ಪಿಡಿಪಿ ಶಾಸಕನ ಮನೆ ಮೇಲೆ ಗ್ರೆನೇಡ್ ದಾಳಿ

ಶ್ರೀನಗರ, ಅಕ್ಟೋಬರ್ 20 : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ತ್ರಾಲ್ ನಲ್ಲಿ ಮತ್ತೋರ್ವ ಪಿಡಿಪಿ ಶಾಸಕನ ನಿವಾಸದ ಮೇಲೆ ಉಗ್ರರು ಶುಕ್ರವಾರ ಗ್ರೆನೇಡ್ ದಾಳಿ ನಡೆಸಿದ್ದಾರೆ.

ಪಿಡಿಪಿ ಶಾಸಕ ಮುಸ್ತಾಕ್ ಅಹಮ್ಮದ್ ಅವರ ಮನೆಯ ಮೇಳೆ ಶಂಕಿತ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದಾರೆ. ಗ್ರೆನೇಡ್ ದಾಳಿ ನಡೆಸುವುದರೊಂದಿಗೆ ಗುಂಡಿನ ದಾಳಿಯನ್ನೂ ನಡೆಸಿದ್ದು, ಭದ್ರತಾ ಸಿಬ್ಬಂದಿಗಳು ಗುಂಡಿನ ದಾಳಿಗೆ ಪ್ರತಿ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಯಾವುದೇ ಜೀವ ಹಾನಿ ಬಗ್ಗೆ ವರದಿಯಾಗಿಲ್ಲ.

J&K: Terrorists hurl grenade at PDP MLA Mushtaq Ahmad's house

ದಾಳಿ ನಡೆಸಿದವರನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೆಪ್ಟೆಂಬರ್ 21 ರಂದು ಉಗ್ರಗಾಮಿಗಳು ಜಮ್ಮು ಮತ್ತು ಕಾಶ್ಮೀರದ ಸಚಿವ ಮತ್ತು ಪಿಡಿಪಿ ನಾಯಕ ನಯೀಮ್ ಅಖ್ತಾರ್ ಅವರ ನಿವಾಸದ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+