ಶರ್ಟ್ ಹರಿಯುವಂತೆ ಪ್ರಾಂಶುಪಾಲರಿಗೆ ಥಳಿಸಿದ ಹಿಂದೂ ಸಂಘಟನೆಯ ಸದಸ್ಯರು
ಪುಣೆ, ಜುಲೈ 6: ಪುಣೆಯ ಶಾಲೆಯೊಂದರ ಪ್ರಾಂಶುಪಾಲರೊಬ್ಬರ ಮೇಲೆ ಹಿಂದುತ್ವ ಸಂಘಟನೆಗೆ ಸೇರಿದ ಕೆಲವರು ಶರ್ಟ್ ಹರಿಯುವಂತೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ವಿದ್ಯಾರ್ಥಿಗಳನ್ನು ಕ್ರಿಶ್ಚಿಯನ್ ಪ್ರಾರ್ಥನೆಯನ್ನು ಹಾಡಲು ಒತ್ತಾಯಿಸಿದ್ದಾರೆ ಹಾಗೂ ಹುಡುಗಿಯರ ಮತ್ತು ಹುಡುಗರ ವಾಶ್‌ರೂಮ್‌ಗಳ ನಡುವಿನ ಹಾದಿಯಲ್ಲಿ ಕ್ಲೋಸ್ಡ್-ಸರ್ಕ್ಯೂಟ್ ಟೆಲಿವಿಷನ್ ಕ್ಯಾಮೆರಾವನ್ನು ಅಳವಡಿಸಿದ್ದಾರೆ ಎಂದು ಆರೋಪಿಸಿ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಶಾಲೆಯೊಂದರ ಪ್ರಾಂಶುಪಾಲರ ಮೇಲೆ ಹಿಂದುತ್ವ ಸಂಘಟನೆಯ ಸದಸ್ಯರು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪುಣೆಯ ತಾಲೇಗಾಂವ್ ದಭಾಡೆ ಪಟ್ಟಣದ ಡಿವೈ ಪಾಟೀಲ್ ಪ್ರೌಢಶಾಲೆಯ ಪ್ರಾಂಶುಪಾಲರಾದ ಅಲೆಕ್ಸಾಂಡರ್ ಕೋಟ್ಸ್ ರೀಡ್ ಅವರನ್ನು "ಹರ್ ಹರ್ ಮಹಾದೇವ್" ಎಂದು ಕೂಗುತ್ತಾ ಗುಂಪೊಂದು ಹಿಂಬಾಲಿಸುತ್ತಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊ ತೋರಿಸುತ್ತದೆ.
ಹರಿದ ಅಂಗಿಯಲ್ಲಿ ರೀಡ್ ಕಟ್ಟಡದ ಮೆಟ್ಟಿಲುಗಳ ಮೇಲೆ ಪ್ರಾಂಶುಪಾಲರು ಓಡುತ್ತಿರುವುದು ಕಾಣಿಸಿಕೊಂಡಿದೆ. ಈ ವೇಳೆ ಸಮೂಹದಲ್ಲಿ ಒಬ್ಬ ವ್ಯಕ್ತಿಯು ಅವನ ಮೇಲೆ ಹಲ್ಲೆ ನಡೆಸಿದನು. ಆದರೆ ಇತರರು ಅವನನ್ನು ತಡೆದರು. ತಾಲೇಗಾಂವ್ ಎಂಐಡಿಸಿ ಪ್ರದೇಶದ ಪೊಲೀಸ್ ಇನ್ಸ್‌ಪೆಕ್ಟರ್ ರಂಜಿತ್ ಸಾವಂತ್ ಮಾತನಾಡಿ, ಕೆಲವು ಪೋಷಕರು, ಹಿಂದುತ್ವ ಸಂಘಟನೆಗೆ ಸೇರಿದ ಗುಂಪಿನೊಂದಿಗೆ ಸೇರಿಕೊಂಡು ರೀಡ್ ಮೇಲೆ ಹಲ್ಲೆ ನಡೆಸಿ ಬಟ್ಟೆ ಹರಿದಿದ್ದಾರೆ ಎಂದು ತಿಳಿಸಿದ್ದಾರೆ.
Alexander Reid, Principal, D Y Patil English High School, Ambi, was allegedly beaten up by B,ajrang goons for conducting Christian prayer 'Our Father who art in Heaven', every morning in school prayer. Several Hindu schools ask the students to utter veds, that never 1/2 pic.twitter.com/EgDKaflRu4
— Брат (@B5001001101) July 6, 2023
ಹಿಂದುತ್ವ ಸಂಘಟನೆಯವರು ಆಕ್ಷೇಪಿಸಿದ ಕ್ಲೋಸ್ಡ್-ಸರ್ಕ್ಯೂಟ್ ಟೆಲಿವಿಷನ್ ಕ್ಯಾಮೆರಾವು ಕ್ಯುಬಿಕಲ್‌ಗಳ ಒಳಗಿಲ್ಲ. ಬದಲಿಗೆ ಹೊರಭಾಗದ ಮಾರ್ಗದಲ್ಲಿದೆ ಎಂದು ಸಾವಂತ್ ಹೇಳಿದರು. ಪ್ರತಿದಿನ ಬೆಳಿಗ್ಗೆ ಕ್ರಿಸ್ತ್ರ ಪ್ರಾರ್ಥನೆಯನ್ನು ಹಾಡಲು ವಿದ್ಯಾರ್ಥಿಗಳನ್ನುಒತ್ತಾಯಿಸಲಾಯುತು. ಇದು 'ಓ ಲಾರ್ಡ್' ಎಂದು ಪ್ರಾರಂಭವಾಗುವ ಸಾಮಾನ್ಯ ಪ್ರಾರ್ಥನೆಯಾಗಿದೆ. ಇದು ಬೈಬಲ್‌ನಿಂದ ಒಂದು ಪದ್ಯ. ಆದರೆ ಪ್ರಾರ್ಥನೆಯಲ್ಲಿ ಮತಾಂತರದ ಸುಳಿವು ಅಥವಾ ಬೈಬಲ್‌ನಿಂದ ಏನೂ ಇಲ್ಲ ಎಂದರು.
ಪೋಷಕರು ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಅಧಿಕಾರಿಗಳು ಈ ವಿಷಯದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಶಾಲೆಯು ದೂರು ದಾಖಲಿಸಿಲ್ಲ, ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ನಾವು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಹೇಳಿದರು.












Click it and Unblock the Notifications