ಭಾರತದ ರಾಷ್ಟ್ರಪತಿ ಅಯ್ಕೆ ಹೇಗೆ? ಎಲೆಕ್ಟ್ರೋಲ್ ಕಾಲೇಜ್ ಹೇಗಿದೆ?
ಪ್ರಣಬ್ ಮುಖರ್ಜಿ ಅವರ ರಾಷ್ಟ್ರಪತಿ ಅಧಿಕಾರ ಅವಧಿ ಜುಲೈನಲ್ಲಿ ಅಂತ್ಯಗೊಳ್ಳಲಿದ್ದು, ಹೊಸ ರಾಷ್ಟ್ರಪತಿಯನ್ನು ಭಾರತದ ಜನಪ್ರತಿನಿಧಿಗಳು ಆಯ್ಕೆ ಮಾಡಲಿದ್ದಾರೆ? ಭಾರತದ ರಾಷ್ಟಪತಿ ಅಯ್ಕೆಗೆ ಯಾರೆಲ್ಲ ಮತದಾನ ಮಾಡ್ತಾರೆ?
ನವದೆಹಲಿ, ಮೇ 16: ಪ್ರಣಬ್ ಮುಖರ್ಜಿ ಅವರ ರಾಷ್ಟ್ರಪತಿ ಅಧಿಕಾರ ಅವಧಿ ಜುಲೈನಲ್ಲಿ ಅಂತ್ಯಗೊಳ್ಳಲಿದ್ದು, ಹೊಸ ರಾಷ್ಟ್ರಪತಿಯನ್ನು ಭಾರತದ ಜನಪ್ರತಿನಿಧಿಗಳು ಆಯ್ಕೆ ಮಾಡಲಿದ್ದಾರೆ? ಭಾರತದ ರಾಷ್ಟಪತಿ ಅಯ್ಕೆಗೆ ಮತದಾನ ಮಾಡುವ ಜನಪ್ರತಿನಿಧಿಗಳ ಸಂಖ್ಯೆ ಎಷ್ಟು electrol college ಹೇಗಿದೆ? ಮುಂದೆ ಓದಿ...
ಏಲೆಕ್ಟ್ರೋಲ್ ಕಾಲೇಜ್ ಎಂದರೆ ಯಾವುದೇ ಸ್ಥಳವಲ್ಲ. ಬದಲಿಗೆ ರಾಷ್ಟ್ರಪತಿ/ಉಪ ರಾಷ್ಟ್ರಪತಿ ಆಯ್ಕೆಗೆ ಜನಪ್ರತಿನಿಧಿಗಳ ಒಟ್ಟಾರೆ ಸಮೂಹ ಒಕ್ಕೂಟ ವ್ಯವಸ್ಥೆಯಲ್ಲಿ ಆಯ್ಕೆ ಮಾಡುವ ವಿಧಾನ.
ಈ ಎಲೆಕ್ಟ್ರೋಲ್ ಕಾಲೇಜ್ ಲೋಕಸಭಾ, ರಾಜ್ಯಸಭಾ, ವಿಧಾನಸಭಾ ಸದಸ್ಯರನ್ನು ಒಳಗೊಂಡಿರುತ್ತದೆ. ಎಲ್ಲಾ ರಾಜ್ಯಗಳಲ್ಲದೆ, ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ ಮತ್ತು ಪಾಂಡಿಚೇರಿಯ ಶಾಸಕರೂ ಈ ಚುನಾವಣೆಯಲ್ಲಿ ಭಾಗವಹಿಸುತ್ತಾರೆ.
ಎಲೆಕ್ಟ್ರೋಲ್ ಮತಗಳು: ಎಲೆಕ್ಟ್ರೋಲ್ ಕಾಲೇಜಿನ ಒಟ್ಟು ಮತಗಳು 10.98 ಲಕ್ಷ. ರಾಷ್ಟ್ರಪತಿ ಆಯ್ಕೆಗೆ ಬೇಕಾಗಿರುವ ಸರಳ ಬಹುಮತ 5.49 ಲಕ್ಷ ಎಲೆಕ್ಟ್ರೋಲ್ ಮತಗಳು.
ಲೋಕಸಭೆ ಮತ್ತು ರಾಜ್ಯಸಭೆಯ ಒಬ್ಬ ಸದಸ್ಯರ ಮತದ ಮೌಲ್ಯ 708 ಎಲೆಕ್ಟ್ರೋಲ್ ಮತಗಳು.ಶಾಸಕರ ಎಲೆಕ್ಟ್ರೋಲ್ ಮತಗಳ ಮೌಲ್ಯ ಆಯಾ ರಾಜ್ಯದ ಜನಸಂಖ್ಯೆಗೆ ಮತ್ತು ಶಾಸಕರ ಸಂಖ್ಯೆಗೆ ತಕ್ಕಂತೆ ಭಿನ್ನವಾಗಿರುತ್ತದೆ. ಆಯಾ ರಾಜ್ಯದ ಒಟ್ಟು ಜನಸಂಖ್ಯೆಯನ್ನು ರಾಜ್ಯದ ಒಟ್ಟು ಶಾಸಕರ ಸಂಖ್ಯೆಯಿಂದ ಭಾಗಿಸಿದಾಗ ಬರುವ ಶೇಷವನ್ನು ಪುನಃ 1000 ದಿಂದ ಭಾಗಿಸಿದಾಗ ಬರುವ ಉತ್ತರವೇ ಆ ರಾಜ್ಯದ ಒಬ್ಬ ಶಾಸಕನ ಎಲೆಕ್ಟ್ರೋಲ್ ವೋಟಿನ ಮೌಲ್ಯವಾಗಿರುತ್ತದೆ.
