Tesla Car: ಇನ್ಮುಂದೆ ಭಾರತದಲ್ಲೂ ಟೆಸ್ಲಾ ಕಾರು, ಯಾವಾಗಿನಿಂದ ಹಾಗೂ ಸ್ಥಾವರ ಸ್ಥಾಪನೆ ಯಾವ ರಾಜ್ಯದಲ್ಲಿ?
ಮೈಸೂರು, ಏಪ್ರಿಲ್, 04: ವಿದೇಶಿ ನಿರ್ಮಿತ, ಎಲಾನ್ ಮಾಲಿಕತ್ವದ ಐಷಾರಾಮಿ ಟೆಸ್ಲಾ ಕಾರು ಭಾರತದ ಹಲವು ನಗರಗಳಲ್ಲಿ ಸಂಚಾರ ಮಾಡಿರುವ ವಿಡಿಯೋ ಈಗಾಗಲೇ ಎಲ್ಲೆಡೆ ವೈರಲ್ ಆಗಿದ್ದವು. ಅದರಲ್ಲೂ ಐಟಿ ಹಬ್ ಬೆಂಗಳೂರು, ಮೈಸೂರಿ ಚಾಮುಂಡಿ ಬೆಟ್ಟದ ಮುಂದೆಯೂ ಕೂಡ ಈ ಸಂಚರಿಸಿದ ವಿಡಿಯೋ ಭಾರೀ ಸದ್ದು ಮಾಡಿತ್ತು. ಅಲ್ಲದೆ ಇದೀಗ ಈ ಐಷಾರಾಮಿ ಕಾರು ಘಟಕವನ್ನು ಭಾರತದಲ್ಲೂ ನಿರ್ಮಾಣ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಯಾವಾಗಿನಿಂದ ಹಾಗೂ ಯಾವ ರಾಜ್ಯದಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಇನ್ನು ಅಮೆರಿಕಾದ ಐಷಾರಾಮಿ ಕೆಂಪು ಬಣ್ಣದ ಟೆಸ್ಲಾ ಕಾರು ಇತ್ತೀಚೆಗಷ್ಟೇ ಬೆಂಗಳೂರಿನ ರಸ್ತೆಗಳು ಕಾಣಿಸಿಕೊಂಡಿದ್ದು, ಈ ವಿಡಿಯೋ ಭಾರೀ ಸದ್ದು ಮಾಡಿತ್ತು. ಅಷ್ಟೇ ಅಲ್ಲದೆ ನಂತರ ಮೈಸೂರು ಚಾಮುಂಡಿ ಬೆಟ್ಟದಲ್ಲೂ ಈ ಕಾರು ಕಾಣಿಸಿಕೊಂಡಿದ್ದು, ಈ ವಿಡಿಯೋವೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಇದೀಗ ಈ ಐಷಾರಾಮಿ ಈವಿ ಕಾರು ಘಟಕ ಸ್ಥಾಪನೆ ಭಾರತದಲ್ಲೇ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಭಾರತ ಸರ್ಕಾರವು ಕೆಲವು ದಿನಗಳ ಹಿಂದೆ ತನ್ನ ಹೊಸ ಎಲೆಕ್ಟ್ರಿಕ್ ವಾಹನ ನೀತಿಯನ್ನು ಘೋಷಣೆ ಮಾಡಿದ್ದು, ಪ್ರಸಿದ್ಧ, ಐಷಾರಾಮಿ ಇವಿ ಕಂಪನಿ ಟೆಸ್ಲಾ ಕಾರು ಭಾರತಕ್ಕೆ ಬರಲಿದೆ ಎನ್ನುವ ಒಪ್ಪಂದವೂ ಕೂಡ ಆಗಿತ್ತು. ಅದರಂತೆಯೇ ಮುಂದಿನ ತಿಂಗಳು ಅಂದರೆ ಮೇನಲ್ಲಿ ಇದರ ಸ್ಥಾವರ ಸ್ಥಾಪನೆ ಆಗಲಿದೆ ಎನ್ನುವ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.
ಟೆಸ್ಲಾ ತಂಡವೊಂದು ಏಪ್ರಿಲ್ ಅಂತ್ಯದಲ್ಲಿ ಭಾರತಕ್ಕೆ ಆಗಮಿಸಲಿದೆ. ಭಾರತದಲ್ಲಿ ಇದರ ಘಟಕಗಳ ನಿರ್ಮಾಣಕ್ಕೆ ಅತ್ಯಂತ ಸೂಕ್ತವಾದ ಸ್ಥಳವನ್ನು ಕಂಡುಹಿಡಿಯುವುದು ಈ ತಂಡದ ಕೆಲಸ ಆಗಿದೆ. ಈ ತಂಡದ ಕಣ್ಣು ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡಿನ ಮೇಲೆ ಹೆಚ್ಚು ನೆಟ್ಟಿದೆ ಎಂದು ಹೇಳಲಾಗುತ್ತಿದೆ.
ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಕಾರು ಭಾರತದಲ್ಲಿ ಸುಮಾರು 2ರಿಂದ 3 ಬಿಲಿಯನ್ ಡಾಲರ್ ಮೊತ್ತದ ಸ್ಥಾವರವನ್ನು ಸ್ಥಾಪಿಸುವ ಯೋಜನೆಯನ್ನು ಸಿದ್ಧಪಡಿಸಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.
ಇನ್ನು ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಒಂದು ತಂಡವು ಇದೇ ತಿಂಗಳ ಅಂತ್ಯದಲ್ಲಿ ಭಾರತಕ್ಕೆ ಬರುತ್ತಿದೆ. ಪ್ರಸಿದ್ಧ ಎಲೆಕ್ಟ್ರಿಕ್ ವಾಹನ ತಯಾರಕ ಟೆಸ್ಲಾ ಅವರ ಈ ತಂಡವು ಸ್ಥಾವರಕ್ಕೆ ಅತ್ಯಂತ ಸೂಕ್ತವಾದ ಸ್ಥಳ ಹುಡುಕಲು ಹಲವಾರು ರಾಜ್ಯಗಳಿಗೆ ಭೇಟಿ ನೀಡಲಿದೆ. ಆಟೋಮೊಬೈಲ್ ಉದ್ಯಮವು ಈಗಾಗಲೇ ಅಸ್ತಿತ್ವದಲ್ಲಿರುವ ರಾಜ್ಯಗಳು ಟೆಸ್ಲಾ ಮೊದಲ ಆದ್ಯತೆ ಆಗಿದೆ.












Click it and Unblock the Notifications