ಸೇನೆ ಮತ್ತು ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ಉಗ್ರರ ದಾಳಿ
ಅನಂತ್ ನಾಗ್ (ಜಮ್ಮು ಮತ್ತು ಕಾಶ್ಮೀರ), ಜೂನ್ 17 : ಅನಂತ್ ನಾಗ್ ಜಿಲ್ಲೆಯ ಬಿಜ್ ಬೆಹರಾ ಎಂಬಲ್ಲಿ ಉಗ್ರರು ಭಾರತೀಯ ಸೇನೆ ಮತ್ತು ಸಿಆರ್ ಪಿಎಫ್ ಕ್ಯಾಂಪ್ ಮೇಲೆ ಶನಿವಾರ ದಾಳಿ ಮಾಡಿದ್ದಾರೆ.
ಯಾವುದೇ ಪ್ರಾಣಹಾನಿ ಅಥವಾ ಗಾಯಗೊಂಡಿರುವ ಬಗ್ಗೆ ಯಾವುದೇ ವರದಿ ಬಂದಿಲ್ಲ. ಈ ದಾಳಿಯಲ್ಲಿ ಎಷ್ಟು ಉಗ್ರರು ಭಾಗಿಯಾಗಿದ್ದರು ಎಂಬ ಬಗ್ಗೆ ಕೂಡ ಯಾವುದೇ ನಿಖರ ಮಾಹಿತಿ ಬಂದಿಲ್ಲ.

ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಕೂಡ ತಿರುಗೇಟು ನೀಡುತ್ತಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಇದೇ ಜಿಲ್ಲೆಯ ಅಚಬಲ್ ಎಂಬಲ್ಲಿ ಶುಕ್ರವಾರ ನಡೆಸಲಾಗಿದ್ದ ಬರ್ಬರ ದಾಳಿಯಲ್ಲಿ 6 ಭಾರತೀಯ ಪೊಲೀಸರು ಹತ್ಯೆಗೀಡಾಗಿದ್ದಾರೆ. ಲಷ್ಕರ್ ಉಗ್ರ ಜುನೈದ್ ಮಟ್ಟೂ ಹತ್ಯೆಯ ಹಿಂದೆಯೇ ಈ ಹತ್ಯಾಕಾಂಡ ನಡೆದಿದೆ. ಹತ್ಯೆಗೀಡಾದ ಇಬ್ಬರು ಪೊಲೀಸರ ಮುಖವನ್ನು ಕಲ್ಲಿನಿಂದ ಜಜ್ಜಲಾಗಿದೆ ಮತ್ತು ಮುಖಕ್ಕೆ ಗುಂಡಿನ ಸುರಿಮಳೆ ಮಾಡಲಾಗಿದೆ.












Click it and Unblock the Notifications