ಬಿಜೆಪಿಗೆ ರಾಷ್ಟ್ರಪತಿ ಆಯ್ಕೆಗೆ ಅಗತ್ಯವಿರುವ 17,500 ಮತಗಳ ಕೊರತೆ ಉಂಟಾಗುತ್ತಿದೆ.ಬಿಜೆಪಿ ಬಳಿ ಇರುವ ಎಲೆಕ್ಟ್ರೋಲ್ ಮತಗಳು 5.32 ಲಕ್ಷ. ಎಐಎಡಿ ಎಂಕೆ ಮತ್ತು ಬಿಜೆಡಿ ಪಕ್ಷಗಳು ಬೆಂಬಲ ನೀಡಿದರೆ ಬಿಜೆಪಿ 6.28 ಎಲೆಕ್ಟ್ರೋಲ್ ವೋಟುಗಳನ್ನು ಪಡೆಯುತ್ತದೆ.
ಜುಲೈ 25 ರಂದು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಉತ್ತರಾಧಿಕಾರಿ ಎಂದು ದ್ರೌಪದಿ ಮುರ್ಮು ಸಾಧ್ಯತೆಯಿದೆ. ಆದರೆ, ವಿಪಕ್ಷಗಳು ಲೋಕಸಭಾ ಮಾಜಿ ಸ್ಪೀಕರ್ ಮೀರಾಕುಮಾರಿ ಅವರನ್ನು ಕಣಕ್ಕಿಳಿಸುವ ತಂತ್ರ ರೂಪಿಸಿವೆ.
ರಾಷ್ಟ್ರಪತಿ ಚುನಾವಣೆಗೂ ಸಂಬಂಧವೇ ಇಲ್ಲ ಎಂಬಂತೆ ತಟಸ್ಥವಾಗಿರುವ ಬಿಜು ಜನತಾ ದಳ, ಡಿಎಂಕೆ ಮತ್ತು ವೈಎಸ್ ಆರ್ ಕಾಂಗ್ರೆಸ್ ನಂಥ ಪಕ್ಷಗಳು ಇದೀಗ ರಾಷ್ಟ್ರಪತಿ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿದೆ.

| ಸಂಖ್ಯೆ. | ರಾಜ್ಯ/ಕೇಂದ್ರಾಡಳಿತ ಪ್ರದೇಶ | ಶಾಸಕರು | ಜನಸಂಖ್ಯೆ | ಮತದ ಮೌಲ್ಯ | ಒಟ್ಟು ಮತದ ಮೌಲ್ಯ |
|---|---|---|---|---|---|
| 1 | Andhra Pradesh | 175 | 43,502,708 | 248 | 43400 |
| 2 | Arunachal Pradesh | 60 | 467,511 | 8 | 480 |
| 3 | Assam | 126 | 14,625,152 | 116 | 14,616 |
| 4 | Bihar | 243 | 42,126,236 | 173 | 42,039 |
| 5 | Chhattisgarh | 90 | 11,637,494 | 129 | 11,610 |
| 6 | Delhi | 70 | 4,065,698 | 58 | 4,060 |
| 7 | Goa | 40 | 795,120 | 20 | 800 |
| 8 | Gujarat | 182 | 26,697,475 | 147 | 26,754 |
| 9 | Haryana | 90 | 10,036,808 | 112 | 10,080 |
| 10 | Himachal Pradesh | 68 | 3,460,434 | 51 | 3468 |
| 11 | Jammu and Kashmir | 87 | 6,300,000 | 72 | 6,264 |
| 12 | Jharkhand | 81 | 14,227,133 | 176 | 14,256 |
| 13 | Karnataka | 224 | 29,299,014 | 131 | 29,344 |
| 14 | Kerala | 140 | 21,347,375 | 152 | 21,280 |
| 15 | Madhya Pradesh | 230 | 30,016,625 | 131 | 30,130 |
| 16 | Maharashtra | 288 | 50,412,235 | 175 | 50,400 |
| 17 | Manipur | 60 | 1,072,753 | 18 | 1,080 |
| 18 | Meghalaya | 60 | 1,011,699 | 17 | 1,020 |
| 19 | Mizoram | 40 | 332,390 | 8 | 320 |
| 20 | Nagaland | 60 | 516,499 | 9 | 540 |
| 21 | Odisha | 147 | 21,944,615 | 149 | 21,903 |
| 22 | Puducherry | 30 | 471,707 | 16 | 480 |
| 23 | Punjab | 117 | 13,551,060 | 116 | 13,572 |
| 24 | Rajasthan | 200 | 25,765,806 | 129 | 25,800 |
| 25 | Sikkim | 32 | 209,843 | 7 | 224 |
| 26 | Tamil Nadu | 234 | 41,199,168 | 176 | 41,184 |
| 27 | Telangana | 119 | 43,502,708 | 148 | 17612 |
| 28 | Tripura | 60 | 1,556,342 | 26 | 1,560 |
| 29 | Uttar Pradesh | 403 | 83,849,905 | 208 | 83,824 |
| 30 | Uttarakhand | 70 | 4,491,239 | 64 | 4,480 |
| 31 | West Bengal | 294 | 44,312,011 | 151 | 44,394 |
| Total | 4,120 | 549,302,055 | 549,474 |
(ಒನ್ಇಂಡಿಯಾ ಸುದ್ದಿ)
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications