂದಾಗಿ ಹೆಚ್ಚು ಹಾಳಾಗುವ ಸರಕು ಸರಬರಾಜುಗಳ ಕೊಯ್ಲು ಮತ್ತು ಸಾಗಣೆಯ ಮೇಲೆ ಪರಿಣಾಮ ಬೀರುವುದರಿಂದ ವರ್ಷದ ಜುಲೈ - ಆಗಸ್ಟ್ ಸಮಯದಲ್ಲಿ ಟೊಮ್ಯಾಟೊ ಬೆಲೆಗಳು ಹೆಚ್ಚಾಗುತ್ತವೆ.

''ತರಕಾರಿಗಳ ಬೆಲೆ ಸಾಕಷ್ಟು ಹೆಚ್ಚಾಗಿದೆ. ಟೊಮ್ಯಾಟೊ ಕೆಜಿಗೆ 150 ರೂಪಾಯಿಗೆ ಮಾರಾಟವಾಗುತ್ತಿದೆ. ಬೆಲೆ ಏರಿಕೆಯಿಂದ ಗ್ರಾಹಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಮಧ್ಯಪ್ರವೇಶಿಸಿ ತರಕಾರಿ ಬೆಲೆಯನ್ನು ಕ್ರಮಬದ್ಧಗೊಳಿಸಬೇಕೆಂದು ನಾವು ವಿನಂತಿಸುತ್ತೇವೆ" ಎಂದು ಗ್ರಾಹಕರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಎಎನ್‌ಐ ಉಲ್ಲೇಖಿಸಿದೆ.












Click it and Unblock the Notifications